ಹುತಾತ್ಮ ಸೈನಿಕರಿಗೆ ಅಂತಿಮ ನಮನ ಸಲ್ಲಿಸಿದ ಭಾರತ

Written By:
Subscribe to Oneindia Kannada

ಶ್ರೀನಗರ, ಸೆ. 18: ಜಮ್ಮು ಮತ್ತು ಕಾಶ್ಮೀರದ ಉರಿ ನಗರದಲ್ಲಿ ಭಾನುವಾರ ಬೆಳಗ್ಗೆ ಉಗ್ರರ ಕುತಂತ್ರಕ್ಕೆ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಸೋಮವಾರ ಅಂತಿಮ ನಮನ ಸಲ್ಲಿಕೆ ಮಾಡಲಾಯಿತು.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸೈನ್ಯದ ಮುಖ್ಯಸ್ಥರು ನವದೆಹಲಿಯಲ್ಲಿ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡಿದರು.[ಜಮ್ಮು: 17 ಯೋಧರು ಹುತಾತ್ಮ, 4 ಉಗ್ರರು ಹತ್ಯೆ]

ವಿಶ್ವಸಂಸ್ಥೆ ಸೇರಿದಂತೆ ಪ್ರತಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ರಾಜತಾಂತ್ರಿಕವಾಗಿ ಪಾಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳವುವಂತೆ ಒತ್ತಾಯಿಸಲು ನಿರ್ಧರಿಸಲಾಯಿತು. ಪಾಕ್ ಕೃತ್ಯದ ಬಗ್ಗೆ ಸಾಕ್ಷಿ ಆಧಾರಗಳು ದೊರೆತಿದ್ದು ಅದನ್ನು ಜಗತ್ತಿನ ಮುಂದೆ ಇಡಲಾಗುವುದು ಎಂದು ಹೇಳಲಾಯಿತು.

ಹಣಕಾಸು ಸಚಿವ ಅರುಣ್‌ ಜೇಟ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊಬಾಲ್‌, ಭೂಸೇನಾ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಹಾಗೂ ಕೆಲ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಯೋಧರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. (ಪಿಟಿಐ ಚಿತ್ರಗಳು)

ತಾಜ್ ಮಹಲ್ ಗೆ ಭದ್ರತೆ

ತಾಜ್ ಮಹಲ್ ಗೆ ಭದ್ರತೆ

ಉಗ್ರರ ದಾಳಿ ಹಿನ್ನೆಲೆಯಲ್ಲಿ ನವದೆಹಲಿಯ ಆಗ್ರಾದ ವಿಶ್ವ ವಿಖ್ಯಾತ ತಾಜ್ ಮಹಲ್ ಗೆ ಮಿಲಿಟರಿ ಭದ್ರತೆ ಒದಗಿಸಲಾಗಿದೆ.

ಸಭೆ ಮುಗಿಯಿತು

ಸಭೆ ಮುಗಿಯಿತು

ನವದೆಹಲಿಯಲ್ಲಿ ನಡೆದ ಕೇಂದ್ರ ಕ್ಯಾಬಿನೆಟ್ ದರ್ಜೆ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸಭೆ ನಂತರ ಹೊರಕ್ಕೆ ಬಂದ ಸೇನಾ ಮುಖ್ಯಸ್ಥ ಜೆನರಲ್ ದಲ್ಬೀರ್ ಸಿಂಗ್

ಯೋಧರಿಗೆ ನಮನ

ಯೋಧರಿಗೆ ನಮನ

ಉರಿ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಅಂತಿಮ ನಮನ ಸಲ್ಲಿಕೆ ಮಾಡಿದ ಸೈನಿಕರು. ಶ್ರೀನಗರದ ಚಿತ್ರ.

ಅಮರ ಯೋಧರು

ಅಮರ ಯೋಧರು

ಉರಿ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಅಂತಿಮ ನಮನ ಸಲ್ಲಿಕೆ ಮಾಡಿದರು.

ಆಕ್ರಂದನ ಕೇಳುವವರು ಯಾರು?

ಆಕ್ರಂದನ ಕೇಳುವವರು ಯಾರು?

ಉಗ್ರ ದಾಳಿಗೆ ಬಲಿಯಾದ ಹವಾಲ್ದಾರ್ ರವಿ ಅವರ ಪತ್ನಿಯ ಆಕ್ರಂದನಕ್ಕೆ ಉತ್ತರ ಹೇಳುವವರು ಯಾರು? ಸಾಂಬಾ ಸಮೀಪದ ಸರ್ವಾದ ಚಿತ್ರ ಎಂಥವರ ಕಣ್ಣಲ್ಲೂ ನೀರು ತರಿಸದೇ ಇರದು.

ಅಪ್ಪಾ ನಮ್ಮ ಬಿಟ್ಟು ಹೋದೆಯಾ?

ಅಪ್ಪಾ ನಮ್ಮ ಬಿಟ್ಟು ಹೋದೆಯಾ?

ಉಗ್ರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಹವಾಲ್ದಾರ್ ರವಿ ಅವರ ಮಕ್ಕಳು ತಂದೆಯ ಭಾವಚಿತ್ರ ಹಿಡಿದು ನಿಂತ ಕ್ಷಣ.

ಶಾಂತಿ ಬೇಕು

ಶಾಂತಿ ಬೇಕು

ಉಗ್ರ ದಾಳಿಯನ್ನು ಖಂಡಿಸಿ ರಾಂಚಿಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಶಾಂತಿ ಸ್ಥಾಪನೆಗೆ ಆಗ್ರಹ ಮಾಡಿದರು.

ಪತಿ ಕಳೆದುಕೊಂಡ ನೋವು

ಪತಿ ಕಳೆದುಕೊಂಡ ನೋವು

ಉಗ್ರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಸೈನಿಕ ಸುನೀಲ್ ಕುಮಾರ್ ಅವರ ಪತ್ನಿಯ ಆಕ್ರಂದನ, ಗಯಾದ ಚಿತ್ರ.

ಪ್ರಧಾನಿ ಸಭೆ

ಪ್ರಧಾನಿ ಸಭೆ

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸೈನ್ಯದ ಮುಖ್ಯಸ್ಥರು ನವದೆಹಲಿಯಲ್ಲಿ ಸಭೆ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: A senior Police officer paying tribute to the soldiers killed in Uri attack, at a ceremony in Srinagar on Monday. Prime Minister Narendra Modi with Home Minister Rajnath Singh at a High Level Meeting in the wake of Uri terror attack, in New Delhi on Monday.
Please Wait while comments are loading...