ಚಿತ್ರ ಸುದ್ದಿ: ದಲೈಲಾಮಾ ಭೇಟಿ, ಸೈನಿಕರ ಕಸರತ್ತು
ನವದೆಹಲಿ, ಜ. 20: ಟಿಬೇಟಿಯನ್ ಧರ್ಮಗುರು ದಲೈಲಾಮಾ ನವದೆಹಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು, ಮಹಾರಾಷ್ಟ್ರದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಮುಂಬೈ ನಲ್ಲಿ ಬೀದಿ ಗುಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ ಕೈಗೊಂಡರು...
ಬಾಲಿವುಡ್ ನ ಹಿರಿಯ ನಟ ಶತ್ರುಘ್ನ ಸಿನ್ಹಾ ಮಗನ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡ ಗಣ್ಯರು, ಗಣರಾಜ್ಯೋತ್ಸವ ಪೂರ್ವಭಾವಿಯಾಗಿ ಸೈನಿಕರ ಕಸರತ್ತು. ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್ ಸಂಭ್ರಮ..
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಇಡೀ ದಿನದ ವಿದ್ಯಮಾನಗಳ ಮೇಲೆ ಒಂದು ನೋಟ ಇಲ್ಲಿದೆ. ಚಿತ್ರಗಳ ಮೂಲಕ ಚಿಕ್ಕ ಚಿಕ್ಕ ಸುದ್ದಿಗಳನ್ನು ಕಟ್ಟಿಕೊಡುವ ಪ್ರಯತ್ನ.

ದಲೈಲಾಮಾ ಭೇಟಿ
ಟಿಬೇಟಿಯನ್ ಧರ್ಮಗುರು ದಲೈಲಾಮಾ ನವದೆಹಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸ್ವಚ್ಛತಾ ಅಭಿಯಾನ
ಮಹಾರಾಷ್ಟ್ರದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಮುಂಬೈ ನಲ್ಲಿ ಬೀದಿ ಗುಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ ಕೈಗೊಂಡರು.

ಮದುವೆ ಮೆರಗು
ಬಾಲಿವುಡ್ ನ ಹಿರಿಯ ನಟ ಶತ್ರುಘ್ನ ಸಿನ್ಹಾ ಮಗನ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡ ತಾರೆಯರ ದಂಡು.

ಸೈನಿಕರ ಕಸರತ್ತು
ಗಣರಾಜ್ಯೋತ್ಸವ ಪೂರ್ವಭಾವಿಯಾಗಿ ದೆಹಲಿಯಲ್ಲಿ ಸೈನಿಕರ ಕಸರತ್ತು.

ರಜನಿ ದರ್ಶನ
ಬಾಲಿವುಡ್ ನ ಹಿರಿಯ ನಟ ಶತ್ರುಘ್ನ ಸಿನ್ಹಾ ಮಗನ ಮದುವಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್.

ಪುಣ್ಯ ಸ್ನಾನ
ಅಮಾವಾಸ್ಯೆ ಪ್ರಯುಕ್ತ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು.

ಉದ್ಘಾಟನೆ
ಉತ್ತರಬಾಂಗೋ ಉತ್ಸವ ಉದ್ಘಾಟಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಬೆಲ್ ಸಂಭ್ರಮ
ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್ ಸಂಭ್ರಮ.












Click it and Unblock the Notifications