ಕಾಶ್ಮೀರದ ಚಳಿ, ಉಗ್ರರ ಬಲಿ, ನೋಟು ಹಾಗೂ ಬಾಲಮುರಳಿ...

Posted By:
Subscribe to Oneindia Kannada

ಕರ್ನಾಟಕ ಸಂಗೀತದ ಮೇರು ಶಿಖರ ಎಂ.ಬಾಲಮುರಳಿಕೃಷ್ಣ ತೀರಿಕೊಂಡಿದ್ದಾರೆ. ಅದೆಷ್ಟು ಸಾವಿರ ಭಕ್ತಿ ಗೀತೆಗಳನ್ನು ಹಾಡಿದ ಕಂಠ ಅವರದು. ಬೆಂಗಳೂರಿನ ರಾಮಸೇವಾ ಮಂಡಲಿಗೂ ಅವರಿಗೂ ನಂಟಿತ್ತು. ಶ್ರೀರಾಮ ನವಮಿ ಸಂಗೀತ ಕಾರ್ಯಕ್ರಮದಲ್ಲಿ ಎಂದರೋ ಮಹಾನುಭಾವುಲು ಹಾಡು ಕೇಳಿದವರಿದ್ದರೆ ಈಗಲೂ ಬಾಲಮುರಳಿ ಅವರು ಇಲ್ಲೇ ನಿಂತು ಗಾಯನ ಕಾರ್ಯಕ್ರಮ ನೀಡುತ್ತಿದ್ದಾರೇನೋ ಅನ್ನಿಸುತ್ತದೆ.

ದೂರದ ಜಮ್ಮು-ಕಾಶ್ಮೀರ ಗಡಿಯಲ್ಲಿ ಹೃದಯ ಇರಿದಂಥ ಘಟನೆ. ಪಾಕಿಸ್ತಾನದಿಂದ ಭಾರತೀಯ ಸೈನಿಕನ ಮೇಲೆ ಪೈಶಾಚಿಕ ಕೃತ್ಯ. ದೇಹವನ್ನು ಕತ್ತರಿಸಿ, ಬಿಸಾಡಿದ ಕೃತ್ಯಕ್ಕೆ ಸೇನೆಯು ಸರಿಯಾದ ಉತ್ತರ ನೀಡಲು ಸಿದ್ಧತೆ ನಡೆಸಿದೆ. ನವೆಂಬರ್ 11ರಂದು ಬಿಡುಗಡೆಯಾದ 2 ಸಾವಿರದ ಹೊಸ ನೋಟು ಶಂಕಿತ ಉಗ್ರನೊಬ್ಬನನ್ನು ಹೊಡೆದುರುಳಿಸಿದ ನಂತರ ಸಿಕ್ಕಿದೆ.[ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?]

500, 1000 ನೋಟು ರದ್ದು ಮಾಡಿದ ಕ್ರಮಕ್ಕೆ ಕಾಂಗ್ರೆಸ್ ನಿಂದ ಭಾರೀ ಪ್ರತಿಭಟನೆಗಳಾಗುತ್ತಿವೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ವಿಪರೀತ ಮಂಜು. ಆ ಕಾರಣಕ್ಕೆ ವಿಮಾನ ಹಾರಾಟವನ್ನೇ ರದ್ದು ಮಾಡುತ್ತಿದ್ದಾರೆ. ಶ್ರೀನಗರದ ದಾಲ್ ಸರೋವರದಲ್ಲಿ ದಿನಬಳಕೆ ವಸ್ತು ಸಾಗಿಸುತ್ತಾ ಕಂಡುಬಂದವರ ಚಿತ್ರ ತುಂಬ ಸೊಗಸಾಗಿದೆ.

ನಮಸ್ತೆ, ಹೇಗಿದ್ದೀರಿ?

ನಮಸ್ತೆ, ಹೇಗಿದ್ದೀರಿ?

ನವದೆಹಲಿಯಲ್ಲಿ ಮಂಗಳವಾರ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖಾಮುಖಿಯಾದ ಕ್ಷಣ. ಶ್ರದ್ಧೆಯಾ ಕೇದಾರ್ ನಾಥ್ ಸಾಹ್ನಿ ಸ್ಮೃತಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಇಬ್ಬರೂ ಎದುರುಬದರಾಗಿ ಸಿಕ್ಕಾಗ ಪರಸ್ಪರ ನಮಸ್ಕರಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ.

ಬಾಲಮುರಳಿ ಗಾನ ಶಿಖರ

ಬಾಲಮುರಳಿ ಗಾನ ಶಿಖರ

ಸಂಗೀತಗಾರ ಬಾಲಮುರಳಿಕೃಷ್ಣ ಚೆನ್ನೈನಲ್ಲಿ ನಿಧನರಾಗಿದ್ದಾರೆ. ತೆಲುಗು ಸಿನಿಮಾ ಭಕ್ತ ಪ್ರಹ್ಲಾದದಲ್ಲಿ ನಾರದ ಪಾತ್ರವನ್ನು ಅವರು ಪೋಷಿಸಿದ್ದರು. ಜೊತೆಗೆ ಎಂದಿಗೂ ಮರೆಯಲಾಗದ ಸೊಗಸಾದ ಹಾಡುಗಳನ್ನು ಅವರು ಕೊಟ್ಟಿದ್ದಾರೆ. 1991ರಲ್ಲಿ ಅವರಿಗೆ ಪದ್ಮವಿಭೂಷಣ ಗೌರವ ಸಂದಿತ್ತು.

ಖದೀಮರು ಸಿಕ್ಕಿಬಿದ್ದರು

ಖದೀಮರು ಸಿಕ್ಕಿಬಿದ್ದರು

ಈ ನಾಲ್ಕು ಜನಕ್ಕೆ ಇದೇ ಕೆಲಸವಂತೆ. ಫೇಸ್ ಬುಕ್ ನಲ್ಲಿ ಸ್ನೇಹಿತರನ್ನಾಗಿ ಮಾಡಿಕೊಳ್ಳೋದು. ಆ ನಂತರ ಅವರನ್ನು ದೋಚುವುದು. ಅಂದರೆ ಸ್ನೇಹದ ದುರುಪಯೋಗ ಮಾಡಿಕೊಂಡು ದೋಚುತ್ತಿದ್ದರಂತೆ. ಇವರೆಲ್ಲ ಮೀರತ್ ನವರು. ಅಲ್ಲಿನ ಪೊಲೀಸರು ಈಗ ನಾಲ್ವರನ್ನೂ ಬಂಧಿಸಿ, ಸಕತ್ ಟ್ರೀಟ್ ಮೆಂಟ್ ನೀಡುತ್ತಿರುವಂತಿದೆ.

ಶ್ರೀನಗರದ ಚಳಿ

ಶ್ರೀನಗರದ ಚಳಿ

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ತುಂಬ ಚಳಿ. ಮಂಜು ಮುಸುಕಿದ ವಾತಾವರಣದಲ್ಲಿ ಅಲ್ಲಿನ ದಾಲ್ ಸರೋವರದಲ್ಲಿ ದೋಣಿಯಲ್ಲಿ ವಸ್ತುಗಳನ್ನು ತುಂಬಿಕೊಂಡು ಹೋಗುವ ದೃಶ್ಯ ಸೆರೆಸಿಕ್ಕಿದ್ದು ಹೀಗೆ.

ಶಂಕಿತ ಉಗ್ರನಿಗೆ ಗುಂಡು

ಶಂಕಿತ ಉಗ್ರನಿಗೆ ಗುಂಡು

ಜಮ್ಮು-ಕಾಶ್ಮೀರದ ಆರ್ ಎಸ್ ಪುರ ವಲಯದಲ್ಲಿ ಶಂಕಿತ ಪಾಕಿ ಒಳನುಸುಳುಕೋರನನ್ನು ಹೊಡೆದುರುಳಿಸಿದ ನಂತರ ಶವದ ಬಳಿ ತೆರಳಿ ಗಮನಿಸಿದ ಬಿಎಸ್ ಎಫ್ ಯೋಧ.

ಹೊಸ ನೋಟು

ಹೊಸ ನೋಟು

ಉತ್ತರ ಕಾಶ್ಮೀರದ ಬಂಡೀಪೋರ್ ಜಿಲ್ಲೆಯಲ್ಲಿ ಸೇನೆಯು ಹೊಡೆದುರುಳಿಸಿದ ಉಗ್ರರಿಂದ ಎರಡು ಸಾವಿರ ಮುಖ ಬೆಲೆಯ ಹೊಸ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು.

ಕಾಂಗ್ರೆಸ್ ಕಾರ್ಯಕರ್ತೆಯರ ಆಕ್ರೋಶ

ಕಾಂಗ್ರೆಸ್ ಕಾರ್ಯಕರ್ತೆಯರ ಆಕ್ರೋಶ

500, 1000 ನೋಟುಗಳ ರದ್ದು ವಿರುದ್ಧ ಮುಂಬೈನ ಥಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರು ಭಾರೀ ಪ್ರತಿಭಟನೆ ನಡೆಸಿದರು. ಅವರ ಸಿಟ್ಟು-ಆಕ್ರೋಶ ಕಾಣಿಸಿದ್ದು ಹೀಗೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News in picture : Fog in Srinagar, terrorists killed by Indian army and Singer M.Balamuralikrishna and many more.
Please Wait while comments are loading...