ಮಂಗಳವಾರದ ಸಕಲ ಸುದ್ದಿಗಳ ಚಿತ್ರಸಂಪುಟ

Written By:
Subscribe to Oneindia Kannada

ನವದೆಹಲಿ, ಮೇ 31 : ವಿಶ್ವ ತಂಬಾಕು ರಹಿತ ದಿನದ ಹಿನ್ನೆಲೆಯಲ್ಲಿ ನಡೆದ ಜಾಗೃತಿ ಮೆರವಣಿಗೆಗಳು, ಜಾಗೃತಿ ಘೋಷಣೆಗಳು ತಂಬಾಕು ಬಿಡುವಂತೆ ಪ್ರೇರೇಪಣೆ ನೀಡಿದವು.

ಎನಿಮೇಶನ್, ವಿಎಫ್‌ಎಕ್ಸ್, ಮಲ್ಟಿಮೀಡಿಯಾ ಮತ್ತು ಗೇಮಿಂಗ್ ಕ್ಷೇತ್ರಗಳ ಮಂಚೂಣಿ ಸಂಸ್ಥೆ ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸಿನಿಮ್ಯಾಟಿಕ್ಸ್ (ಮ್ಯಾಕ್), ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಂಗಳವಾರ ಬೆಂಗಳೂರಿನಲ್ಲಿ ವಾಕಥಾನ್ ನಡೆಸಿತು. ಕೋಲ್ಕತ್ತಾದಲ್ಲಿ ಸಹ ಮಕ್ಕಳು ಜಾಗೃತಿ ಜಾಥಾ ನಡೆಸಿದರು.[ತಂಬಾಕು ಬೇಕಿದ್ರೆ ಸೇವಿಸಿ, ದುಷ್ಪರಿಣಾಮ ನೀವೇ ಅನುಭವಿಸಿ!]

ಭಾರತದ ನೌಕಾಪಡೆಗೆ ಹೊಸ ಮುಖ್ಯಸ್ಥರ ನೇಮಕವಾಗಿದ್ದು ವೈಸ್ ಅಡ್ಮಿರಲ್ ಸುನೀಲ್ ಲಂಬಾ ಭಾರತೀಯ ನೌಕಾ ಪಡೆಯ ನೂತನ ಮುಖ್ಯಸ್ಥರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರ ರಾಯ್ ಬರೇಲಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ(ಪಿಟಿಐ ಚಿತ್ರಗಳು)

ತಂಬಾಕು ಬಿಡಿ

ತಂಬಾಕು ಬಿಡಿ

ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸಿನಿಮ್ಯಾಟಿಕ್ಸ್ (ಮ್ಯಾಕ್), ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಂಗಳವಾರ ಬೆಂಗಳೂರಿನಲ್ಲಿ ನಡೆಸಿದ ವಾಕಥಾನ್ ನಲ್ಲಿ ಭಾಗವಹಿಸಿದ್ದ ಯುವತಿಯರು.

ಸಿಗರೇಟು ಬಿಡಿ

ಸಿಗರೇಟು ಬಿಡಿ

ತಂಬಾಕು, ಧೂಮಪಾನ ತ್ಯಜಿಸುವಂತೆ ಕೋಲ್ಕತ್ತಾದಲ್ಲಿ ಮಕ್ಕಳು ಮುಖವಾಡ ಧರಿಸಿ ಜಾಗೃತಿ ಜಾಥಾ ನಡೆಸಿದರು.

ಅಧಿಕಾರ ಸ್ವೀಕಾರ

ಅಧಿಕಾರ ಸ್ವೀಕಾರ

ಭಾರತದ ನೌಕಾಪಡೆಗೆ ಹೊಸ ಮುಖ್ಯಸ್ಥರ ನೇಮಕವಾಗಿದ್ದು ವೈಸ್ ಅಡ್ಮಿರಲ್ ಸುನೀಲ್ ಲಂಬಾ ಭಾರತೀಯ ನೌಕಾ ಪಡೆಯ ನೂತನ ಮುಖ್ಯಸ್ಥರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಮಿಸ್ ಟಿಬೇಟ್

ಮಿಸ್ ಟಿಬೇಟ್

ಮಿಸ್ ಟಿಬೇಟ್ ಸ್ಪರ್ಧಾಳುಗಳು ಧರ್ಮಶಾಲಾದಲ್ಲಿ ಕ್ಯಾಮರಾಕ್ಕೆ ಪೋಸು ನೀಡಿದ್ದು ಹೀಗೆ.

ಬಿಸಿಲ ಬೇಗೆ ತಾಳಲಾರೆ

ಬಿಸಿಲ ಬೇಗೆ ತಾಳಲಾರೆ

ಬಿಸಿಲ ಬೇಗೆ ತಾಳಲಾರದೇ ನೀರಿನ ಮೊರೆ ಹೋದ ಕೋಲ್ಕತ್ತಾದ ಮಕ್ಕಳು ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದು ಹೀಗೆ.

ಪ್ರತಿಭಟನೆ ಬಿಸಿ

ಪ್ರತಿಭಟನೆ ಬಿಸಿ

ಅತ್ಯಾಚಾರ ಖಂಡಿಸಿ ಕೋಲ್ಕತಾದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವಿಕೋಪಕ್ಕೆ ಹೋಗಿದ್ದ ವೇಳೆ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Volunteers took part in a rally to mark the World No-Tobacco day in Bengaluru on May 31st, World No Tobacco Day. The walkathon was organized by Maac organization. Children wear masks during an awareness campaign on 'World No Tobacco' day in Kolkata.
Please Wait while comments are loading...