ಚಿತ್ರಗಳಲ್ಲಿ: ಆಫ್ರಿಕಾದ ಪ್ರಮುಖರನ್ನು ಭೇಟಿಯಾದ ಮೋದಿ
ನವದೆಹಲಿ, ಅಕ್ಟೋಬರ್. 28: ಪ್ರಧಾನಿ ನರೇಂದ್ರ ಮೋದಿ ಬುಧವಾರ ನವದೆಹಲಿಯಲ್ಲಿ ಆಫ್ರಿಕಾ ಖಂಡದ ಪ್ರಮುಖರನ್ನು ಭೇಟಿ ಮಾಡಿದರು. ಭಾರತಕ್ಕೆ ಭೇಟಿ ನೀಡಿರುವ ಕೀನ್ಯಾ, ಜಿಂಬಾಬ್ವೆ, ಜುನೇಶಿಯಾ, ನೈಜಿರಿಯಾ ಅಧ್ಯಕ್ಷರನ್ನು ಬರಮಾಡಿಕೊಂಡರು.
ಸುಮಾರು 20 ದೇಶಗಳ ಪ್ರಮುಖರೊಂದಿಗೆ ಪ್ರಧಾನಿ ಮಾತನಾಡಿದರು. ವಿದೇಶಿ ಸಂಬಂಧ ವೃದ್ಧಿ ಮತ್ತು ಪರಸ್ಪರ ಸಹಕಾರ ಕುರಿತು ಗಹನವಾದ ಚರ್ಚೆ ನಡೆಯಿತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ವಿದೇಶಿ ಬಾಂಧವ್ಯ ವೃದ್ಧಿಗೆ ಮೊದಲ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಬಂಡವಾಳ ಹೂಡಿಕೆಗೆ ಮುಕ್ತ ಆಹ್ವಾನ ನೀಡಿದೆ. ಮೋದಿ ಪ್ರಮುಖ ದೇಶಗಳ ಪ್ರವಾಸವನ್ನು ಮಾಡಿ ಮುಗಿಸಿದ್ದು ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಬಿತ್ತಿ ಬಂದಿದ್ದಾರೆ. ಇದೀಗ ವಿದೇಶಗಳ ಅಧ್ಯಕ್ಷರು, ಪ್ರಧಾನಿಗಳನ್ನು ದೇಶಕ್ಕೆ ಕರೆಸಿಕೊಂಡು ಮಾತುಕತೆ ನಡೆಸಲಾಗುತ್ತಿದೆ. ನರೇಂದ್ರ ಮೋದಿ ಮತ್ತು ಅವರನ್ನು ಭೇಟಿಯಾದ ಪ್ರಮುಖರನ್ನು ಚಿತ್ರಗಳಲ್ಲಿ ನೋಡಿ.... (ಪಿಟಿಐ ಚಿತ್ರಗಳು)

ಸ್ವಾಗತವೂ ನಿಮಗೆ
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಜುನೇಶಿಯಾದ ಅಧ್ಯಕ್ಷ ಗುನೆಮಾ ಮಾಬಾಸೊಗೊ ಅವರಿಗೆ ಹಸ್ತಲಾಘವ ನೀಡಿ ಸಭೆಗೆ ಬರಮಾಡಿಕೊಂಡರು.

ಬನ್ನಿ ಆಸೀನರಾಗಿ..
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಟ್ಟಾ ಅವರನ್ನು ಸ್ವಾಗತಿಸಿದರು.

ಮುಗಾಬೆಗೆ ವೆಲ ಕಮ್
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರಿಗೆ ಸ್ವಾಗತ ಕೋರಿದರು.

ನೈಜೀರಿಯಾ ಅಧ್ಯಕ್ಷರಿಗೆ ಸ್ವಾಗತ
ನೈಜೀರಿಯಾ ಅಧ್ಯಕ್ಷ ಮೊಹಮದ್ ಬುಹಾರಿ ಅವರಿಗೆ ಮೋದಿ ಅವರಿಂದ ಸ್ವಾಗತ.

ಸ್ವಿಸ್ ದೊರೆಗಳೆ ಬನ್ನಿ..
ಸ್ವಿಜರ್ ಲೆಂಡ್ ರಾಜ ಕಿಂಗ್ ,ಮಸ್ವಟಿ-3 ಅವರನ್ನು ಸ್ವಾಗತ ಮಾಡಿದ ಪ್ರಧಾನಿ ನರೇಂಧ್ರ ಮೋದಿ.

ಘಾನಾ ಅಧ್ಯಕ್ಷರ ಭೇಟಿ
ಪ್ರಧಾನಿ ನರೇಂದ್ರ ಮೋದಿ ಘಾನಾ ಅಧ್ಯಕ್ಷರಾದ ಜಾನ್ ಧರ್ಮಾನಿ ಮಹಮ್ಮಾ ಅವರರನ್ನು ದ್ವಿಪಕ್ಷೀಯ ಮಾತುಕತೆಗೆ ಆಗಮಿಸಲು ಕೇಳಿಕೊಂಡಿದ್ದು ಹೀಗೆ.












Click it and Unblock the Notifications