• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಮೋದಿ ಸ್ವದೇಶಕ್ಕೆ, ಧೋನಿ ಗೆಲುವಿಗೆ ಸಾಕ್ಷಿ

|

ನವದೆಹಲಿ, ಮೇ. 20: ಪ್ರಪಂಚವೇ ಹಾಗೆ, ದಿನೇ ದಿನೇ ಹೊಸ ಹೊಸ ಬೆಳವಣಿಗೆಗಳು ಆಗುತ್ತಿರಲೇಬೇಕು. ಹಳೆಯ ಸುದ್ದಿ ಮರೆಯಾಗಿ ಹೊಸ ಸುದ್ದಿಗಳು ಜಾಗ ಆಕ್ರಮಣ ಮಾಡಿಕೊಳ್ಳುತ್ತಲೇ ಇರಬೇಕು. ಬುಧವಾರ ನಡೆದ ಸುದ್ದಿ ಚಿತ್ರಗಳ ಮೇಲೆ ಒಂದು ನೋಟ ಇಲ್ಲಿದೆ.

ಜಮ್ಮು ಕಾಶ್ಮೀರದಲ್ಲಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ಸಂಭ್ರಮಿಸಿದ ವಿದ್ಯಾರ್ಥಿನಿಯರು. ವಿದೇಶ ಪ್ರವಾಸ ಅಂತ್ಯ ಗೊಳಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ. ಕೇರಳದಲ್ಲಿ ಕಮಲ ಅರಳಿಸಲು ಈಗಿನಿಂದಲೇ ಕಸರತ್ತು ಆರಂಭಿಸಿದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ. ಪಿಕು ಹಿಟ್ ನಿಂದ ಬೀಗುತ್ತಿರುವ ದೀಪಿಕಾ ಪಡುಕೋಣೆ. ಶಾಂತವಾಗಿರುವ ಪ್ರವಾಸಿಗರ ಸ್ವರ್ಗ ಜಮ್ಮು-ಕಾಶ್ಮೀರ ಇನ್ನು ಮುಂತಾದ ಘಟನಾವಳಿಗಳ ಚಿತ್ರಣವನ್ನು ನೋಡಿ....

ಧೋನಿ ಗೆಲುವಿಗೆ ಸಾಕ್ಷಿ

ಧೋನಿ ಗೆಲುವಿಗೆ ಸಾಕ್ಷಿ

ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ಚೆನ್ನೈ ಸೂಪ್ ಕಿಂಗ್ಸ್ ಆಟಗಾರರು ರಾಂಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಸಿಂಗ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಹೀಗೆ.

ಅಬ್ಬಾ ....ಫಲಿತಾಂಶ ಬಂತು

ಅಬ್ಬಾ ....ಫಲಿತಾಂಶ ಬಂತು

ಜಮ್ಮು ಕಾಶ್ಮೀರದಲ್ಲಿ ಬುಧವಾರ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ವಿದ್ಯಾರ್ಥಿನಿಯರು ಸಂಭ್ರಮಿಸಿದ ಪರಿ. ರಾಜ್ಯದ ಪಿಯು ಫಲಿತಾಂಶ ಇತ್ತಚೆಗಷ್ಟೇ ಹೊರಬಿದ್ದಿದ್ದಿ ಕಳೆದ ಹತ್ತು ವರ್ಷಗಳಲ್ಲೇ ಅಧಿಕ ಸಾಧನೆಯಾಗಿತ್ತು.

ಮಳೆಯಲ್ಲೂ ಪ್ರತಿಭಟನೆ

ಮಳೆಯಲ್ಲೂ ಪ್ರತಿಭಟನೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೇರಳದಲ್ಲಿದ್ದರು. ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕೇರಳದ ಹಣಕಾಸು ಸಚಿವ ಕೆಎಂ ಮಣಿ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಗೆ ಮಳೆ ಅಡ್ಡಿ ಮಾಡಿದರು ಭಾಷಣ ಮಾಡಿದ ಅಮಿತ್ ಷಾ.

ದೀಪಿಕಾ ದರ್ಶನ

ದೀಪಿಕಾ ದರ್ಶನ

ತಮ್ಮ ಅಭಿನಯದ ಪಿಕು ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮುಂಬೈನಲ್ಲಿ ಕಾಣಿಸಿಕೊಂಡರು.

ಮಗುವಾದ ಮೋದಿ

ಮಗುವಾದ ಮೋದಿ

ದಕ್ಷಿಣ ಕೊರಿಯಾದ ಸಿಯೋಲ್ ಭೇಟಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಮಗುವೊಂದರೆ ಜತೆ ಆಟವಾಡಿದ ಬಗೆ.

ದಾಲ್ ಸರೋವರದ ನೋಟವೇ ಅಂದ

ದಾಲ್ ಸರೋವರದ ನೋಟವೇ ಅಂದ

ಜಗತ್ ಪ್ರಸಿದ್ಧ ಕಾಶ್ಮೀರದ ದಾಲ್ ಸರೋವರದಲ್ಲಿ ಪ್ರವಾಸಿಗರು ಮೋಜಿನಲ್ಲಿ ತೊಡಗಿದ್ದ ದೃಶ್ಯ. ಸೈನ್ಯದ ಯಶಸ್ವಿ ಕಾರ್ಯಾಚರಣೆಯಿಂದ ಉಗ್ರರ ಅಟ್ಟಹಾಸ ಪ್ರದೇಶದಲ್ಲಿ ಕೊಂಚ ಕಡಿಮೆಯಾಗಿದೆ.

ಸ್ವಚ್ಛ ಭಾರತಕ್ಕೆ ಸಭೆ

ಸ್ವಚ್ಛ ಭಾರತಕ್ಕೆ ಸಭೆ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ವಚ್ಛ ಭಾರತ ಅಭಿಯಾನದ ಸಮಗ್ರ ಅನುಷ್ಠಾನಕ್ಕೆ ಸಂಬಂಧಿಸಿ ಸಭೆ ನಡೆಸಿದರು. ನೀತಿ ಆಯೋಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.

ನರೇಂದ್ರ ಮೋದಿಗೆ ಸ್ವಾಗತ

ನರೇಂದ್ರ ಮೋದಿಗೆ ಸ್ವಾಗತ

ವಿದೇಶಗಳ ಪ್ರವಾಶ ಮುಗಿಸಿ ಸ್ವದೇಶಕ್ಕೆ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News in Pics: Chennai Super Kings captain Mahendra Singh Dhoni with his wife Sakshi arrives at Birsa Munda International airport. School-girls celebrate after declaration of Jammu and Kashmir State Board Class 12 results. Here some other Photo with news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more