ಬಾಲ ಕೃಷ್ಣರ ತುಂಟಾಟ ಯಾರಿಗೆ ತಾನೆ ಇಷ್ಟ ಆಗಲ್ಲ?

Subscribe to Oneindia Kannada

ನವದೆಹಲಿ, ಆಗಸ್ಟ್, 24: ದೇಶದೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಶ್ರೀ ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ದೀಪಗಳ ಅಲಂಕಾರ, ಮಕ್ಕಳಿಗೆ ಕೃಷ್ಣ ವೇಷದ ಸಂಭ್ರಮ, ವಿವಿಧ ಸ್ಪರ್ಧೆ.. ಸಡಗರದ ವಾತಾವರಣ.

ಮಕ್ಕಳನ್ನು ಕೃಷ್ಣನ ವೇಷದಲ್ಲಿ ನೋಡುತ್ತಿದ್ದರೆ ಎಂಥವರ ಮನಸ್ಸು ಒಂದು ಕ್ಷಣ ಪ್ರಫುಲ್ಲವಾಗುವುದು ಖಂಡಿತ. ಇಲ್ಲಿ ಭಾಷೆ ಬೇಕಿಲ್ಲ, ಮಾತು ಬೇಕಿಲ್ಲ, ಆ ಒಂದು ನೋಟ ಎಂಥವರನ್ನು ಮರುಳು ಮಾಡಿ ಬಿಡುತ್ತದೆ.[ಇಸ್ಕಾನ್ ನಲ್ಲಿ ಕೃಷ್ಣ ಜನ್ಮಾಷ್ಟಮಿ: ಸಂಚಾರ ವ್ಯವಸ್ಥೆ ಬದಲಾಗಿದೆ]

ಗೋವರ್ಧನ ಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿದ ಶ್ರೀ ಕೃಷ್ಣನಿಗೂ, ಗೀತೆಯನ್ನು ಪ್ರಪಂಚಕ್ಕೆ ಸಾರಿದ ಶ್ರೀ ಕೃಷ್ಣನ ನಡುವೆ ಅನೇಕ ಅಂತರಗಳಿಗೆ, ಕಾಲಘಟ್ಟವಿದೆ, ಬದಲಾವಣೆ ಇದೆ... ಆದರೆ ಅಂತಿಮವಾಗಿ ಜಗತ್ತಿಗೆ ಮಾರ್ಗದರ್ಶನ ಸೂತ್ರ ಸಾರುವುದೇ ಕೃಷ್ಣನ ಜೀವನದ ಗುರಿ... ಬಾಲ ಕೃಷ್ಣರ ತುಂಟಾವನ್ನು ನೀವು ನೋಡಿಕೊಂಡು ಬನ್ನಿ....( ಪಿಟಿಐ ಚಿತ್ರಗಳು)

ಮುದ್ದು ಕೃಷ್ಣ ಬಾರೋ

ಮುದ್ದು ಕೃಷ್ಣ ಬಾರೋ

ಶಾಲೆಯ ಕಾರ್ಯಕ್ರಮವೊಂದರಲ್ಲಿ ಕೊಳಲು ಹಿಡಿದು ಕಾಣಿಸಿಕೊಂಡ ಮುದ್ದು ಕೃಷ್ಣ. ಬಿಕನರ್ ಚಿತ್ರ.

ನಾಟಕ

ನಾಟಕ

ಶ್ರೀ ಕೃಷ್ಣನ ಜೀವನವನ್ನು ಸಾರುವ ನಾಟಕವನ್ನು ಅಭಿನಯಿಸಿದ ಮಕ್ಕಳು. ನವದೆಹಲಿ ಚಿತ್ರ.

ಕೃಷ್ಣಾ ನೀ ಬೇಗನೇ ಬಾರೋ

ಕೃಷ್ಣಾ ನೀ ಬೇಗನೇ ಬಾರೋ

ಶ್ರೀ ಕೃಷ್ಣ ಮತ್ತು ರಾಧೆಯ ವೇಷ ಧರಿಸಿದ ಮಕ್ಕಳು ನಡೆಸಿಕೊಟ್ಟ ಸಾಂಸ್ಕ್ರತಿಕ ಕಾರ್ಯಕ್ರಮ ದ್ವಾಪರ ಯುಗಕ್ಕೆ ಕರೆದುಕೊಂಡು ಹೋಯಿತು. ಅಜ್ಮೀರ್ ನ ಚಿತ್ರ.

ಲೆಕ್ಕಕ್ಕೆ ಸಿಗದ ಕೃಷ್ಣರು

ಲೆಕ್ಕಕ್ಕೆ ಸಿಗದ ಕೃಷ್ಣರು

ಶಾಲೆಗೆ ಕೃಷ್ಣನ ವೇಷ ಧರಿಸಿ ಬಂದ ಮಕ್ಕಳು ಶಾಲಾ ಕೊಠಡಿಯಲ್ಲಿ ಕುಳಿತ ದೃಶ್ಯ ಪಾಟ್ನಾದ್ದು.

ದೀಪಗಳ ಸೌಂದರ್ಯ

ದೀಪಗಳ ಸೌಂದರ್ಯ

ಶ್ರೀ ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ದೀಪಗಳ ಅಲಂಕಾರ. ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಮಥುರಾದಲ್ಲಿ 15 ದಿನಗಳ ಹಿಂದೆಯೇ ಮನೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Pics: Krishna Janmashthami Is One Of The Most Celebrated Festivals In India, Which Is Celebrated On The Eighth Day Of The Krishna Paksha In The Month Of Shravan In The Hindu Calender. Wish You Happy Krishna Janmashtami.
Please Wait while comments are loading...