ಸಂಕ್ರಾಂತಿ ಸಂಭ್ರಮ: ಎಳ್ಳು-ಬೆಲ್ಲ, ಪುಣ್ಯ ಸ್ನಾನ, ಜ್ಯೋತಿ ದರ್ಶನ...

Subscribe to Oneindia Kannada

ನವದೆಹಲಿ, ಜನವರಿ, 15: ಸೂರ್ಯ ತನ್ನ ಪಥ ಬದಲಾಯಿಸಿದ್ದಾನೆ. ಸಂಕ್ರಾಂತಿ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ರೈತರಿಗೆ ಸುಗ್ಗಿಯ ಸಂಭ್ರಮ. ಮಹಾನಗರದ ಜನರಿಗೆ ಹಬ್ಬ ಆಚರಣೆ ಸಂಭ್ರಮ ಸಡಗರ.

ಇಡಿ ಭಾರತದಾದ್ಯಂತ ಹಬ್ಬವನ್ನು ಆಚರಣೆ ಮಾಡಲಾಯಿತು. ಜನರು ಎಳ್ಳು-ಬೆಲ್ಲ ಹಂಚಿ ವರ್ಷವಿಡಿ ನೆಮ್ಮದಿಯ ವಾತಾವರಣ ನೆಲೆಸಲು ಬೇಡಿಕೊಂಡರು. ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರಗಳು ಜೋರಾಗಿದ್ದವು.[ಮಕರ ಸಂಕ್ರಾಂತಿಗೆ ನಕ್ಷತ್ರಗಳಿಗನುಗುಣವಾಗಿ ಫಲಾಫಲ]

ಶುಕ್ರವಾರ ಸಂಜೆ 5.18ಕ್ಕೆ ಸರಿಯಾಗಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಿಸಿದ ಸಂದರ್ಭ ಗವಿಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿಚ ಸ್ಪರ್ಶವಾಯಿತು. ಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶದ ವೀಕ್ಷಣೆಗಾಗಿ ದೇಗುಲದ ಆವರಣದಲ್ಲಿ 2 ಬಿಗ್ ಸ್ಕ್ರೀನ್ ಗಳ ವ್ಯವಸ್ಥೆ ಮಾಡಲಾಗಿತ್ತು. ಕೇರಳದ ಶಬರಿಮಲೆಯಲ್ಲಿಯೂ ಅಯ್ಯಪ್ಪ ಸ್ಮಾಮಿ ದೇವಾಲಯದಲ್ಲೂ ಸಂಭ್ರಮ ಮನೆ ಮಾಡಿತ್ತು.[ಸುಗ್ಗಿ ಕಾಲ ಬಂತು, ಸಂಕ್ರಾಂತಿ ಸಂಭ್ರಮ ತಂತು]

ಬೆಂಗಳೂರಿ ಗವಿ ಗಂಗಾಧರೇಶ್ವರ ದೇವಾಲಯ, ತೀರ್ಥಹಳ್ಳಿಯ ಬಿಜ್ಜವಳ್ಳಿಯಲ್ಲಿ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಗವಿಗಂಗಾಧರೇಶ್ವರನಿಗೆ ನಮನ ಸಲ್ಲಿಸಿ ಸೂರ್ಯ ರಶ್ಮಿಯ ವೈಚಿತ್ರದ ದರ್ಶನ ಪಡೆದುಕೊಂಡರು. ಇಡೀ ಭಾರತದಲ್ಲಿ ಸಂಕ್ರಾಂತಿ ಆಚರಣೆ ಹೇಗಿತ್ತು? ನೋಡಿಕೊಂಡು ಬನ್ನಿ...(ಪಿಟಿಐ ಚಿತ್ರಗಳು)

ಗವಿ ಗಂಗಾಧರೇಶ್ವರ

ಗವಿ ಗಂಗಾಧರೇಶ್ವರ

ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುವುದನ್ನು ನೋಡಲು ಸಾವಿರಾರು ಭಕ್ತರು ಸೇರಿದ್ದರು.

ಪುಣ್ಯ ಸ್ನಾನ

ಪುಣ್ಯ ಸ್ನಾನ

ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ಪುಣ್ಯ ಸ್ನಾನ ಮಾಡಿ ನರ್ತಿಸಿದ ಭಕ್ತರು.

ನೆರೆದ ಭಕ್ತರು

ನೆರೆದ ಭಕ್ತರು

ಸಂಕ್ರಾಂತಿ ಪ್ರಯುಕ್ತ ಗಂಗಾಸಾಗರದಲ್ಲಿ ಪುಣ್ಯ ಸ್ನಾನ ಮಾಡಲು ಸೇರಿದ್ದ ಭಕ್ತ ಸಮುದಾಯ.

ಹಿಂದೂಗಳ ಮೆರವಣಿಗೆ

ಹಿಂದೂಗಳ ಮೆರವಣಿಗೆ

ಮಕರ ಸಂಕ್ರಾಂತಿ ನಿಮಿತ್ತ ಫತೇಫುರ್ ದಲ್ಲಿ ಹಿಂದೂ ಸಮುದಾಯದ ಭಕ್ತರಿಂದ ನಡೆದ ಮೆರವಣಿಗೆ.

ಚಂದ್ರಬಾಬು ನಾಯ್ಡು ಸಂಭ್ರಮ

ಚಂದ್ರಬಾಬು ನಾಯ್ಡು ಸಂಭ್ರಮ

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಕರ ಸಂಕ್ರಾಂತಿ ಸಂಭ್ರಮದಲ್ಲಿ ಭಾಗವಹಿಸಿದ್ದರು.

ಸಂಗೀತ ಸಂಭ್ರಮ

ಸಂಗೀತ ಸಂಭ್ರಮ

ಪಾಪ್ ಸಿಂಗರ್ ಗಜೇಂದ್ರ ಫೋಗಾಟ್ ಗುರ್ ಗಾವ್ ನಲ್ಲಿ ಸಂಕ್ರಾಂತಿ ನಿಮಿತ್ತ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಹರಿದ್ವಾರ

ಹರಿದ್ವಾರ

ಹರಿದ್ವಾರದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾದ ಭಕ್ತರು. ಮಕರ ಸಂಕ್ರಾಂತಿ ನಿಮಿತ್ತ ಪುಣ್ಯ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಅಲಹಾಬಾದ್

ಅಲಹಾಬಾದ್

ಕೊರೆಯುವ ಚಳಿಯ ಮಧ್ಯೆಯೂ ಅಲಹಾಬಾದ್ ನಲ್ಲಿ ಪುಣ್ಯ ಸ್ನಾನಕ್ಕೆ ಲಕ್ಷಾಂತರ ಜನರು ಸೇರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News In Pics: Makar Sankranti, a festival that marks the beginning of an auspicious phase of the sun moving from Sagittarius Zodiac sign to the Capricorn was celebrated all over India. Here is Sankranti celebration Photos.
Please Wait while comments are loading...