ಗುರುವಾರ ದೇಶದಲ್ಲಿ ಏನೇನಾಯ್ತು? ಚಿತ್ರದಲ್ಲಿ ನೋಡಿ
ನವದೆಹಲಿ,
ಆ. 06: ಸಂಸತ್ ಸದಸ್ಯರ ಅಮಾನತು ಕ್ರಮವನ್ನು ವಿರೋಧಿಸಿ ನಡೆಯುತ್ತಿರುವ ಕಾಂಗ್ರೆಸ್ ಅಧಿನಾಯಕರ ಪ್ರತಿಭಟನೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಮುಖಂಡರು ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತಿದ್ದಾರೆ. id="toptextpromo"> id='are-slot-1' class='oiad oi-axt oiadv'>ಮಧ್ಯಪ್ರದೇಶದ
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು. ಈಶಾನ್ಯ ಭಾರತದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದರೆ ಮಥುರಾದಲ್ಲಿ ವರುಣ ಆರ್ಭಟಿಸಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಧಾರಾಕಾರ ಮಳೆ ಸುರಿಯುತ್ತಿದೆ. ಅಂತಾರಾಷ್ಟ್ರೀಯ ಆಭರಣ ಪ್ರದರ್ಶನದಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ತಾರೆ ಪ್ರೀತಿ ಜಿಂಟಾ... ಗುರುವಾರ ದೇಶಾದ್ಯಂತ ನಡೆದ ಘಟನಾವಳಿಗಳ ಒಟ್ಟು ಚಿತ್ರಣ ಇಲ್ಲಿದೆ.(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
4 ನೇ ದಿನಕ್ಕೆ ಕಾಂಗ್ರೆಸ್ ಪ್ರತಿಭಟನೆ
ಸಂಸತ್ ಸದಸ್ಯರ ಅಮಾನತು ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಅಧಿನಾಯಕರು ನಡೆಸುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿರಿಸಿದೆ

ಕಾಂಗ್ರೆಸ್ ಅಧಿನಾಯಕರು ಭಾಗಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಸತ್ ಭವನದ ಎದುರು ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಶಿವರಾಜ್ ಸಿಂಗ್, ಸುಷ್ಮಾ ರಾಜೀನಾಮೆ ನೀಡಲಿ
ವ್ಯಾಪಂ ಹಗರಣದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಲಲಿತ್ ಮೋದಿ ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಸುಷ್ಮಾ ಸ್ವರಾಜ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು.

ಮಳೆಯ ನಡುವೆ ಪಯಣ
ಮಥುರಾದಲ್ಲಿ ಮಳೆ ಗುರುವಾರ ಮಳೆ ಆರ್ಭಟಿಸಿದ್ದು ರಸ್ತೆಯಲ್ಲಿ ತುಂಬಿದ್ದ ನೀರಿನಲ್ಲೇ ಶಾಲಾ ಮಕ್ಕಳ ಸೈಕಲ್ ಸವಾರಿ.

ಉತ್ತರ ಪ್ರದೇಶದಲ್ಲಿ ಪ್ರವಾಹ
ಈಶಾನ್ಯ ಭಾರತದಲ್ಲಿ ಕೋಮೆನ್ ಆರ್ಭಟ ಕಡಿಮೆಯಾಗಿದೆ. ಆದರೆ ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ವರಣು ಆರ್ಭಟಿಸತೊಡಗಿದ್ದಾನೆ.

ನಾಯಕರ ನೋಟ
ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ವೇದಿಕೆ ಸಿದ್ಧವಾಗಿದೆ. ಸುದ್ಇಗೋಷ್ಠಿಯ ವೇಳೆ ಕೊಲಂಬೋದಲ್ಲಿ ಕಾಣಿಸಿಕೊಂಡ ಶ್ರೀಲಂಕಾ ನಾಯಕ ಮಾಥ್ಯೂಸ್ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ.

ಜಿಂಟಾ ಹೆಜ್ಜೆಗಳು
ಮುಂಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನದಲ್ಲಿ ಹೆಜ್ಜೆ ಹಾಕಿದ ಬಾಲಿವುಡ್ ತಾರೆ ಪ್ರೀತಿ ಜಿಂಟಾ..

ಕೀರ್ತಿ ಕೌಶಲ್ಯ
ಮುಂಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನದಲ್ಲಿ ಆಭರಣ ತೊಟ್ಟು ಮನಗೆದ್ದ ಬೆಡಗಿ ಕೀರ್ತಿ ಸನೂನ್.












Click it and Unblock the Notifications