ನಾನೇನು ತಪ್ಪು ಮಾಡಿದ್ದೆ? ಅಳುವ ಬಿಎಂಟಿಸಿ ಬಸ್

Subscribe to Oneindia Kannada

ನವದೆಹಲಿ, ಮೇ 10: ಬೆಂಗಳೂರಿನ ಶಾಂತಿ ಕದಡಿದ್ದ ಪಿಎಫ್ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಆಕ್ರೋಶಕ್ಕೆ ಬಲಿಯಾಗಿ ಬೆಂಕಿಗೆ ತುತ್ತಾಗಿದ್ದ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಗಳನ್ನು ಮೆಜೆಸ್ಟಿಕ್ ನಲ್ಲಿ ಮಂಗಳವಾರ ಪ್ರದರ್ಶನ ಮಾಡಲಾಯಿತು.

ಖಗೋಳ ವಿಸ್ಮಯ ಬುಧ ಸಂಕ್ರಮಣವನ್ನು ಕಣ್ಣು ತುಂಬಿಕೊಂಡವರ ಸಂಖ್ಯೆ ಕಡಿಮೆ ಇಲ್ಲ. ಭಾರತದಲ್ಲೂ ವಿಸ್ಮಯ ಗೋಚರವಾಗಿದ್ದು ಬೆಂಗಳೂರು, ಮುಂಬೈ ಸೇರಿದಂತೆ ವಿವಿಧೆಡೆ ವಿಜ್ಞಾನಿಗಳು, ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು.[ಪಿಎಫ್ ಪ್ರತಿಭಟನೆ ಘರ್ಷಣೆಗೆ ತಿರುಗಲು ಯಾರು ಕಾರಣ?]

ಪ್ರಪಂಚದಾದ್ಯಂತ ಜಗಜ್ಯೋತಿ ಬಸವಣ್ಣನವರ ಜನ್ಮದಿನವನ್ನು ಆಚರಣೆ ಮಾಡಲಾಯಿತು. ಇಂಗ್ಲೆಂಡಿನ ಲಂಡನ್ ನಲ್ಲಿಯೂ ಬಸವೇಶ್ವರರ ಪುತ್ಥಳಿಗೆ ನಮನ ಸಲ್ಲಿಕೆ ಮಾಡಲಾಯಿತು.[ಬುಧ ಸಂಕ್ರಮಣ ಪ್ರಪಂಚ ಅಂತ್ಯದ ಸೂಚನೆಯೇ?]

ಬಾಲಿವುಡ್ ಚಿತ್ರ 'ಅಜರ್' ಯಶಸ್ಸಿಗೆ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಕೆ ಮಾಡಿದ ನಟ ಇಮ್ರಾನ್ ಹಶ್ಮಿ ಮತ್ತು ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್.. ಕೇದಾರನಾಥ ದೇವಾಲಯ ತೆರೆದಿದ್ದು ಭಕ್ತರು ಮತ್ತು ಸಾಧುಗಳು ಪೂಜೆ ಸಲ್ಲಿಕೆ ಮಾಡಿ ಹೊರಬಂದರು. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ( ಪಿಟಿಐ ಚಿತ್ರಗಳು)

ನಾನೇನು ತಪ್ಪು ಮಾಡಿದ್ದೆ?

ನಾನೇನು ತಪ್ಪು ಮಾಡಿದ್ದೆ?

ಬೆಂಗಳೂರಿನಲ್ಲಿ ಶಾಂತಿ ಕದಡಿದ್ದ ಪಿಎಫ್ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಆಕ್ರೋಶಕ್ಕೆ ಬಲಿಯಾಗಿ ಬೆಂಕಿಗೆ ತುತ್ತಾಗಿದ್ದ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಗಳನ್ನು ಮೆಜೆಸ್ಟಿಕ್ ನಲ್ಲಿ ಮಂಗಳವಾರ ಪ್ರದರ್ಶನ ಮಾಡಲಾಯಿತು.

ಬುಧ ಸಂಕ್ರಮಣ

ಬುಧ ಸಂಕ್ರಮಣ

ಸೂರ್ಯನ ಎದುರು ಮುಂಬೈ ಸಮುದ್ರ ತೀರದಿಂದ ಕಂಡು ಬುಧ ಸಂಕ್ರಮಣದ ದೃಶ್ಯ.

ಬುಧ ಸಂಕ್ರಮಣ ವೀಕ್ಷಣೆ

ಬುಧ ಸಂಕ್ರಮಣ ವೀಕ್ಷಣೆ

ಮುಂಬೈನಲ್ಲಿ ಬುಧ ಸಂಕ್ರಮಣದ ನೇರ ದ್ರಶ್ಯಾವಳಿಗಳನ್ನು ವೀಕ್ಷಣೆ ಮಾಡಿದ ವಿದ್ಯಾರ್ಥಿಗಳು.

ಬಸವಣ್ಣನಿಗೆ ನಮನ

ಬಸವಣ್ಣನಿಗೆ ನಮನ

ಬಸವ ಜಯಂತಿ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ಲಂಡನ್ ನಲ್ಲಿರುವ ಬಸವೇಶ್ವರರ ಪುತ್ಥಳಿಗೆ ನಮನ ಸಲ್ಲಿಕೆ ಮಾಡಲಾಯಿತು.

ಅಜರ್ ಗಾಗಿ ಪ್ರಾರ್ಥನೆ

ಅಜರ್ ಗಾಗಿ ಪ್ರಾರ್ಥನೆ

ಬಾಲಿವುಡ್ ಚಿತ್ರ 'ಅಜರ್' ಯಶಸ್ಸಿಗೆ ನವದೆಹಲಿಯ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಕೆ ಮಾಡಿದ ನಟ ಇಮ್ರಾನ್ ಹಶ್ಮಿ.

ಪೂಜೆ ಆರಂಭ

ಪೂಜೆ ಆರಂಭ

ಕೇದಾರನಾಥದ ದೇವಾಲಯ ತೆರೆದಿದ್ದು ಭಕ್ತರು ಮತ್ತು ಸಾಧುಗಳು ಪೂಜೆ ಸಲ್ಲಿಕೆ ಮಾಡಿ ಹೊರಬಂದರು.

ಬೇಸಿಗೆ ಧಗೆ ಅಯ್ಯಪ್ಪಾ

ಬೇಸಿಗೆ ಧಗೆ ಅಯ್ಯಪ್ಪಾ

ಬಿಸಿಗ ಧಗೆ ತಾಳಲಾರದೇ ಬಾತುಕೋಳಿಯೊಂದಿಗೆ ಈಜುತ್ತಿದ್ದ ಯುವಕ, ನವದೆಹಲಿಯ ದೃಶ್ಯ

ತಾಯಿಯ ಆಕ್ರಂದನ

ತಾಯಿಯ ಆಕ್ರಂದನ

ತನ್ನ ಕಾರನ್ನು ಓವರ್ ಟೇಕ್ ಮಾಡಿದ್ದಾನೆ ಎಂಬ ಕೋಪಕ್ಕೆ ಬಿಹಾರದ ಜೆಡಿಯು ಎಂಎಲ್ ಸಿ ಪುತ್ರ ರಾಕಿ ಯಾದವ್‌, ಉದ್ಯಮಿಯೊಬ್ಬರ ಪುತ್ರ ಆದಿತ್ಯ ಸಚ್‌ದೇವ್‌ ಎಂಬಾತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ. ಹತ್ಯೆಗೀಡಾಗಿದ ಯುವಕನ ತಾಯಿಯ ಅರೆಪ್ರಜ್ಞಾವಸ್ಥೆಗೆ ತಲುಪಿದ್ದಾರೆ.

 ಮೋದಿ ಕಾಣಕೆ

ಮೋದಿ ಕಾಣಕೆ

ಅಂತಾರಾಷ್ಟ್ರೀಯ ಮಟ್ಟದ ಟ್ರಾನ್ಸ್ ಪೋರ್ಟ್ ದಿಗ್ಗಜ ಲಾರೆಂಟ್ ಟ್ರೋಜರ್ ಅವರನ್ನು ನವದೆಹಲಿಯಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ ಪ್ರಧಾನಿ ನರೇಂದ್ರ ಮೋದಿ.

ಫಲಿತಾಂಶ ಸಂಭ್ರಮ

ಫಲಿತಾಂಶ ಸಂಭ್ರಮ

ಫಲಿತಾಂಶ ಪಡೆದ ಸಂಭ್ರಮದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಪಶ್ಚಿಮ ಬಂಗಾಳದ ವಿದ್ಯಾರ್ಥಿನಿಯರು.

ಬಿಜೆಪಿ ದಂಡು

ಬಿಜೆಪಿ ದಂಡು

ಕರ್ನಾಟಕದ ರಾಜಭವನಕ್ಕೆ ತೆರಳಿ ಬರ ಅಧ್ಯಯನ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಕೆ ಮಾಡಿ ಹೊರಬಮದ ಬಿಜೆಪಿ ನಾಯಕರು.ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯದಾದ್ಯಂತ ಬರ ಪ್ರವಾಸ ಕೈಗೊಂಡಿತ್ತು.

 ಶರ್ಮಾ ದಂಪತಿ

ಶರ್ಮಾ ದಂಪತಿ

ಖಾಸಗಿ ಕಂಪನಿಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿಕಿತಾ ಶರ್ಮಾ. ಮುಂಬೈ ಇಂಡಿಯನ್ಸ್ ನಾಯಕರಾಗಿರುವ ಶರ್ಮಾ ಐಪಿಎಲ್ ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಹೇಗಿದೆ ಲುಕ್?

ಹೇಗಿದೆ ಲುಕ್?

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಮತ್ತು ನಿರ್ಮಾಪಕಿ ನೀತು ಚಂದ್ರ ಮುಂಬೈನ ಕಾರ್ಯಕ್ರಮವೊಂದರ ವೇಳೆ ಕಾಣಿಸಿಕೊಂಡಿದ್ದು ಹೀಗೆ.

 ಅಂತೂ ಬಂಧನ

ಅಂತೂ ಬಂಧನ

ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಿದ ಬಿಹಾರ ಜೆಡಿ (ಯು)ನ ಶಾಸಕಿ ಮನೋರಮಾ ದೇವಿ ಹಾಗೂ ಬಿಂದಿ ಯಾದವ್‌ ಪುತ್ರ ರಾಕಿ ಯಾದವ್‌ ನನ್ನು ಬಂಧಿಸಿ ಕರೆತಂದ ಪೊಲೀಸರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Indian philosopher saint Basaveshwara's birth anniversary being celebrated for the first time on British soil with an event at his statue in London. People use telescopes with special filters to watch the planet Mercury as it makes a rare transit across the Sun in Mumbai.
Please Wait while comments are loading...