ಪುಣೆಯಲ್ಲಿ ಕೊಹ್ಲಿ ಟ್ರೆಕ್ಕಿಂಗ್, ಬೆಂಗ್ಳೂರಲ್ಲಿ ಕ್ಲಾರ್ಕ್ ಜತೆ ಮೀಟಿಂಗ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ನಂತರ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ ಕೊಹ್ಲಿ ಮಾಡಿದ್ದೇನು? ಭಾರೀ ಬೇಸರಕ್ಕೊಳಗಾಗಿದ್ದ ಅವರು, ಆ ಬೇಜಾರಿನಿಂದ ಹೊರಬರಲು ಗುಡ್ಡ ಹತ್ತಿದ್ದರಂತೆ!

ಗುಡ್ಡ ಹತ್ತೋದ್ರಿಂದ ಬೇಜಾರು ಹೋಗುತ್ತಾ ಅಂತ ಕೇಳಬಹುದು. ಆದರೆ, ಮನಸ್ಸನ್ನು ತಮಗಿಷ್ಟವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಬೇಸರವು ಮನಸ್ಸಿನ ಶಕ್ತಿಯನ್ನು ಸಂಪೂರ್ಣವಾಗಿ ಆಪೋಶನ ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಬಹುದು. ಅದನ್ನೇ ಕೊಹ್ಲಿ ಮಾಡಿದ್ದರು.

ಇನ್ನು, ಬೆಂಗಳೂರಿನಲ್ಲಿ ಇದೇ ಶನಿವಾರದಿಂದ (ಮಾ. 4) ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿದೆ. ಹಾಗಾಗಿ, ಆ ಪಂದ್ಯದ ಕಾಮೆಂಟೇಟರ್ ಆಗಿ ಬಂದಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಬೆಂಗಳೂರಿನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿದ್ದರು.

ಇನ್ನು, ಮುಂಬೈನಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಹೊಸ ಚಿತ್ರ 'ಸರ್ಕಾರ್ 3' ಟ್ರೈಲರ್ ಬಿಡುಗಡೆಯಾಗಿದ್ದು ಅದರಲ್ಲಿ ಭಾಗವಹಿಸಿದ್ದ ನಟರಾದ ಜಾಕಿ ಶ್ರಾಫ್ ಹಾಗೂ ಅಮಿತಾಭ್ ಬಚ್ಚನ್ ಎಲ್ಲರ ಗಮನ ಸೆಳೆದರು.

ಇಂಥವೇ ಕೆಲವಾರು ಸುದ್ದಿಗಳ ಸಂಕ್ತಿಪ್ತ ಮಾಹಿತಿ ಫೋಟೋ ಸಹಿತ ಇಲ್ಲಿದೆ.

ಸೋಲಿನ ಕಹಿ ಮರೆಯಲು ಕಸರತ್ತು

ಸೋಲಿನ ಕಹಿ ಮರೆಯಲು ಕಸರತ್ತು

ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ನಂತರ, ಪುಣೆಯ ಬಳಿಯಲ್ಲಿನ ಗುಡ್ಡವೊಂದಕ್ಕೆ ಟ್ರೆಕ್ಕಿಂಗ್ ಹೋಗಿ ಸೋಲಿನ ನೋವಿನಿಂದ ಹೊರಬರಲು ಯತ್ನಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆ ಫೋಟೋವನ್ನು ಈಗ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಕ್ರಿಕೆಟ್ ತಾರೆಗಳ ಉಭಯ ಕುಶಲೋಪರಿ

ಕ್ರಿಕೆಟ್ ತಾರೆಗಳ ಉಭಯ ಕುಶಲೋಪರಿ

ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಜತೆಗೆ ಫೋಟೋಕ್ಕೆ ಪೋಸು ನೀಡಿದರು.

ಆತಂಕದಲ್ಲಿ ಭಕ್ತಾದಿಗಳು

ಆತಂಕದಲ್ಲಿ ಭಕ್ತಾದಿಗಳು

ಪಾಟ್ನಾದಲ್ಲಿರುವ ತಖ್ತ್ ಹರ್ಮಾದಿರ್ ಸಾಹಿಬ್ ದರ್ಗಾದ (ಗುರುದ್ವಾರ) ಸ್ಫೋಟಗೊಳಿಸುವುದಾಗಿ ಅನೇಕ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ದರ್ಗಾಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಸರ್ಕಾರ್ ಮೂರನೇ ಆವೃತ್ತಿ

ಸರ್ಕಾರ್ ಮೂರನೇ ಆವೃತ್ತಿ

ಭಾರತೀಯ ಚಲನಚಿತ್ರ ರಂಗದಲ್ಲಿ ಭೂಗತ ಲೋಕದ ಚಿತ್ರಗಳ ಹೊಸ ಟ್ರೆಂಡ್ ಸೃಷ್ಟಿಸಿದ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರ ಹೊಸ ಚಿತ್ರ 'ಸರ್ಕಾರ್ 3' ಚಿತ್ರದ ಟ್ರೈಲರ್ ಇತ್ತೀಚೆಗೆ ಮುಂಬೈನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಈ ಸಮಾರಂಭದಲ್ಲಿ ಬಾಲಿವುಡ್ ನಟರಾದ ಜಾಕಿಶ್ರಾಫ್ ಹಾಗೂ ಅಮಿತಾಭ್ ಬಚ್ಚನ್ ಕಂಡಿದ್ದು ಹೀಗೆ.

ಭಾರತ ವಿರುದ್ಧದ ಸೆಣಸಿಗಾಗಿ ಸಿದ್ಧತೆ

ಭಾರತ ವಿರುದ್ಧದ ಸೆಣಸಿಗಾಗಿ ಸಿದ್ಧತೆ

ಶನಿವಾರದಿಂದ (ಫೆ. 4) ಆರಂಭಗೊಳ್ಳಲಿರುವ ಭಾರತ ವಿರುದ್ಧದ ದ್ವಿತೀಯ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಿರತರಾಗಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್.

ತಂದೆ, ಜನನಾಯಕ ಕರುಣಾ ನಿಧಿ ಜತೆ

ತಂದೆ, ಜನನಾಯಕ ಕರುಣಾ ನಿಧಿ ಜತೆ

ಇತ್ತೀಚೆಗೆ, ತಮ್ಮ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಅವರು, ತಮ್ಮ ತಂದೆ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಆಶೀರ್ವಾದ ಪಡೆಯುವಾಗ ತೆಗೆದ ಚಿತ್ರವಿದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+