• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರರಿಂದ ಪೊಲೀಸರ ಹತ್ಯೆ : ಅಧಿಕಾರಿಗಳ ರಾಜೀನಾಮೆ ಸುದ್ದಿ ಸುಳ್ಳು

|

ಬೆಂಗಳೂರು, ಸೆಪ್ಟೆಂಬರ್ 21 : ಮೂವರು ಪೊಲೀಸರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹೊರಬರುತ್ತಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಆರು ಸ್ಪೆಷಲ್ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಇಲ್ಲಿ 30 ಸಾವಿರಕ್ಕೂ ಹೆಚ್ಚು ವಿಶೇಷ ಪೊಲೀಸ್ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕೆಲ ಆಡಳಿತಾತ್ಮಕ ಕಾರಣಗಳಿಂದಾಗಿ ಕೆಲವರ ಸೇವೆಯನ್ನು ನವೀಕರಣಗೊಳಿಸಿಲ್ಲ. ಅಂಥವರು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇದೇ ಸಂಗತಿಯನ್ನು ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿ ಕೆಲವು ಕುತಂತ್ರಿಗಳು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಸಚಿವಾಲಯ ಸ್ಪಷ್ಟನೆ ನೀಡಿದೆ.

ಉಗ್ರರಿಂದ ಜಮ್ಮು ಮತ್ತು ಕಾಶ್ಮೀರದ ಅಪಹೃತ ಪೊಲೀಸರ ಬರ್ಬರ ಹತ್ಯೆ

ಕೆಲ ದಿನಗಳ ಹಿಂದೆ ಅಪಹರಣಗೊಂಡಿದ್ದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯ ಉಗ್ರರು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ, ಈ ಘಟನೆಯಿಂದ ಆಘಾತಗೊಂಡು 6 ಜನ ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಇದನ್ನು ಗೃಹ ಸಚಿವಾಲಯ ಅಲ್ಲಗಳೆದಿದೆ.

ಪೊಲೀಸ್ ವಶದಲ್ಲಿರುವ ಹನ್ನೆರಡು ಉಗ್ರರನ್ನು ಬಿಡುಗಡೆ ಮಾಡಬೇಕೆಂದು ಉಗ್ರ ಸಂಘಟನೆ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಮೂರು ದಿನಗಳ ಗಡುವನ್ನೂ ನೀಡಿತ್ತು. ಆದರೆ, ಪೊಲೀಸ್ ವಶದಲ್ಲಿರುವ ಉಗ್ರರನ್ನು ಬಿಡುಗಡೆ ಮಾಡದಿದ್ದರಿಂದ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನು ಉಗ್ರರು ಅಪಹರಿಸಿದ್ದರು. ಈಗ ಅವರನ್ನೇ ಹತ್ಯೆ ಮಾಡಲಾಗಿದ್ದು, ಶೋಪಿಯನ್ ಜಿಲ್ಲೆಯಲ್ಲಿ ಅವರ ದೇಹವನ್ನು ವಶಕ್ಕೆ ಪಡೆಯಲಾಗಿದೆ.

ಮುಸ್ಲಿಮರ ಸ್ಮಶಾನದಲ್ಲಿ ಭಯೋತ್ಪಾದಕರ ಶವಸಂಸ್ಕಾರಕ್ಕೆ ಸಿಗಲಿಲ್ಲ ಜಾಗ!

ಉಗ್ರರನ್ನು ಬಿಡುಗಡೆ ಮಾಡದಿದ್ದರೆ ಮತ್ತು ಪೊಲೀಸರು ತಮ್ಮ ಹುದ್ದೆಗೆ ರಾಜೀನಾಮೆ ನೀಡದಿದ್ದರೆ ಕಾಶ್ಮೀರದಲ್ಲಿರುವ ಪ್ರತಿ ಸರಕಾರಿ ನೌಕರರನ್ನು ಹತ್ಯೆ ಮಾಡುವುದಾಗಿ ಉಗ್ರರು ಬೆದರಿಕೆ ಒಡ್ಡಿರುವುದಾಗಿಯೂ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿಯೇ ಆರು ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆ ಕೂಡ ಅಲ್ಲಗಳೆದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News about SPOs resigning in J & K is not true : Home ministry has clarified. There was news that special police officers in Jammu and Kashmir have resigned after Hizbul Mujahiddin had killed 3 policemen.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more