Tirupati: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ನಿಯಮ!
Tirupati Tirumala New Rules: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನೂ ಮಾಡಲಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ. ಇತ್ತೀಚಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅವಘಡ ಸಂಭವಿಸಿತ್ತು. ತಿರುಪತಿ ತಿರುಮಲ ಸಂಭವಿಸಿದ ಕಾಲ್ತುಳಿತದಲ್ಲಿ 6 ಜನ ಮೃತಪಟ್ಟು 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. ಅಲ್ಲದೆ ಮೆಟ್ಟಿಲು ಮೇಲಿಂದ ಜಾರಿ ಬಿದ್ದು 3 ವರ್ಷದ ಬಾಲಕನ ಸಾವು ಹಾಗೂ ಅಗ್ನಿ ಅವಘಡ ಸಂಭವಿಸಿದ್ದು. ಇದಾದ ಮೇಲೆ ತಿರುಪತಿಯಲ್ಲಿ ಹಲವು ಮುಂಜಾಗತ್ರಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೀಗ ದರ್ಶನಕ್ಕೆ ದಾಖಲೆಯೊಂದರ ದೃಢೀಕರಣ ಕಡ್ಡಾಯ ಮಾಡಲಾಗಿದೆ. ಅದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಭಾರತದ ಶ್ರೀಮಂತ ಹಾಗೂ ದಕ್ಷಿಣ ಭಾರತದ ಪ್ರಮುಖ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ತಿರುಪತಿ ತಿರುಮಲದಲ್ಲಿ ಹೊಸ ನಿಯಮವೊಂದನ್ನು ಜಾರಿ ಮಾಡಲಾಗಿದೆ. ನಿತ್ಯವೂ ಇಲ್ಲಿಗೆ ಲಕ್ಷಾಂತರ ಜನ ಭಕ್ತಾದಿಗಳು ಆಗಮಿಸುತ್ತಿದ್ದು. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ, ಭಕ್ತರ ಸುರಕ್ಷತೆ ಹಾಗೂ ಸೇವೆಯ ದೃಷ್ಟಿಯಿಂದ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಆಧಾರ್‌ಗೆ ಸಂಬಂಧಿಸಿದ ನಿಯಮವೂ ಸೇರಿದೆ.

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಅವಘಡಗಳು ಸಂಭವಿಸುತ್ತಿರುವ ಬಗ್ಗೆ ವರದಿ ಹೆಚ್ಚಾಗಿದೆ. ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದವಾದ ಲಡ್ಡುವಿನಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎನ್ನುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಾದ ಮೇಲೆ ಲಡ್ಡು ತಯಾರಿಕೆ ವಿಚಾರದಲ್ಲಿ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಇದೀಗ ಟಿಕೆಟ್‌ಗೊಂದಲ ಹಿನ್ನೆಲೆಯಲ್ಲಿ ಟಿಕೆಟ್ ಕೊಡುವುದರಲ್ಲೂ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇನ್ಮುಂದೆ ಭಕ್ತರು ದರ್ಶನ, ಸೇವೆ, ಟಿಕೆಟ್ ಬುಕ್ಕಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಆಧಾರ್ ದೃಢೀಕರಣ ಮತ್ತು ಇ -ಕೆವೈಸಿಯನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಆಧಾರ್ ದೃಢೀಕರಣ ಅಳವಡಿಸಿಕೊಳ್ಳಲು ಇಲ್ಲಿನ ಟಿಟಿಡಿಯು ದತ್ತಿ ಇಲಾಖೆಗೆ ಪತ್ರವನ್ನು ಬರೆದಿತ್ತು. ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲೇ ಅನುಮತಿ ನೀಡಿತ್ತಾದರೂ ಇದೀಗ ಇದನ್ನು ಜಾರಿ ಮಾಡಲಾಗುತ್ತಿದೆ.
ಯಾವ ಕಾರಣಕ್ಕೆ ಹೊಸ ನಿಯಮ ಜಾರಿ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಎರಡು ಕಾರಣಗಳಿಗೆ ಈ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ. ಮೊದಲನೆಯದಾಗಿ ಎಲ್ಲರಿಗೂ ಸುಗಮ ದರ್ಶನದ ವ್ಯವಸ್ಥೆ ಮಾಡುವುದು ಮತ್ತೊಂದು ಅಕ್ರಮವಾಗಿ ಟಿಕೆಟ್ ಖರೀದಿಸಲು ಅನ್ಯರ ಗುರುತನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸುವುದೇ ಆಗಿದೆ ಎಂದು ಟಿಟಿಡಿ ಹೇಳಿದೆ.
ಮಧ್ಯವರ್ತಿಗಳು ಟಿಕೆಟ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಸಹ ಇತ್ತೀಚಿನ ದಿನಗಳಲ್ಲಿ ಕೇಳಿ ಬಂದಿತ್ತು. ಇದೀಗ ಈ ಎಲ್ಲಾ ಅಕ್ರಮಗಳಿಗೂ ಕಡಿವಾಣ ಹಾಕುವುದಕ್ಕೆ ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇನ್ಮುಂದೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಆಧಾರ್ ಕಾರ್ಡ್ ದೃಢೀಕರಣ ಹಾಗೂ ಇಕೆವೈಸಿ ಕಡ್ಡಾಯವಾಗಿದೆ.












Click it and Unblock the Notifications