ಹೊಸ ರಾಷ್ಟ್ರಪಿತ ದೇಶಕ್ಕಾಗಿ ಏನು ಮಾಡಿದ್ದಾರೆ? ಮೋದಿ ವಿರುದ್ಧ ನಿತೀಶ್ ಕುಮಾರ್ ಕಿಡಿ

ನವದೆಹಲಿ, ಜ. 01: ಅಮೃತಾ ಫಡ್ನವಿಸ್ ಅವರ "ಪ್ರಧಾನಿ ನರೇಂದ್ರ ಮೋದಿ ನವ ಭಾರತದ ರಾಷ್ಟ್ರಪಿತ" ಹೇಳಿಕೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಿಡಿಕಾರಿದ್ದಾರೆ.

ಹೇಳಿಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, 'ನವ ಭಾರತ'ದ 'ನವ ರಾಷ್ಟ್ರಪಿತ' ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಡಿಸೆಂಬರ್ 21 ರಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ಪ್ರಧಾನಿ ಮೋದಿಯನ್ನು 'ನವ ಭಾರತದ ರಾಷ್ಟ್ರಪಿತ' ಎಂದು ಕರೆದಿದ್ದರು.

New Father of Nation Remark; Nitish Kumar Slams PM Modi

"ಭಾರತವು ರಾಷ್ಟ್ರದ ಇಬ್ಬರು ರಾಷ್ಟ್ರಪಿತರನ್ನು ಹೊಂದಿದೆ. ಒಬ್ಬರು ಹಿಂದಿನ ಭಾರತಕ್ಕೆ ಸೇರಿದವರು ಮತ್ತು ಇನ್ನೊಬ್ಬರು ನವ ಭಾರತಕ್ಕಾಗಿ. ಮಹಾತ್ಮ ಗಾಂಧಿ ಅವರು ಭಾರತದ 'ರಾಷ್ಟ್ರಪಿತ' ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನವ ಭಾರತದ ರಾಷ್ಟ್ರ 'ಪಿತಾಮಹ' ಎಂದು ನಾನು ನಂಬುತ್ತೇನೆ" ಎಂದು ಅಮೃತಾ ಫಡ್ನವಿಸ್ ಹೇಳಿದ್ದರು.

ಅಮೃತಾ ಫಡ್ನವೀಸ್ ಹೇಳಿಕೆಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ನಿತೀಶ್ ಕುಮಾರ್, 'ಸ್ವಾತಂತ್ರ್ಯ ಹೋರಾಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಆರ್‌ಎಸ್‌ಎಸ್ ಕೊಡುಗೆ ನೀಡಿಲ್ಲ. ಆದರೂ ಈಗ ಅವರು ರಾಷ್ಟ್ರದ ಹೊಸ ಪಿತಾಮಹ ಎಂಬ ಹೇಳಿಕೆಯನ್ನು ನಾವು ಓದುತ್ತಿದ್ದೇವೆ. ರಾಷ್ಟ್ರಕ್ಕಾಗಿ ಈ ಹೊಸ ಭಾರತದ 'ಹೊಸ ಪಿತಾಮಹ' ಏನು ಮಾಡಿದ್ದಾರೆ?" ಎಂದು ಕೇಳಿದ್ದಾರೆ.

ಇನ್ನು, ಮಹಾತ್ಮಾ ಗಾಂಧಿಯವರನ್ನು ಯಾರೊಂದಿಗೂ ಹೋಲಿಸಲಾಗುವುದಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದು. ಬಿಜೆಪಿಯ ನವ ಭಾರತ, ನವ ಪಿತಾಮಹ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

"ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಯಾರೊಂದಿಗೂ ಹೋಲಿಸಲಾಗುವುದಿಲ್ಲ. ಬಿಜೆಪಿಯ 'ಹೊಸ ಭಾರತ' ಕೇವಲ ಕೆಲವು ಅತಿ ಶ್ರೀಮಂತ ಸ್ನೇಹಿತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವುದಾಗಿದೆ. ದೇಶದ ಉಳಿದ ಜನಸಂಖ್ಯೆಯು ಬಡತನ ಮತ್ತು ಹಸಿವಿನಲ್ಲಿ ಉಳಿದಿದೆ. ನಮಗೆ ಈ 'ನವ ಭಾರತ' ಅಗತ್ಯವಿಲ್ಲ" ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.

New Father of Nation Remark; Nitish Kumar Slams PM Modi

ಕೆಲವೇ ಶ್ರೀಮಂತ ಉದ್ಯಮಿಗಳಿಗಾಗಿ ಮೋದಿಜಿಯನ್ನು ನವಭಾರತದ ರಾಷ್ಟ್ರಪಿತರನ್ನಾಗಿ ಮಾಡಲು ಅವರು ಬಯಸಿದರೆ, ಬಿಜೆಪಿ ಅದನ್ನು ಮಾಡಲಿ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಕೂಡ, "ಬಿಜೆಪಿಯಲ್ಲಿ ಇಬ್ಬರು ಪಿತಾಮಹರಿರಬಹುದು. ಆದರೆ ದೇಶದಲ್ಲಿ ಅಲ್ಲ. ದೇಶಕ್ಕೆ ಒಬ್ಬರೇ ರಾಷ್ಟ್ರಪಿತ" ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿಯ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+