ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ ವಿವರವಾದ ವೇಳಾಪಟ್ಟಿ ಇಲ್ಲಿದೆ

By Srinath
|
Google Oneindia Kannada News

ನವದೆಹಲಿ, ಮಾರ್ಚ್ 5: ಕೇಂದ್ರ ಚುನಾವಣಾ ಆಯೋಗವು 16 ನೆಯ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮುಖ್ಯ ಚುನಾವಣಾ ಆಯುಕ್ತ ವಿಎಸ್ ಸಂಪತ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ್ದಾರೆ.

16 ನೆಯ ಲೋಕಸಭಾ ಚುನಾವಣೆಯು ಏಪ್ರಿಲ್ 7 ರಿಂದ ಆರಂಭವಾಗಿ 9 ಹಂತಗಳಲ್ಲಿ ನಡೆಯಲಿದ್ದು ಮೇ 12ಕ್ಕೆ ಮುಗಿಯಲಿದೆ. ಫಲಿತಾಂಶವು ಮೇ 16ರಂದು ಪ್ರಕಟವಾಗಲಿದೆ. ಇದರೊಂದಿಗೆ ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಚುನಾವಣೆಗಳು ಮುಗಿಯುವವರೆಗೂ ನೀತಿಸಂಹಿತೆ ಜಾರಿಯಲ್ಲಿರುತ್ತದೆ.

ಕರ್ನಾಟಕದಲ್ಲಿ ಏಪ್ರಿಲ್ 17ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಗುರುವಾರದಂದು ಎಲ್ಲ 28 ಕ್ಷೇತ್ರಗಳಿಗೂ ಒಟ್ಟಿಗೇ ಚುನಾವಣೆ ನಡೆಲಿದೆ.

New Delhi - Election Commissioner VS Sampath announces dates for Lok Sabha Election- 2014
16 ನೆಯ ಲೋಕಸಭಾ ಚುನಾವಣೆ ವೇಳಾಪಟ್ಟಿ ಹೀಗಿದೆ:
1) ಏಪ್ರಿಲ್ 7: 2 ರಾಜ್ಯಗಳಲ್ಲಿ 6 ಕ್ಷೇತ್ರಗಳಲ್ಲಿ.
2) ಏಪ್ರಿಲ್ 9: 5 ರಾಜ್ಯಗಳಲ್ಲಿ 7 ಕ್ಷೇತ್ರಗಳಲ್ಲಿ.
3) ಏಪ್ರಿಲ್ 10: 14 ರಾಜ್ಯಗಳಲ್ಲಿ 92 ಕ್ಷೇತ್ರಗಳಲ್ಲಿ.
4) ಏಪ್ರಿಲ್ 12: 3 ರಾಜ್ಯಗಳಲ್ಲಿ 5 ಕ್ಷೇತ್ರಗಳಲ್ಲಿ.
5) ಏಪ್ರಿಲ್ 17: 13 ರಾಜ್ಯ+ ಕೇಂದ್ರಾಡಳಿತಗಳಲ್ಲಿ 122 ಕ್ಷೇತ್ರಗಳಲ್ಲಿ.
6) ಏಪ್ರಿಲ್ 24: 12 ರಾಜ್ಯಗಳಲ್ಲಿ 117 ಕ್ಷೇತ್ರಗಳಲ್ಲಿ.
7) ಏಪ್ರಿಲ್ 30: 9 ರಾಜ್ಯಗಳಲ್ಲಿ 89 ಕ್ಷೇತ್ರಗಳಲ್ಲಿ.
8) ಮೇ 7: 7 ರಾಜ್ಯಗಳಲ್ಲಿ 64 ಕ್ಷೇತ್ರಗಳಲ್ಲಿ.
9) ಮೇ 12: 3 ರಾಜ್ಯಗಳಲ್ಲಿ 41 ಕ್ಷೇತ್ರಗಳಲ್ಲಿ.
ಒಟ್ಟು 543 ಕ್ಷೇತ್ರಗಳ ಫಲಿತಾಂಶ ಮೇ 16 (ಶುಕ್ರವಾರ) ಪ್ರಕಟ.

ಗಮನಾರ್ಹವೆಂದರೆ ಏಕೀಕೃತ ಆಂಧ್ರ ಪ್ರದೇಶ ಸೇರಿದಂತೆ ಒಡಿಶಾ, ಸಿಕ್ಕಿಂ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಜತೆಜತೆಗೆ ಆಯಾ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. 15 ನೆಯ ಲೋಕಸಭಾ ಚುನಾವಣೆಯು 2009ರ ಏಪ್ರಿಲ್ 16 ರಿಂದ ಮೇ 13 ರವರೆಗೂ 5 ಹಂತಗಳಲ್ಲಿ ನಡೆದಿತ್ತು.

ರಾಜ್ಯವಾರು

ಬಿಹಾರ : ಏಪ್ರಿಲ್ 10, 17, 24, 30 ಮೇ 7, 12
ಒಡಿಶಾ : ಏಪ್ರಿಲ್ 10, 17
ಪಶ್ಚಿಮ ಬಂಗಾಳ : ಏಪ್ರಿಲ್ 17, 24, 30 ಮೇ 7, 12
ಛತ್ತೀಸ್ ಗಢ: ಏಪ್ರಿಲ್ 10, 17, 24
ಜಾರ್ಖಂಡ್: ಏಪ್ರಿಲ್ 10, 17, 24
ಮಧ್ಯಪ್ರದೇಶ: ಏಪ್ರಿಲ್ 10, 17, 24
ಗೋವಾ: ಏಪ್ರಿಲ್ 17
ಗುಜರಾತ್: ಏಪ್ರಿಲ್ 30
ಮಹಾರಾಷ್ಟ್ರ: ಏಪ್ರಿಲ್ 10, 17, 24
ರಾಜಸ್ಥಾನ: ಏಪ್ರಿಲ್ 17, 24
ಹರ್ಯಾಣಾ: ಏಪ್ರಿಲ್ 10
ಹಿಮಾಚಲ ಪ್ರದೇಶ: ಮೇ 7
ಜಮ್ಮು ಕಾಶ್ಮೀರ: ಏಪ್ರಿಲ್ 10, 17, 24, 30 ಮೇ 7
ಪಂಜಾಬ್: ಏಪ್ರಿಲ್ 30
ಉತ್ತರ ಪ್ರದೇಶ: ಏಪ್ರಿಲ್ 10, 17, 24, 30 ಮೇ 7, 12
ಉತ್ತರಾಖಂಡ: ಮೇ 7
ಕರ್ನಾಟಕ: ಏಪ್ರಿಲ್ 17
ಕೇರಳ: ಏಪ್ರಿಲ್ 10
ತಮಿಳುನಾಡು: ಏಪ್ರಿಲ್ 24
ಆಂಧ್ರಪ್ರದೇಶ: (ತೆಲಂಗಾಣಕ್ಕೆ ಏಪ್ರಿಲ್ 30 ಮತ್ತು ಸೀಮಾಂಧ್ರಕ್ಕೆ ಮೇ 7)
ಮಣಿಪುರ: ಏಪ್ರಿಲ್ 10, 17
ಮೇಘಾಲಯ: ಏಪ್ರಿಲ್ 9,
ಮಿಜೋರಾಂ: ಏಪ್ರಿಲ್ 9
ನಾಗಾಲ್ಯಾಂಡ್: ಏಪ್ರಿಲ್ 9
ಅರುಣಾಚಲ ಪ್ರದೇಶ: ಏಪ್ರಿಲ್ 9
ಅಸ್ಸಾಂ: ಏಪ್ರಿಲ್ 7, 12, 24
ಸಿಕ್ಕಿಂ: ಏಪ್ರಿಲ್ 12
ತ್ರಿಪುರಾ: ಏಪ್ರಿಲ್ 7, 12

ಕೇಂದ್ರಾಡಳಿತ ಪ್ರದೇಶಗಳು:
ಅಂಡಮಾನ್: ಏಪ್ರಿಲ್ 10
ಚಂಡೀಗಢ: ಏಪ್ರಿಲ್ 10
ದಾದ್ರಾ ನಗರ ಹವೇಲಿ: ಏಪ್ರಿಲ್ 30
ದಾಮನ್ ದಯು: ಏಪ್ರಿಲ್ 30
ಲಕ್ಷದ್ವೀಪ: ಏಪ್ರಿಲ್ 10
ಪುದುಚೇರಿ: ಏಪ್ರಿಲ್ 24
ದೆಹಲಿ: ಏಪ್ರಿಲ್ 10

English summary
New Delhi - Election Commision announces dates for Lok Sabha Election- 2014. The schedule for the 2014 Lok Sabha elections is announced by the Chief Election Commissioner VS Sampath on Wednesday (March 5). With the announcement of poll dates, the Model Code of Conduct for governments and political parties will come into force with immediate effect. Polls will be from April 7 to May 12 in 9 phases. Results on May 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X