ನಕಲಿ ವಿಡಿಯೋ ಮಾಡಿದ್ರೆ ಲಾಭ ಏನು? ರಾಹುಲ್ ಪ್ರಶ್ನೆ

Subscribe to Oneindia Kannada

ನವದೆಹಲಿ, ಫೆಬ್ರವರಿ, 23: ಜವಾಹರಲಾಲ್ ವಿವಿ ಗೊಂದಲಕ್ಕೆ ಕೈ ಜೋಡಿಸಲು ತೆರಳಿದ್ದ ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳು "ಗೋ ಬ್ಯಾಕ್' ಎಂದಿದ್ದರು. ಆದರೆ ಇದೀಗ ರಾಹುಲ್ ಗಾಂಧಿ ರೋಹಿತ್ ವೇಮುಲ ಪರ ನಡೆಯುತ್ತಿರುವ ಪ್ರತಿಭಟನೆಗೆ ಜೈ ಎಂದಿದ್ದು ವಿದ್ಯಾರ್ಥಿಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಿದ್ದಾರೆ.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಖಂಡಿಸಿ ನವದೆಹಲಿಯ ಜಂತರ್ ಮಂತರ್ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಗಾಂಧಿ, ಕೇಂದ್ರ ಸರ್ಕಾರ ಮತ್ತು ಆರ್ ಎಸ್ ಎಸ್ ನಕಲಿ ವಿಡಿಯೋಗಳ ಬಿಡುಗಡೆ ಮಾಡಿ ಯಾರ ತೇಜೋವಧೆ ಮಾಡಲು ಹೊರಟಿದೆ ಎಂದು ಪ್ರಶ್ನೆ ಮಾಡಿದರು.[ಪಿಟಿಐ ಚಿತ್ರಗಳು]

ಮಾತನಾಡದ ರಾಷ್ಟ್ರಪತಿ

ಮಾತನಾಡದ ರಾಷ್ಟ್ರಪತಿ

ದೇಶದ ವಿದ್ಯಾರ್ಥಿ ವಲಯದಲ್ಲಿ ಇಷ್ಟೊಂದು ಗೊಂದಲಗಳು ಇದ್ದರೂ ಪಾರ್ಪಿಮೆಂಟಿನ ಉಭಯ ಸದನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಂದು ಮಾತು ಆಡಲಿಲ್ಲ ಯಾಕೆಂದರೆ ಕೇಂದ್ರ ಸರ್ಕಾರ ಇದನ್ನು ಮಹತ್ವದ ವಿಷಯ ಎಂದೇ ಪರಿಗಣಿಸಿಲ್ಲ.

ಆರ್ ಎಸ್ ಎಸ್ ಐಡಿಯಾಲಜಿ

ಆರ್ ಎಸ್ ಎಸ್ ಐಡಿಯಾಲಜಿ

ಕೇಂದ್ರ ಸರ್ಕಾರ ಎಲ್ಲ ವಿವಿಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಆರ್ ಎಸ್ ಎಸ್ ಸಿದ್ಧಾಂತಗಳನ್ನು ಹೇರಹೊಟರಟಿದೆ ಎಂದು ರಾಹುಲ್ ಆರೋಪಿಸಿದರು.

ನಾವು ಸುಮ್ಮನಿರಲ್ಲ

ನಾವು ಸುಮ್ಮನಿರಲ್ಲ

ವಿದ್ಯಾರ್ಥಿಗಳನ್ನು ನಿಗ್ರಹ ಮಾಡಬೇಕು ಎಂಬ ಕಾರಣಕ್ಕೆ ಸಲ್ಲದ ಕಾನೂನುಗಳನ್ನು ತಂದರೆ ನಾವು ಸುಮ್ಮನಿರಲ್ಲ ಎಂದು ರಾಹುಲ್ ಎಚ್ಚರಿಸಿದರು.

ಒಡೆದು ಆಳುವ ನೀತಿ

ಒಡೆದು ಆಳುವ ನೀತಿ

ಕೇಂದ್ರ ಸರ್ಕಾರ ಕೆಳ ವರ್ಗದ ಜನರಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದೆ. ದಲಿತರನ್ನು ಮತ್ತೆ ಪಂಗಡಗಳಾಗಿ ಒಡೆಯಲು ಮುಂದಾಗಿದೆ.

 ವಿವಿಗಳಲ್ಲಿ ಏನಾಗುತ್ತಿದೆ?

ವಿವಿಗಳಲ್ಲಿ ಏನಾಗುತ್ತಿದೆ?

ವಿಶ್ವವಿದ್ಯಾಲಯಗಳಲ್ಲಿ ಏನಾಗುತ್ತಿದೆ ಎಂಬುದು ಕೇಂದ್ರ ಸರ್ಕಾರಕ್ಕೆ ಗೊತ್ತೆ? ಸಲ್ಲದ ಕಾನೂನು ಜಾರಿ ಮಾಡುವ ಮೊದಲು ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ರಾಹುಲ್ ಸಲಹೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mounting a fresh attack, Congress Vice President Rahul Gandhi on Tuesday, Feb 23 accused Modi government and RSS of crushing voices of dissent of college and university students across the country and pitched for a law to protect them from "discrimination" and "suppression". "We need a law to ensure that students in colleges and universities do not face discrimination and their voice is not stifled," Rahul said lending his support to hundreds of students who took out a march demanding justice for Hyderabad University research scholar Rohith Vemula, and Kanhaiya Kumar, the JNU student arrested on charges of sedition.
Please Wait while comments are loading...