ಮಂಗಳೂರಿನ ಕಚ್ಚಾ ತೈಲ ಸಂಗ್ರಹಾಗಾರಕ್ಕೆ ಯುಎಇ ಇಂಧನ

Posted By:
Subscribe to Oneindia Kannada

ನವದೆಹಲಿ, ಜನವರಿ 26: ಮಂಗಳೂರಿನಲ್ಲಿರುವ ಭೂಗರ್ಭ ಕಚ್ಚಾ ತೈಲ ಸಂಗ್ರಹಾಗಾರದ ಸಾಮರ್ಥ್ಯದ ಅರ್ಧದಷ್ಟು ಭಾಗದ ತೈಲವನ್ನು ತನ್ನ ಕಚ್ಚಾ ತೈಲ ಸಂಗ್ರಹದಿಂದ ಕಳುಹಿಸುವ ಮಹತ್ವದ ಒಪ್ಪಂದವೊಂದಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಒಪ್ಪಿದ್ದು, ಈ ನಿಟ್ಟಿನಲ್ಲಿ, ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿರುವ ಅಬುಧಾಬಿಯ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್- ನಹ್ಯಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಬುಧವಾರ ನಡೆದ ಮಾತುಕತೆಯ ನಂತರ ಈ ಒಪ್ಪಂದದ ಬಗ್ಗೆ ಪ್ರಕಟಿಸಲಾಗಿದೆ.

New Deal To Have UAE Fill Half Of Underground Oil Facility In Mangalore

ಈ ಒಪ್ಪಂದದ ಪ್ರಕಾರ, ಯುಎಇ ಸರ್ಕಾರವು ಮಂಗಳೂರಿನಲ್ಲಿ ಸಂಗ್ರಹಾಗಾರ ತನ್ನಲ್ಲಿನ ಕಚ್ಚಾ ತೈಲದ ಒಂದು ಭಾಗವನ್ನು ಇರಾನ್ ಭಾರತಕ್ಕೆ ಸರಬರಾಜು ಮಾಡಲಿದೆ. ತುರ್ತು ಪರಿಸ್ಥಿತಿಗಳಲ್ಲಿ ಈ ಸಂಗ್ರಹಾಗಾರದ ತೈಲವನ್ನು ಉಪಯೋಗಿಸುವ ಮೊದಲ ಹಕ್ಕು ಭಾರತದ್ದಾಗಿರುತ್ತದೆ.

ಮಂಗಳೂರಿನಲ್ಲಿ ಈಗಾಗಲೇ ಸ್ಥಾಪಿತವಾಗಿರುವ ತೈಲ ಸಂಗ್ರಹಾಗಾರದಲ್ಲಿ ಇರಾನ್ ತೈಲವನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ, ರಾಜ್ಯದ ಪಡೂರು ಹಾಗೂ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲೂ ಭಾರತ ಸರ್ಕಾರದ ವಿವಿಧ ಭೂಗರ್ಭ ತೈಲ ಸಂಗ್ರಹಾಗಾರಗಳಿವೆ.

ಯುಎಇ ತೈಲ ಸರಬರಾಜಿನಿಂದ ಏನು ಪ್ರಯೋಜನ?
ಯುಎಇ ನೆರವಿನಿಂದ ಭಾರತವು ಸುಮಾರು 36.87 ಮಿಲಿಯನ್ ಬ್ಯಾರೆಲ್ ಗಳಷ್ಟು ಕಚ್ಚಾ ತೈಲ ಸಂಗ್ರಹಾಗಾರವನ್ನು ಸ್ಥಾಪಿಸುವ ಇರಾದೆ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಠಾತ್ ಇಂಧನ ಕ್ಷೋಭೆ ತಲೆದೋರಿದಲ್ಲಿ ಭಾರತಕ್ಕೆ ಸುಮಾರು 10 ದಿನಗಳ ಕಾಲ ತೈಲ ಸರಬರಾಜನ್ನು ಮಂಗಳೂರು ಸಂಗ್ರಹಾಗಾರದಿಂದ ಪೂರೈಸಬಹುದಾಗಿದೆ. ಹಾಗಾಗಿ, ಈ ತೈಲ ಸಂಗ್ರಹಾಗಾರಕ್ಕೆ ತೈಲ ಸಂಪನ್ಮೂಲ ದೇಶಗಳಿಂದ ಕಚ್ಚಾ ತೈಲವನ್ನು ತಂದು ಸುರಿಯುವ ಯೋಜನೆ ಇದಾಗಿದೆ. ಈ ಬೃಹತ್ ಯೋಜನೆಗಾಗಿ 2014ರಲ್ಲೇ ಯುಎಇ ಜತೆಗೆ ಮಾತುಕತೆ ನಡೆಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India has today signed a deal with the United Arab Emirates that allows the Gulf nation to fill half of an underground crude oil storage facility at Mangalore.
Please Wait while comments are loading...