ಭಾರತದಲ್ಲಿ ಉತ್ತುಂಗಕ್ಕೇರಿದ ಕೋವಿಡ್ 19 ಪ್ರಕರಣ, 2 ಅಲೆ ಕಡಿಮೆಯಾಗುವ ನಿರೀಕ್ಷೆ

ನವದೆಹಲಿ, ಮೇ 12: ಭಾರತದಲ್ಲಿ ಕೊರೊನಾ ಸೋಂಕು ಉತ್ತುಂಗಕ್ಕೇರಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಆಂಡ್ ಸೋಶಿಯಲ್ ರಿಸರ್ಚ್‌ನ ಸಂಶೋಧಕರು ನೀಡಿದ ವರದಿ ಪ್ರಕಾರ ಭಾರತದಲ್ಲಿ ಕೊರೊನಾ ಎರಡನೇ ಅಲೆ ಉತ್ತುಂಗಕ್ಕೇರಿದೆ. ಇದು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಮುನ್ಸೂಚನೆ ಎಂದೇ ಅರಿಯಬಹುದಾಗಿದೆ.

ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಇನ್ನೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಆದರೆ ಒಟ್ಟಾರೆ ದೇಶದಲ್ಲಿ ಕೊರೊನಾ ಸೋಂಕಿತರ ಪ್ರಕರಣ ಮುಂದಿನ ದಿನಗಳಲ್ಲಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಈಗ ಗ್ರಾಮೀಣ ಭಾಗಗಳಿಗೆ ಪ್ರವೇಶಿಸಿದೆ, ಹಲವು ರಾಜ್ಯಗಳಲ್ಲಿ ನಿತ್ಯ 30ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ.

New Covid-19 Cases In India Have Peaked, Shows Cambridge Tracker

ಅಸ್ಸಾಂ, ಹಿಮಾಚಲಪ್ರದೇಶ, ತಮಿಳುನಾಡು ಮತ್ತು ತ್ರಿಪುರದಂತಹ ಪ್ರದೇಶಗಳಲ್ಲಿಮುಂದಿನ ಎರಡು ವಾರಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ.

ಮೇ 7 ರಂದು 4,14,188 ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದವು, ಅದೇ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದ್ದು, ಅಂದೇ ಸೋಂಕಿತರ ಸಂಖ್ಯೆ ಉತ್ತುಂಗಕ್ಕೇರಿತ್ತು. ಅದಾದ ಬಳಿಕ ಕ್ರಮೇಣವಾಗಿ ಸೋಂಕಿತರ ಸಂಖ್ಯೆ ಕಡಿಮಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲೂ ಡಬಲ್ ಮ್ಯೂಟೆಂಟ್ ಕೊರೊನಾ ತಳಿ ಕಾಣಿಸಿಕೊಂಡಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ.ಭಾರತದಲ್ಲಿ ಕೊರೊನಾ 2ನೇ ಅಲೆಯ ಭಾರೀ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಡಬಲ್ ಮ್ಯೂಟೆಂಟ್ (ಬಿ.1.167) ಕೊರೊನಾ ತಳಿಯು ರಾಜ್ಯದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.

ಡಬಲ್ ಮ್ಯೂಟೆಂಟ್ ವೈರಸ್ ಎಂದರೇನು?: ರೂಪಾಂತರವಾಗಿರುವ ಎರಡು ವೈರಸ್‌ಗಳು ಒಂದುಗೂಡಿರುವುದನ್ನು ಡಬಲ್ ಮ್ಯೂಟೆಂಟ್ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯ ವೈರಸ್‌ಗಿಂ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+