ನೆಹರೂ ಅಜ್ಜ ಮುಸ್ಲಿಂ: ನರೇಂದ್ರ ಮೋದಿ ಮಾತನಾಡಲಿ
ನವದೆಹಲಿ ಜು, 02: : ಆನ್ಲೈನ್ ವಿಶ್ವಕೋಶ ವಿಕಿಪೀಡಿಯಾದಲ್ಲಿ ಪಂಡಿತ್ ಜವಾಹರ್ಲಾಲ್ ನೆಹರೂ ಕುರಿತ ವೈಯಕ್ತಿಕ ಮಾಹಿತಿ ತಿರುಚಿದ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿವೆ.
ಪ್ರಧಾನ ಮಂತ್ರಿ ಕಚೇರಿಯ ಐಪಿ ವಿಳಾಸದಿಂದಲೇ ತಿದ್ದುಪಡಿ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.[ನೇತಾಜಿ ಮೇಲೆ ಸ್ಪೈ, ನೆಹರೂ ಜನ್ಮ ಜಾಲಾಡಿದ ಟ್ವಿಟ್ಟರಿಗರು]

ಒಂದೆಡೆ ಡಿಜಿಟಲ್ ಇಂಡಿಯಾವನ್ನು ಜಾರಿ ಮಾಡುವ ಪ್ರಧಾನಿ ಇನ್ನೊಂದೆಡೆ ಇಂಥ ಪ್ರಕರಣಗಳ ಬಗ್ಗೆ ಮಾತ್ರ ಮಾತನಾಡುವುದಿಲ್ಲ ಎಂದು ಸುರ್ಜೆವಾಲಾ ಆರೋಪ ಮಾಡಿದ್ದಾರೆ.
ಲಲಿತ್ ಮೋದಿ ವೀಸಾ ವಿವಾದ, ನಕಲಿ ಪದವಿ ವಿವಾದ ದಲ್ಲಿ ಸಿಲುಕಿರುವ ಬಿಜೆಪಿಗೆ ಇಂಥ ವಿಚಾರಗ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವಿಲ್ಲ ಎಂದು ವ್ಯಂಗವಾಡಿದ್ದಾರೆ.[ನೆಹರೂ, ಇಂದಿರಾಗಿಂತ ಮನಮೋಹನ್ ಶ್ರೇಷ್ಠ]
ತಿದ್ದುಪಡಿ ಮಾಡಿದ ವಿಚಾರವೇನು?
ಪಂಡಿತ್ ಜವಾಹರಲಾಲ್ ನೆಹರು ಅವರ ಅಜ್ಜ ಗಂಗಾಧರ ನೆಹರು ಮುಸ್ಲಿಮರಾಗಿದ್ದರು ಎಂದು ತಿದ್ದುಪಡಿಯಾಗಿತ್ತು. ಗಂಗಾಧರ ನೆಹರು ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಘಿಯಾಸುದ್ದೀನ್ ಘಾಜಿ ಎನ್ನುವುದು ಅವರ ಹೆಸರಾಗಿತ್ತು. ಆದರೆ, ಬ್ರಿಟಿಷರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಅವರು ಹಿಂದೂ ಆಗಿ ಮತಾಂತರ ಹೊಂದಿದ್ದರು ಎಂದು ಉಲ್ಲೇಖವಾಗಿದ್ದೇ ವಿವಾದದ ಕೇಂದ್ರ ಬಿಂದು. ಆದರೆ ಈ ಮಾಹಿತಿಗಳನ್ನು ವಿಕಿಪೀಡಿಯಾದ 'ಎನ್ಸೈಕ್ಲೋಪೀಡಿಯಾ ಎಡಿಟರ್' ಸ್ವಯಂ ಡಿಲೀಟ್ ಮಾಡಿದೆ.
ಯಾರೂ ಬೇಕಾದರೂ ತಿದ್ದುಪಡಿ ಮಾಡಬಹುದು
ವಿಕಿಪೀಡಿಯಾದ ಪೇಜ್ ನ್ನು ಯಾರೂ ಬೇಕಾದರೂ ತಿದ್ದುಪಡಿ ಮಾಡಲು ಸಾಧ್ಯವಿದೆ. ಎಡಿಟ್ ಆಯ್ಕೆಗೆ ತೆರಳಿ ಹೊಸ ಮಾಹಿತಿಯನ್ನು ಸೇರಿಸಬಹುದು. ಪ್ರಧಾನಿ ಕಚೇರಿಯಿಂದಲೇ ತಿದ್ದುಪಡಿಯಾಗಿದ್ದು ವಿವಾದ ಮತ್ತಷ್ಟು ತಾರಕ್ಕೇರಲು ಕಾರಣವಾಗಿದೆ. ಆದರೆ ಇಲ್ಲಿಯವರೆಗೆ ಬಿಜೆಪಿ ಅಥವಾ ಯಾವುದೇ ಸಚಿವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.











Click it and Unblock the Notifications