ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಫಣೀಂದ್ರ ರಾಜ್ಯಕ್ಕೆ ಪ್ರಥಮ

ಬೆಂಗಳೂರು, ಜೂನ್ 05: ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ ಪ್ರವೇಶ ಪರೀಕ್ಷೆಯಾದ ನೀಟ್ ನ ಫಲಿತಾಂಶ ಪ್ರಕಟವಾಗಿದ್ದು ಡಿ.ಆರ್‌.ಫಣೀಂದ್ರ ಅವರು ರಾಜ್ಯಕ್ಕೆ ಪ್ರಥಮ rank ಗಳಿಸಿದ್ದಾರೆ.

ನಳೀನ್ ಖಂಡೇವಾಲಾ ಎಂಬ ರಾಜಸ್ಥಾನದ ವಿದ್ಯಾರ್ಥಿ ಭಾರತಕ್ಕೆ ಪ್ರಥಮ rank ಗಳಿಸಿದ್ದಾರೆ. ದೆಹಲಿ ಮೂಲದ ಭವೀಕ್ ಬನ್ಸಾಲ್ ಅವರಿಗೆ ದ್ವಿತೀಯ ಸ್ಥಾನ ದೊರೆತಿದ್ದು, ಉತ್ತರ ಪ್ರದೇಶದ ಕೌಶಿಕ್ ಎಂಬ ವಿದ್ಯಾರ್ಥಿ ಮೂರನೇ rank ಗಳಿಸಿದ್ದಾರೆ.

ಫಣೀಂದ್ರ ಅವರು ದೇಶದ ಮಟ್ಟದಲ್ಲಿ 36 ನೇ rank ಗಳಿಸಿದ್ದು, ರಾಜ್ಯಕ್ಕೆ ಅವರೇ ಪ್ರಥಮ rank ಗಳಿಸಿದ್ದಾರೆ.

NEET exam results out, 56.5 percentage students qualified for medical seat

ನೀಟ್‌ ಫರೀಕ್ಷೆಗೆ ಈ ಬಾರಿ 14,10,755 ವಿದ್ಯಾರ್ಥಿಗಳು ಹಾಜರಾಗಿದ್ದರು, ಇದರಲ್ಲಿ 7,97,042 ವಿದ್ಯಾರ್ಥಿಗಳಷ್ಟೆ ತೇರ್ಗಡೆ ಹೊಂದಿ ವೈದ್ಯಕೀಯ ಮತ್ತು ದಂತವೈದ್ಯಕೀಯ ಸೀಟು ಪಡೆಯಲಿದ್ದಾರೆ.

ಈ ಬಾರಿ ನೀಟ್ ಫರೀಕ್ಷೆ ಕಟ್ ಆಫ್ ಅಂಕಗಳನ್ನು ಏರಿಸಲಾಗಿತ್ತು. ಈ ಬಾರಿ 134 ಅಂಕ ಗಳಿಸಿದ ವಿದ್ಯಾರ್ಥಿಗಳಷ್ಟೆ ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ ಕಟ್ ಆಫ್ ಅಂಕ 119 ಇತ್ತು.

ನೀಟ್ ಪರೀಕ್ಷೆಯನ್ನು ಈ ಬಾರಿ ರಾಜ್ಯದ ಕೆಲ ವಿದ್ಯಾರ್ಥಿಗಳು ತಪ್ಪಿಸಿಕೊಂಡಿದ್ದರು, ಆದರೆ ನಂತರ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+