NDTV Public Opinion: ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ನೀಡಿದ್ದು ಬಿಜೆಪಿಗೆ ವರವೋ, ಶಾಪವೋ?
ನವದೆಹಲಿ, ಮೇ. 01: ಕರ್ನಾಟಕದ ಬಿಜೆಪಿ ಸರ್ಕಾರವು ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಲಭ್ಯವಿದ್ದ ಶೇಕಡಾ 4 ರಷ್ಟು ಮೀಸಲಾತಿಯನ್ನು ಕಡಿತ ಮಾಡಿ ಅದನ್ನು ರಾಜಕೀಯವಾಗಿ ಪ್ರಬಲವಿರುವ ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಮಚುವ ನಿರ್ಧಾರ ತೆಗೆದುಕೊಂಡಿದೆ. ಇದು ರಾಜ್ಯದಲ್ಲಿ ಭಾರೀ ವಿವಾದ ಮತ್ತು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಸದ್ಯಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಈ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ, ಸರ್ಕಾರದ ಈ ನಡೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಬಹುದು. ಒಕ್ಕಲಿಗರು ಮತ್ತು ಲಿಂಗಾಯರತಿಗೆ ಮೀಸಲಾತಿ ಹೆಚ್ಚಿಸಿರುವ ನಿರ್ಧಾರ ಬಿಜೆಪಿಯ ಮತಗಳನ್ನು ಹೆಚ್ಚಿಸಲಿದೆ ಎಂದು ಎನ್‌ಡಿಟಿವಿ ಮತ್ತು ಸಿಎಸ್‌ಡಿಎಸ್ ನಡೆಸಿರುವ ಅಭಿಪ್ರಾಯ ಸಂಗ್ರಹದಲ್ಲಿ ತಿಳಿದುಬಂದಿದೆ.

ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಹಭಾಗಿತ್ವದಲ್ಲಿ ಎನ್‌ಡಿಟಿವಿಯ ಹೊಸ ಅಭಿಪ್ರಾಯ ಸಂಗ್ರಹದಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 33 ರಷ್ಟು ಜನರು ಮಾತ್ರ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿರುವ ಹೊಸ ಮೀಸಲಾತಿ ನೀತಿಯ ಬಗ್ಗೆ ತಿಳಿದಿದ್ದಾರೆ. ಆದರೆ ಸರ್ಕಾರದ ನಿರ್ಧಾರವನ್ನು ಭಾಗಶಃ ಬೆಂಬಲಿಸುವವರ ಶೇಕಡಾವಾರು ಪ್ರಮಾಣ ಹೆಚ್ಚಾಗಿದ್ದು ಮತಗಳಾಗಿ ಪರಿವರ್ತನೆಯಾಗುವ ಅವಕಾಶವಿದೆ ಎಂಬುದು ಬಹಿರಂಗವಾಗಿದೆ.
ಸಮೀಕ್ಷೆ ಪ್ರಕಾರ ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಶೇಕಡಾ 45 ರಷ್ಟು ಮಂದಿ ಬೆಂಬಲಿಸಿದ್ದಾರೆ. ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ಶೇ.37 ರಷ್ಟು ಮಂದಿ ಬೆಂಬಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಿರುವುದನ್ನು ತಲಾ ಶೇ.40 ಮತ್ತು ಶೇ. 41ರಷ್ಟು ಮಂದಿ ಉತ್ತಮ ಎಂದಿದ್ದಾರೆ. ಇನ್ನು, ಮುಸ್ಲೀಮರ ಮೀಸಲಾತಿಯನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರವನ್ನು ಶೇಕಡಾ 23 ರಷ್ಟು ಜನರು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಮತ್ತು ಶೇಕಡಾ 25 ರಷ್ಟು ಜನರು ಅದನ್ನು ಭಾಗಶಃ ಬೆಂಬಲಿಸುತ್ತಾರೆ.

ಕಳೆದ ಮಾರ್ಚ್‌ನಲ್ಲಿ, ಸರ್ಕಾರವು ಮುಸ್ಲಿಮರಿಗೆ ಇದ್ದ ಶೇಕಡಾ 4 ರಷ್ಟು ಇತರೆ ಹಿಂದುಳಿದ ವರ್ಗಗಳ ಕೋಟಾವನ್ನು ರದ್ದುಗೊಳಿಸಿತು. ಇದನ್ನು ಶೇ 5ರಷ್ಟು ಮಿಸಲಾತು ಪಡೆಯುತ್ತಿದ್ದ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರಾದ ಲಿಂಗಾಯತರಿಗೆ ಮತ್ತು ಕಾಂಗ್ರೆಸ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಜನತಾದಳ ಸೆಕ್ಯುಲರ್ ನಡುವೆ ಹಂಚಿ ಹೋಗಿರುವ ಒಕ್ಕಲಿಗತಿಗರ ಸಮಾನವಾಗಿ ಹಂಚಿದೆ. ಈಗ ಎರಡು ಸಮುದಾಯಗಖು ಕ್ರಮಾವಾಗಿ ಶೇಕಡಾ 7 ಮತ್ತು 6 ರಷ್ಟು ಮಿಸಲಾತು ಪಡೆಯಲಿದ್ದಾರೆ.
ಪರಿಶಿಷ್ಟ ಜಾತಿಯ ಕೋಟಾವನ್ನು 15% ರಿಂದ 17% ಕ್ಕೆ ಮತ್ತು ಪರಿಶಿಷ್ಟ ಪಂಗಡದ ಕೋಟಾವನ್ನು 3% ರಿಂದ 7% ಕ್ಕೆ ಏರಿಸಲಾಗಿದೆ. ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ನಲ್ಲಿ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಸಾರ್ವಜನಿಕರ ಮನದಿಂಗಿತ ಅಳೆಯುವ ಉದ್ದೇಶದಿಂದ ಸಮೀಕ್ಷೆಯ ಸಮಯದಲ್ಲಿ 21 ವಿಧಾನಸಭಾ ಕ್ಷೇತ್ರಗಳ 82 ಮತಗಟ್ಟೆಗಳಲ್ಲಿ 2,143 ಮತದಾರರನ್ನು ಸಂದರ್ಶಿಸಲಾಗಿದೆ. ಮಾದರಿ ಗಾತ್ರವು ಚಿಕ್ಕದಾಗಿದ್ದರೂ, ರಾಜ್ಯದ ಪ್ರಾತಿನಿಧಿಕ ವಿಭಾಗವಾಗಿದೆ ಮತ್ತು ಮತದಾರರ ಮನಸ್ಥಿತಿಯನ್ನು ಸರಿಯಾಗಿ ಪ್ರತಿಬಿಂಬಿಸುತ್ತದೆ ಎಂದು ಎನ್‌ಡಿಟಿವಿ ಹೇಳಿದೆ.












Click it and Unblock the Notifications