ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ: ಎನ್ ಡಿಎ ಮೈತ್ರಿ ಕೂಟಕ್ಕೆ ಪೂರ್ಣ ಬಹುಮತ ಅಸಾಧ್ಯ

|
Google Oneindia Kannada News

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎಗೆ 543 ಸ್ಥಾನಗಳ ಪೈಕಿ ಬಹುಮತಕ್ಕೆ ಅಗತ್ಯ ಇರುವ 272 ಸೀಟುಗಳು ಬರುವುದಿಲ್ಲ. 15 ಸ್ಥಾನಗಳಿಂದ ಹಿಂದೆ ಉಳಿದು, ಈ ಮೈತ್ರಿ ಕೂಟ 257 ಸ್ಥಾನಗಳನ್ನು ಜಯಿಸಬಹುದು ಎಂದು ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ 146 (ಎಸ್ ಪಿ ಹಾಗೂ ಬಿಎಸ್ ಪಿ ಹೊರತುಪಡಿಸಿ) ಸ್ಥಾನಗಳಲ್ಲಿ ಜಯಿಸಬಹುದು ಎನ್ನಲಾಗಿದೆ. ಈ ಸಮೀಕ್ಷೆಯು ಕಳೆದ ವರ್ಷದ ಡಿಸೆಂಬರ್ 15ರಿಂದ 25ರ ಮಧ್ಯೆ ದೇಶದ 543 ಲೋಕಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ಮಾಡಲಾಗಿದೆ. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ನಂತರ ಈ ಸಮೀಕ್ಷೆ ಮಾಡಲಾಗಿದೆ.

ಛತ್ತಿಸ್‌ಘಡ್‌ ಚುನಾವಣೆ: ಸಮೀಕ್ಷೆಗಳ ಸಮೀಕ್ಷೆಯ ಫಲಿತಾಂಶ ಛತ್ತಿಸ್‌ಘಡ್‌ ಚುನಾವಣೆ: ಸಮೀಕ್ಷೆಗಳ ಸಮೀಕ್ಷೆಯ ಫಲಿತಾಂಶ

ಒಟ್ಟಿನಲ್ಲಿ ಕೇಂದ್ರದಲ್ಲಿ ಸರಕಾರ ರಚನೆ ಮಾಡುವ ಸಂಖ್ಯೆಯ ಮಂತ್ರದಂಡವು 543 ಒಟ್ಟು ಸದಸ್ಯ ಬಲದಲ್ಲಿ 140 ಕಡೆ ಗೆಲುವು ಪಡೆಯಲಿರುವ 'ಇತರರ' ಕೈಲಿರುತ್ತದೆ ಎಂದು ಸಮೀಕ್ಷೆ ಹೇಳಿದೆ. ಇತರರು ಅಂದರೆ ಸಮಾಜವಾದ ಪಕ್ಷ, ಬಿಎಸ್ ಪಿ, ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್, ತೆಲಂಗಾಣ ರಾಷ್ಘ್ರ ಸಮಿತಿ, ಬಿಜು ಜನತಾದಳ, ವೈಎಸ್ ಆರ್ ಕಾಂಗ್ರೆಸ್ ಪಕ್ಷ, ಎಡ ರಂಗ, ಮೆಹಬೂಬಾ ಮಫ್ತಿಯ ಪಿಡಿಪಿ, ಬದ್ರುದ್ದೀನ್ ಅಜ್ಮಲ್ ಎಐಯುಡಿಎಫ್, ಅಸಾದುದ್ದೀನ್ ಒವೈಸಿಯ ಎಐಎಂಐಎಂ, ಐಎನ್ ಎಲ್ ಡಿ, ಆಮ್ ಆದ್ಮಿ ಪಕ್ಷ, ಜೆವಿಎಂ (ಪಿ), ತಮಿಳುನಾಡಿನ ಎಎಂಎಂಕೆ ಹಾಗೂ ಸ್ವತಂತ್ರ ಸಂಸದರು ಒಳಗೊಳ್ಳುತ್ತಾರೆ.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಮುನ್ನ ಇಂಡಿಯಾ ಟಿವಿ ಹಾಗೂ ಸಿಎನ್ ಎಕ್ಸ್ ನಿಂದ ಕಳೆದ ನವೆಂಬರ್ ನಲ್ಲಿ ದೇಶದಾದ್ಯಂತ ಸಮೀಕ್ಷೆ ಮಾಡಲಾಗಿತ್ತು. ಆಗ ಎನ್ ಡಿಎಗೆ 281 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಸಿಗುತ್ತದೆ ಎನ್ನಲಾಗಿತ್ತು. ಯುಪಿಎಗೆ 121, ಇತರರಿಗೆ 138 ಸ್ಥಾನ ದೊರೆಯಬಹುದು ಎಂದಿತ್ತು. ಆದರೆ ಈ ಬಾರಿ ಎನ್ ಡಿಎಗೆ 24 ಸ್ಥಾನ ಇಳಿಕೆಯಾಗಿ, ಯುಪಿಎಗೆ 22 ಸ್ಥಾನ ಹೆಚ್ಚು ದೊರೆಯಬಹುದು ಎನ್ನಲಾಗಿದೆ.

ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ

ಮತ ಪಡೆಯುವ ಪ್ರಮಾಣ ಕೂಡ ಅಂದಾಜು ಮಾಡಲಾಗಿದ್ದು, ಬಿಜೆಪಿಗೆ 37.15%, ಕಾಂಗ್ರೆಸ್ ಗೆ 29.92%, ಇತರರಿಗೆ 32.93% ಮತ ದೊರೆಯಬಹುದು ಎಂದು ಸಮೀಕ್ಷೆ ಹೇಳಿದೆ. ಎನ್ ಡಿಎ ನೇತೃತ್ವ ವಹಿಸಿರುವ ಬಿಜೆಪಿಯೊಂದೇ 223 ಸ್ಥಾನಗಳು ಹಾಗೂ ಯುಪಿಎ ನೇತೃತ್ವ ವಹಿಸಿದ ಕಾಂಗ್ರೆಸ್ 85 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ. ಇನ್ನು ಇತರರ ಪಟ್ಟಿಯಲ್ಲಿ ಪ್ರಮುಖವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಇಪ್ಪತ್ತಾರು ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ.

ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎಂಬ ವಿವರ ಇಲ್ಲಿದೆ.

ಉತ್ತರಪ್ರದೇಶದ ಸ್ಥಾನ ವಿವರ

ಉತ್ತರಪ್ರದೇಶದ ಸ್ಥಾನ ವಿವರ

ಬಿಜೆಪಿ 40

ಬಿಎಸ್ ಪಿ 15

ಎಸ್ ಪಿ 20

ಕಾಂಗ್ರೆಸ್ 2

ಆರ್ ಎಲ್ ಡಿ 2

ಅಪ್ನಾ ದಳ್ 1


ಉತರಾಖಂಡ್

ಬಿಜೆಪಿ 4

ಕಾಂಗ್ರೆಸ್ 1


ರಾಜಸ್ತಾನ್

ಬಿಜೆಪಿ 15

ಕಾಂಗ್ರೆಸ್ 10

ಪಶ್ಚಿಮ ಬಂಗಾಲ

ಪಶ್ಚಿಮ ಬಂಗಾಲ

ಟಿಎಂಸಿ 26

ಬಿಜೆಪಿ 10

ಕಾಂಗ್ರೆಸ್ 2

ಎಡರಂಗ 4

ಒಡಿಶಾ

ಬಿಜು ಜನತಾ ದಳ 13

ಬಿಜೆಪಿ 8

ಮಧ್ಯಪ್ರದೇಶ

ಬಿಜೆಪಿ 18

ಕಾಂಗ್ರೆಸ್ 11

ಛತ್ತೀಸ್ ಗಢ

ಛತ್ತೀಸ್ ಗಢ

ಬಿಜೆಪಿ 5

ಕಾಂಗ್ರೆಸ್ 6

ಪಂಜಾಬ್

ಕಾಂಗ್ರೆಸ್ 7

ಅಕಾಲಿ ದಳ 5

ಆಪ್ 1

ಹರಿಯಾಣ

ಬಿಜೆಪಿ 8

ಕಾಂಗ್ರೆಸ್ 2

ಬಿಹಾರ್

ಬಿಜೆಪಿ 13

ಆರ್ ಜೆಡಿ 10

ಜೆಡಿ (ಯು) 11

ಕಾಂಗ್ರೆಸ್ 2

ಎಲ್ ಜೆಪಿ 3

ಆರ್ ಎಲ್ ಎಸ್ ಪಿ 1

ಜಾರ್ಖಂಡ್

ಬಿಜೆಪಿ 7

ಜೆಎಂಎಂ 4

ಕಾಂಗ್ರೆಸ್ 2

ಜೆವಿಎಂ (ಪಿ) 1

ಹಿಮಾಚಲ ಪ್ರದೇಶ

ಬಿಜೆಪಿ 4

ಮಹಾರಾಷ್ಟ್ರ

ಬಿಜೆಪಿ 22

ಶಿವಸೇನಾ 8

ಕಾಂಗ್ರೆಸ್ 9

ಎನ್ ಸಿಪಿ 9

ಗೋವಾ

ಗೋವಾ

ಬಿಜೆಪಿ 1

ಕಾಂಗ್ರೆಸ್ 1

ತಮಿಳುನಾಡು

ಡಿಎಂಕೆ 21

ಎಐಎಡಿಎಂಕೆ 10

ಎಎಂಎಂಕೆ 4

ಕಾಂಗ್ರೆಸ್ 3

ಪಿಎಂಕೆ 1

ಆಂಧ್ರಪ್ರದೇಶ

ವೈಎಸ್ ಆರ್ ಕಾಂಗ್ರೆಸ್ 19

ಟಿಡಿಪಿ 4

ಕಾಂಗ್ರೆಸ್ 2

ತೆಲಂಗಾಣ

ತೆಲಂಗಾಣ ರಾಷ್ಟ್ರ ಸಮಿತಿ 16

ಎಐಎಂಐಎಂ 1

ಕರ್ನಾಟಕ

ಬಿಜೆಪಿ 15

ಕಾಂಗ್ರೆಸ್ 9

ಜೆಡಿಎಸ್ 4

ಕೇರಳ

ಕಾಂಗ್ರೆಸ್ 8

ಎಡ ರಂಗ 5

ಐಯುಎಂಎಲ್ 2

ಬಿಜೆಪಿ 1

ಕೆಸಿ(ಎಂ) 1

ಆರ್ ಎಸ್ ಪಿ 1

ಸ್ವತಂತ್ರ 2

ಜಮ್ಮು ಮತ್ತು ಕಾಶ್ಮೀರ

ಬಿಜೆಪಿ 2

ನ್ಯಾಷನಲ್ ಕಾನ್ಫರೆನ್ಸ್ 2

ಕಾಂಗ್ರೆಸ್ 1

ಪಿಡಿಪಿ 1

ಅಸ್ಸಾಮ್

ಅಸ್ಸಾಮ್

ಬಿಜೆಪಿ 12

ಎಐಯುಡಿಎಫ್ 2

ಅರುಣಾಚಲಪ್ರದೇಶ

ಬಿಜೆಪಿ 2

ಮಿಜೋರಾಂ

ಎಂಎನ್ ಎಫ್ 1

ಮಣಿಪುರ

ಬಿಜೆಪಿ 2

ಮೇಘಾಲಯ

ಕಾಂಗ್ರೆಸ್ 1

ಎನ್ ಪಿಪಿ 1

ತ್ರಿಪುರಾ

ಬಿಜೆಪಿ 1

ಸಿಪಿಎಂ 1

ನಾಗಾಲ್ಯಾಂಡ್

ಎನ್ ಡಿಪಿಪಿ 1

ಎನ್ ಪಿಎಫ್ 1

ಸಿಕ್ಕಿಂ

ಎಸ್ ಡಿಎಫ್ 1

ದೆಹಲಿ

ಬಿಜೆಪಿ 5

ಆಪ್ 1

ಕಾಂಗ್ರೆಸ್ 1

ಚಂಡೀಗಢ

ಚಂಡೀಗಢ

ಬಿಜೆಪಿ 1

ಅಂಡಮಾನ್ ಮತ್ತು ನಿಕೋಬಾರ್

ಬಿಜೆಪಿ 1

ದಾದ್ರಾ ನಗರ್ ಹವೇಲಿ

ಬಿಜೆಪಿ 1

ಡಾಮನ್ ಮತ್ತು ಡಿಯು

ಬಿಜೆಪಿ 1

ಲಕ್ಷದ್ವೀಪ

ಕಾಂಗ್ರೆಸ್ 1

ಪುದುಚೆರಿ

ಐಎನ್ ಆರ್ ಸಿ 1

English summary
The BJP-led National Democratic Alliance at the Centre may fall nearly 15 seats short of the magic mark of 272 in the 543-seat Lok Sabha, if elections are held now, says the India TV-CNX opinion poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X