• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಯುಪಿಎಗಿಂತ ಶೇಕಡಾ 20ರಷ್ಟು ಕಡಿಮೆ ಬೆಲೆಗೆ ವಿಮಾನ ಖರೀದಿಸ್ತಿದ್ದೇವೆ'

|

ನವದೆಹಲಿ, ಅಗಸ್ಟ್ 29: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2007ರಲ್ಲಿ ರಫೇಲ್ ಯುದ್ಧ ವಿಮಾನ ಖರೀದಿಗೆ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಶೇಕಡಾ 20ರಷ್ಟು ಕಡಿಮೆ ಬೆಲೆಗೆ 2016ರಲ್ಲಿ ಎನ್ ಡಿಎ ಸರಕಾರ ಚೌಕಾಸಿ ಮಾಡಿ, ಖರೀದಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ.

ಎಎನ್ ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೇಟ್ಲಿ, ಈಗ ಭಾರತವು ಖರೀದಿಸುತ್ತಿರುವ ಯುದ್ಧ ವಿಮಾನ ಪೂರ್ಣ ಸನ್ನದ್ಧಗೊಂಡಿರುವಂಥದ್ದು. ಮತ್ತು ಯಾವ ಮಧ್ಯವರ್ತಿಗಳೂ ಇಲ್ಲದೆ ಎರಡು ದೇಶದ ಸರಕಾರಗಳು ಈ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದ್ದಾರೆ.

58 ಸಾವಿರ ಕೋಟಿಯ ರಫೇಲ್ ಡೀಲ್, ಅದರ ಸುತ್ತ- ಮುತ್ತ, ಎತ್ತ?

ಆರಂಭಿಕ ಮಟ್ಟದ ಯುದ್ಧ ವಿಮಾನವನ್ನು ಪೂರ್ಣ ಸನ್ನದ್ಧವಾದ (ಫುಲ್ ಲೋಡಡ್) ವಿಮಾನದ ಜೊತೆ ಹೋಲಿಕೆ ಮಾಡಲು ಸಾಧ್ಯವಾ? ಸಾಧಾರಣ ವಿಮಾನವನ್ನು ಶಸ್ತ್ರಸಜ್ಜಿತವಾದದ್ದರ ಜತೆ ತುಲನೆ ಮಾಡಬಹುದಾ? 2012ರಲ್ಲೇ ಒಪ್ಪಂದ ಮಾಡಿಕೊಂಡಿದ್ದರೆ 2017ರಲ್ಲಿ ಮೊದಲ ವಿಮಾನ ಭಾರತಕ್ಕೆ ಬಂದು ಇಳಿದಿರುತ್ತಿತ್ತು ಎಂದಿದ್ದಾರೆ.

ರಫೆಲ್ ಡೀಲ್: ಕಾಂಗ್ರೆಸ್ಸಿಗೆ ರಿಲಯನ್ಸ್ ನಿಂದ ಖಡಕ್ ವಾರ್ನಿಂಗ್

2007 ಹಾಗೂ 2017ರ ಮಧ್ಯೆ ಬೆಲೆ ಏರಿಕೆ ಆಗಿದೆ. ವಿದೇಶಿ ಕರೆನ್ಸಿಗಳ ಬೆಲೆಯಲ್ಲೂ ಏರಿಕೆ ಆಗಿದೆ. ಕಾಂಗ್ರೆಸ್ ಗೆ ಅದು ಗೊತ್ತಿದೆ. 2007ರಲ್ಲಿ ಎಲ್ 1 ಉದಾಹರಣೆ ತೆಗೆದುಕೊಳ್ಳಿ, ಅದರಲ್ಲಿ ಬೆಲೆ ಏರಿಕೆ ಯಾವುದೇ ಸೇರ್ಪಡೆಯನ್ನು ಒಳಗೊಂಡಿಲ್ಲ. 2015-16ರಲ್ಲಿ ಚೌಕಾಸಿ ಮಾಡಿ, ಈ ಬೆಲೆಗೆ ಖರೀದಿಸುತ್ತಿದೇವೆ. ಹಾಗಿದ್ದ ಮೇಲೆ ಇದು ಅಗ್ಗ ಹೌದೋ-ಅಲ್ಲವೋ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.

ಎ.ಕೆ.ಆಂಟನಿ ಕಾಂಗ್ರೆಸ್ ಗೆ ಹೇಳಲಿ

ಎ.ಕೆ.ಆಂಟನಿ ಕಾಂಗ್ರೆಸ್ ಗೆ ಹೇಳಲಿ

ಈಗ ಎ.ಕೆ.ಆಂಟನಿ ಅವರೇ ಕಾಂಗ್ರೆಸ್ ಗೆ ಹೇಳಲಿ. ಆಗ ಮಾಡಿಕೊಂಡಿದ್ದ ಒಪ್ಪಂದ ತೀರಾ ಪ್ರಾಥಮಿಕ ಮಟ್ಟದ ವಿಮಾನಕ್ಕೆ ಮಾತ್ರ. ಆ ನಂತರ ವಿದೇಶಿ ವಿನಿಮಯದಲ್ಲಿನ ಏರಿಕೆ, ವರ್ಷಗಳು ಕಳೆದಂತೆ ಆದಂತೆ ಆದ ಬೆಲೆ ಏರಿಕೆ, ಪೂರ್ಣ ಸನ್ನದ್ಧವಾದ ಯುದ್ಧ ವಿಮಾನ ಬೇಕೆಂದು ಬದಲಾಗಿದ್ದು ಇವೆಲ್ಲ ಸೇರಿ ಲೆಕ್ಕ ಹಾಕುವಾಗ ಈಗಿನ ಸರಕಾರ ಮಾಡಿಕೊಂಡ ಖರೀದಿ ಒಪ್ಪಂದ ಅಗ್ಗವಾದದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಾಥಮಿಕ ಶಾಲಾ ಮಟ್ಟದ ಚರ್ಚೆಗೆ ಇಳಿದ ಕಾಂಗ್ರೆಸ್

ಪ್ರಾಥಮಿಕ ಶಾಲಾ ಮಟ್ಟದ ಚರ್ಚೆಗೆ ಇಳಿದ ಕಾಂಗ್ರೆಸ್

ಕಾಂಗ್ರೆಸ್ ಹೇಳುತ್ತಿರುವ ಪ್ರತಿ ವಿಚಾರವೂ ವಾಸ್ತವದಲ್ಲಿ ಸುಳ್ಳು. ಸ್ವತಃ ರಾಹುಲ್ ಗಾಂಧಿ ಅವರೇ ರಫೇಲ್ ಖರೀದಿ ಬಗ್ಗೆ ಏಳು ಕಡೆಯ ಭಾಷಣದಲ್ಲಿ ಏಳು ಬೇರೆ-ಬೇರೆ ಮೊತ್ತಗಳನ್ನು ಹೇಳಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್ ನವರು ಕಿಂಡರ್ ಗಾರ್ಟನ್ ಅಥವಾ ಪ್ರಾಥಮಿಕ ಶಾಲಾ ಮಟ್ಟದ ಚರ್ಚೆಗೆ ಇಳಿಸಿದ್ದಾರೆ ಎಂದು ಕುಟುಕಿದ್ದಾರೆ.

ರಫೇಲ್ ಒಪ್ಪಂದ: ಬಿಜೆಪಿ ಹಣಿಯಲು ಸಮಿತಿ ರಚಿಸಿದ ರಾಹುಲ್ ಗಾಂಧಿ

ವಿಮಾನ ಖರೀದಿ ದೇಶಕ್ಕೆ ಒಳಿತಲ್ಲ ಅನ್ನೋದಕ್ಕೆ ಆಧಾರವನ್ನು ನೀಡಲಿ

ವಿಮಾನ ಖರೀದಿ ದೇಶಕ್ಕೆ ಒಳಿತಲ್ಲ ಅನ್ನೋದಕ್ಕೆ ಆಧಾರವನ್ನು ನೀಡಲಿ

ರಫೇಲ್ ಖರೀದಿ ಒಪ್ಪಂದ ದೇಶಕ್ಕೆ ಒಳಿತಲ್ಲ ಅನ್ನೋದಕ್ಕೆ ಒಂದು ಆಧಾರವನ್ನು ನೀಡಲಿ ಎಂದು ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದಾರೆ. ಯಾವುದೇ ಜವಾಬ್ದಾರಿಯುತ ರಾಜಕಾರಣಿಗೆ ಗೊತ್ತಿರುತ್ತದೆ: ಎರಡು ಸರಕಾರಗಲ ಮಧ್ಯೆ ನಡೆಯುವ ವ್ಯವಹಾರ ಸ್ವಚ್ಛವಾಗಿರುತ್ತದೆ. ಸರಕಾರವು ಕಿಕ್ ಬ್ಯಾಕ್ ನೀಡುವುದಿಲ್ಲ. ಇದು ಭಾರತ ಹಾಗೂ ಫ್ರಾನ್ಸ್ ಸರಕಾರದ ಮಧ್ಯದ ವ್ಯವಹಾರ ಎಂದು ಹೇಳಿದ್ದಾರೆ.

ಅದು ಇರಬಹುದು, ಆದರೆ ನಾನು ಒಪ್ಪುವುದಿಲ್ಲ ಅಂದರೆ ಹೇಗೆ?

ಅದು ಇರಬಹುದು, ಆದರೆ ನಾನು ಒಪ್ಪುವುದಿಲ್ಲ ಅಂದರೆ ಹೇಗೆ?

ಒಪ್ಪಂದದಲ್ಲಿನ ರಹಸ್ಯ ವಿಚಾರಗಳ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾವ ಮಾಡಿದರೆ, "ಅದು ಇರಬಹುದು, ಆದರೆ ನಾನು ಒಪ್ಪುವುದಿಲ್ಲ" ಅಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ ಸಚಿವ ಅರುಣ್ ಜೇಟ್ಲಿ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದಾರೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿ, ಈ ಹಿಂದೆ ಮಾಡಿಕೊಂಡಿದ್ದ ಖರೀದಿ ಒಪ್ಪಂದಕ್ಕಿಂತ ಹೆಚ್ಚಿನ ಬೆಲೆಯನ್ನು ನೀಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ರಫೇಲ್ ಹಗರಣ: ಮಾಜಿ ಬಿಜೆಪಿ ಸಚಿವರಿಂದಲೇ ಕೇಂದ್ರಕ್ಕೆ ತಪರಾಕಿ

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an interview with ANI on Wednesday finance minister Arun Jaitely said, the present NDA government hard to keep prices down by at least 20 per cent for each Rafale aircraft as per 2016 deal, compared to that of the UPA in 2007.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more