ಫಿನ್ನಿಕ್ಸ್ ನಂತೆ ಎದ್ದು ಬಂದ ಬಿಜೆಪಿ; ಕಾಂಗ್ರೆಸ್ ಮತ್ತೆ ಮಕಾಡೆ: ಈಗ ಚುನಾವಣೆ ನಡೆದರೇ ಯಾರಿಗೆ ಎಷ್ಟು ಸ್ಥಾನ?
ನವದೆಹಲಿ, ಫೆಬ್ರವರಿ 13: ಒಂದು ವೇಳೆ ದೇಶದಲ್ಲಿ ಈಗ ಲೋಕಸಭೆ ಚುನಾವಣೆ ಎದುರಾದರೆ ವಿರೋಧಿ ಅಲೆಯನ್ನು ಮೆಟ್ಟಿ ಪುನಃ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಈಗ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 343 ಸ್ಥಾನಗಳನ್ನು ಗೆಲ್ಲಲಿದೆ. ಇನ್ನು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 188 ಸ್ಥಾನ ಪಡೆಯಲಿದೆ ಎಂದು ಇಂಡಿಯಾ ಟುಡೇ- ಸಿ ವೋಟರ್ ನಡೆಸಿದ ಮೂಡ್ ಆಫ್ ದ ನೇಷನ್ ಸಮೀಕ್ಷೆ ಹೇಳಿದೆ. ಸಿ-ವೋಟರ್ಸ್ ಹಾಗೂ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ನಡೆಸಿರುವ ದೇಶಾದ್ಯಂತ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 343 ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 188 ಸ್ಥಾನಗಳನ್ನು ಪಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತೆ ಏರಿಕೆಯಾಗಿದೆ. ಶೇ.51ರಷ್ಟು ಜನರು ಈಗಲೂ ಮೋದಿಯೇ ದೇಶದ ಪ್ರಧಾನಿಯಾಗಲಿ ಎಂದು ಬಯಸಿದ್ದಾರೆ.

2024 ರ ಲೋಕಸಭಾ ಚುನಾವಣೆಯಲ್ಲಿ 232 ಸ್ಥಾನಗಳನ್ನು ಗೆಲುವು ಸಾಧಿಸಿದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಇಂದು ಚುನಾವಣೆ ನಡೆದರೆ 188 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯನ್ನು ಜನವರಿ 2 ರಿಂದ ಫೆಬ್ರವರಿ 9ರವರೆಗೂ ನಡೆಸಲಾಗಿದ್ದು, ಎಲ್ಲಾ ಲೋಕಸಭಾ ಕ್ಷೇತ್ರಗಳಿಂದ 125,123 ವ್ಯಕ್ತಿಗಳನ್ನು ಸಮೀಕ್ಷೆ ಮಾಡಲಾಗಿದೆ.
ಇಂಡಿಯಾ ಟುಡೇ - ಸಿವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಒಟ್ಟಾರೆಯಾಗಿ ಏನು 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತೋ, ಆ ನಂಬರ್ ಅನ್ನು ಉಳಿಸಿಕೊಳ್ಳಲು ಇಂಡಿಯಾಒಕ್ಕೂಟಕ್ಕೆ ಸಾಧ್ಯವಾಗುವುದಿಲ್ಲ. ಆಮ್ ಆದ್ದಿ ಪಾರ್ಟಿ, ಎನ್ ಸಿಪಿ, ಎಡಪಕ್ಷಗಳು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಕೆಲವು ಕಡೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಎಎಪಿ ಏಕಾಂಗಿಯಾಗಿ ಸ್ಪರ್ಧೆ ನಡೆಸಿದೆ. ಅಲ್ಲದೇ 2026 ರಲ್ಲಿ ನಡೆಯುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿಯೂ ಏಕಾಂಗಿ ಸ್ಪರ್ಧೆ ಮಾಡುವುದಾಗಿ ಮಮತಾ ಬ್ಯಾನರ್ಜಿ ಅವರು ಘೋಷಣೆ ಮಾಡಿದ್ದಾರೆ. ಹೀಗಾಗಿ ಇಂಡಿಯಾ ಒಕ್ಕೂಟಕ್ಕೆ ಭಾರೀ ಹಿನ್ನೆಡೆಯಾಗಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಗಿಂತ ಶೇ.3ರಷ್ಟು ಹೆಚ್ಚಿನ ಮತವನ್ನು ಬಿಜೆಪಿ ಮೈತ್ರಿಕೂಟ ಪಡೆದುಕೊಳ್ಳಲಿದೆ. ಶೇ.47ರಷ್ಟು ಮತವನ್ನು ಎನ್ಡಿಎ ಮೈತ್ರಿಕೂಟ ಪಡೆದುಕೊಂಡರೆ, ಇಂಡಿಯಾ ಒಕ್ಕೂಟ ಒಂದು ಪರ್ಸಂಟೇಜ್ ಮಾತ್ರ ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲಿದೆ. ಇದಕ್ಕೆ ಕಾರಣ ಮೈತ್ರಿಕೂಟದೊಳಗಿನ ಗೊಂದಲ ಎಂದು ಇಂಡಿಯಾ ಟುಡೇ - ಸಿವೋಟರ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
2024ರ ಲೋಕಸಭಾ ಚುನಾವಣೆಯಲ್ಲಿ 292 ಸ್ಥಾನ ಗೆದ್ದಿದ್ದ ಎನ್‌ಡಿಎ ಮೈತ್ರಿಕೂಟ ಈಗ ಚುನಾವಣೆ ನಡೆದರೆ ಬರೋಬ್ಬರಿ 343 ಸ್ಥಾನ ಗೆಲ್ಲಲಿದೆ. ಅಂದರೆ ಅದರ 51 ಸ್ಥಾನಗಳು ಹೆಚ್ಚಾಗಲಿದೆ. ಬಿಜೆಪಿ ಬಲ 240 ರಿಂದ 281ಕ್ಕೆ ಏರಲಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ 232 ಸ್ಥಾನ ಗೆದ್ದಿದ್ದ ಇಂಡಿಯಾ ಒಕ್ಕೂಟದ ಬಲ 188ಕ್ಕೆ ಇಳಿಯಲಿದೆ. ಅದೇ ರಿತಿ ಕಾಂಗ್ರೆಸ್ ಬಲ 99ರಿಂದ 78ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.












Click it and Unblock the Notifications