ಹಾರ್ದಿಕ್ ಪಟೇಲ್ 'ಸೆಕ್ಸ್ ಸಿಡಿ' ಬೆನ್ನಿಗೆ ಬಿದ್ದ ಮಹಿಳಾ ಆಯೋಗ

Subscribe to Oneindia Kannada

ನವದೆಹಲಿ, ನವೆಂಬರ್ 25: ಹಾರ್ದಿಕ್ ಪಟೇಲ್ ಅವರಿದ್ದು ಎನ್ನಲಾದ ಸೆಕ್ಸ್ ಸಿಡಿಯ ತನಿಖೆಗೆ ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದೆ.

ಈ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಮಹಿಳಾ ಆಯೋಗ, ಸೆಕ್ಸ್ ವಿಡಿಯೋಗೆ ಸಂಬಂಧಿಸಿದಂತೆ ಪಾಟೀದಾರ್ ಮೀಸಲಾತಿ ಹೋರಾಟದ ಮುಂದಾಳು ಹಾರ್ದಿಕ್ ಪಟೇಲ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದೆ.

ಹಾರ್ದಿಕ್ ಪಟೇಲ್‌ಗೆ 'ವೈ' ಶ್ರೇಣಿಯ ಭದ್ರತೆ!

ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಟೇಲ್ ರಿದ್ದು ಎನ್ನಲಾದ ಸೆಕ್ಸ್ ಸಿಡಿಯೊಂದು ಓಡಾಡುತ್ತಿದೆ. ಸದ್ಯ ಕಾಂಗ್ರೆಸ್ ಜತೆ ಕೈ ಜೋಡಿಸಿರುವ ಹಾರ್ದಿಕ್ ಪಟೇಲ್ ಇದು ಬಿಜೆಪಿಯ 'ಕೊಳಕು ರಾಜಕೀಯ' ಎಂದು ಹೇಳಿದ್ದಾರೆ.

NCW examining complaint over Hardik Patel ‘Obscene videos'

ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಸಂಬಂಧ ಗೌರವ್ ಗುಲಾಟಿ ಎಂಬ ವಕೀಲರು ಮಹಿಳಾ ಆಯೋಗಕ್ಕೆ ನವೆಂಬರ್ 22ರಂದು ದೂರು ಸಲ್ಲಿಸಿದ್ದರು. ಆಯೋಗ ಈ ಪ್ರಕರಣದ ತನಿಖೆ ನಡೆಸಬೇಕು ಮತ್ತು ಪೊಲೀಸರಿಗೆ ಈ ಸಂಬಂಧ ಎಫ್ಐಆರ್ ದಾಖಲಿಸಲು ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಅವರು ಕೋರಿದ್ದರು.

ನಮ್ಮ ಬೆಂಬಲವೇನಿದ್ದರೂ ಕಾಂಗ್ರೆಸಿಗೆ: ಹಾರ್ದಿಕ್ ಪಟೇಲ್ ಸ್ಪಷ್ಟನೆ

"ನಮಗೆ ದೂರು ಬಂದಿದೆ. ನಾವು ಈ ಸಂಬಂಧ ಕಾನೂನು ಸಲಹೆ ಪಡೆಯುತ್ತಿದ್ದೇವೆ. ಪ್ರಕರಣದಲ್ಲಿ ಮೂರನೇ ವ್ಯಕ್ತಿಯಿಂದ ದೂರು ಬಂದಿರುವುದರಿಂದ ಕಾನೂನು ಸಲಹೆ ಪಡೆಯುತ್ತಿದ್ದೇವೆ," ಎಂದು ಆಯೋಗ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The apex body for women's rights National Commission for Women (NCW) today said it is examining a complaint against Patidar quota stir leader Hardik Patel over the purported sex videos of him that surfaced on social media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ