ಯೋಧರಿಗೆ ನೆರವಾದ ನಟ ಅಕ್ಷಯ್ ಗೆ ಎಚ್ಚರಿಕೆ ನೀಡಿದ ನಕ್ಸಲರು
ಸುಕ್ಮಾ ದಾಳಿ ಸಂತ್ರಸ್ತ ಕುಟುಂಬ, ಹುತಾತ್ಮ ಯೋಧರ ಪರಿವಾರದವರಿಗೆ ನೆರವಾದ ನಟ ಅಕ್ಷಯ್ ಕುಮಾರ್ ಹಾಗೂ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ವಿರುದ್ಧ ನಕ್ಸಲ್ ನಾಯಕರು ಕಿಡಿಕಾರಿದ್ದಾರೆ.
ನವದೆಹಲಿ, ಮೇ 29: ಸುಕ್ಮಾ ದಾಳಿ ಸಂತ್ರಸ್ತ ಕುಟುಂಬ, ಹುತಾತ್ಮ ಯೋಧರ ಪರಿವಾರದವರಿಗೆ ನೆರವಾದ ನಟ ಅಕ್ಷಯ್ ಕುಮಾರ್ ಹಾಗೂ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ವಿರುದ್ಧ ನಕ್ಸಲ್ ನಾಯಕರು ಕಿಡಿಕಾರಿ, ಎಚ್ಚರಿಕೆ ನೀಡಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಛತ್ತೀಸ್ ಗಢರಾಜ್ಯದ ಸುಕ್ಮಾದಲ್ಲಿ ನಕ್ಸಲರು ನಡೆಸಿದ ಭೀಕರ ದಾಳಿಗೆ 25ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.[ಪಾಪ್ಕಾರ್ನಿಗೆ ಬದಲು ಹುತಾತ್ಮನ ಕುಟುಂಬಕ್ಕೆ ದಾನ ಮಾಡಿ]
ಸಿಆರ್ ಪಿಎಫ್ ಯೋಧರ ಕುಟುಂಬಗಳಿಗೆ ನಟ ಅಕ್ಷಯ್ ಕುಮಾರ್ ಹಾಗೂ ಬಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ಅವರು ಆರ್ಥಿಕ ನೆರವು ನೀಡಿದ್ದರು. ಇದನ್ನು ಖಂಡಿಸಿ, ನಕ್ಸಲರು ಕರಪತ್ರ ಹಂಚಿದ್ದಾರೆ. ಅಕ್ಷಯ್ ಕುಮಾರ್ ಅವರು 9 ಲಕ್ಷ ರು ಹಾಗೂ ಸೈನಾ ನೆಹ್ವಾಲ್ ಅವರು 6 ಲಕ್ಷ ರು ಗಳನ್ನು ದಾನರೂಪದಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಿದ್ದು ತಪ್ಪು, ಇನ್ಮುಂದೆ ಇಂಥ ಕೃತ್ಯ ಎಸಗಿದರೆ ಸರಿ ಇರಲ್ಲ ಎಂದು ನಕ್ಸಲರು ಎಚ್ಚರಿಸಿದ್ದಾರೆ.[ಸುಕ್ಮಾ ನಕ್ಸಲ್ ದಾಳಿಯ ಹಿಂದಿನ ನಿಜವಾದ ಕಾರಣ!]

ಗಣ್ಯಾತಿಗಣ್ಯರು, ನಟ, ನಟಿಯರು, ಕ್ರೀಡಾಪಟುಗಳು ಯಾವುದೇ ಸೆಲೆಬ್ರಿಟಿಗಳಿರಲಿ ಆರ್ಥಿಕ ಸಹಾಯ ನೀಡುವುದು ಸರಿಯಾ ಕ್ರಮವಲ್ಲ, ಶೋಷಿತರ ಪರವಾಗಿ ದನಿಯೆತ್ತಿ ನಮ್ಮ ಹೋರಾಟದ ಭಾಗವಾಗಲಿ, ಬಡವರಿಗೆ ಸಲ್ಲಬೇಕಾದ ಹಕ್ಕು, ಸೌಲಭ್ಯ ಸಿಗುವಂತೆ ಮಾಡಲಿ, ದಮನಿತರ ವಿರುದ್ಧ ನಡೆದಿರುವ ದೌರ್ಜನ್ಯದ ವಿರುದ್ಧ ದನಿ ಎತ್ತಲಿ ಎಂದು ಕರಪತ್ರ, ಪೋಸ್ಟರ್ ಗಳನ್ನು ಹಂಚಲಾಗಿದೆ.[ನಕ್ಸಲೀಯರ ಇತ್ತೀಚಿನ ಹತ್ಯಾಕಾಂಡ : ಟೈಮ್ ಲೈನ್]












Click it and Unblock the Notifications