ಸುಕ್ಮಾ ನಕ್ಸಲ್ ದಾಳಿಯ ಹಿಂದಿನ ನಿಜವಾದ ಕಾರಣ!
ಈ ಹತ್ಯೆಯ ಹಿಂದಿನ ಕಾರಣ ಮಾತ್ರ ನಾಚಿಕೆಗೇಡಿನದು. ಈ ಪ್ರದೇಶದಲ್ಲಿ ಸಿಆರ್ಪಿಎಫ್ ಯೋಧರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯದ ವಿರುದ್ಧ ನಕ್ಸಲೀಯರು ಕಿಡಿಕಾರುತ್ತಿದ್ದರು. ಅವರಿಗೆ ಆ ಪ್ರದೇಶದಲ್ಲಿ ಅಭಿವೃದ್ಧಿ ಬೇಡವಾಗಿತ್ತು. ಇದಕ್ಕಾಗಿ ಈ ಹತ್ಯೆ.
ಬೆಂಗಳೂರು, ಏಪ್ರಿಲ್ 25 : ನೂರರ ಆಸುಪಾಸಿನಲ್ಲಿದ್ದ ಕೇಂದ್ರ ಮೀಸಲು ದಳದ ಪೊಲೀಸರ ಮೇಲೆ ಮುನ್ನೂರಕ್ಕೂ ಹೆಚ್ಚಿದ್ದ ನಕ್ಸಲೀಯರು ಏಕಾಏಕಿ ಗುಂಡಿನ ದಾಳಿ ನಡೆಸಿ ಭೀಕರ ಹತ್ಯಾಕಾಂಡ ಎಸಗಲು ನಿಜವಾದ ಕಾರಣವಾದರೂ ಏನು?
ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಿದು. ರೋಷಾವೇಶದಿಂದ ಪೊಲೀಸರ ಮೇಲೆ ಮುಗಿಬಿದ್ದು ಯೋಧರನ್ನು ಕೊಂದು ಹಾಕಲು ಇದ್ದ ನಿಜವಾದ ಕಾರಣ ಅಭಿವೃದ್ಧಿ. ಅಭಿವೃದ್ದಿ ಇಲ್ಲದ್ದಕ್ಕಲ್ಲ. ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಕ್ಕೆ ಈ ಪ್ರತೀಕಾರ![ನಕ್ಸಲೀಯರ ಇತ್ತೀಚಿನ ಹತ್ಯಾಕಾಂಡ : ಟೈಮ್ ಲೈನ್]

ಛತ್ತೀಸ್ ಗಢದ ಸುಕ್ಮಾ ಪ್ರಾಂತ್ಯದಲ್ಲಿ ಸೋಮವಾರ ಮಧ್ಯಾಹ್ನ ನಡೆಸಿದ ಭೀಕರ ಗುಂಡಿನ ದಾಳಿಗೆ ಸಿಆರ್‌ಪಿಎಫ್‌ಗೆ ಸೇರಿದ 26 ಯೋಧರನ್ನು ನಕ್ಸಲೀಯರು ಹತ್ಯೆ ಮಾಡಿದ್ದು ಇಡೀ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.
ಈ ಹತ್ಯೆಯ ಹಿಂದಿನ ಕಾರಣ ಮಾತ್ರ ನಾಚಿಕೆಗೇಡಿನದು. ಈ ಪ್ರದೇಶದಲ್ಲಿ ಸಿಆರ್ಪಿಎಫ್ ಯೋಧರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯದ ವಿರುದ್ಧ ನಕ್ಸಲೀಯರು ಕಿಡಿಕಾರುತ್ತಿದ್ದರು. ಅವರಿಗೆ ಆ ಪ್ರದೇಶದಲ್ಲಿ ಅಭಿವೃದ್ಧಿ ಬೇಡವಾಗಿತ್ತು. ಇದಕ್ಕಾಗಿ ಈ ಹತ್ಯೆ.
ಸುಕ್ಮಾದಲ್ಲಿ ಮೈಲುಗಟ್ಟಲೆ ರಸ್ತೆ ಹಾಕಲಾಗಿದೆ. ಒಟ್ಟು 44 ಜಿಲ್ಲೆಗಳಲ್ಲಿ 5,412 ಕಿ.ಮೀ.ನಷ್ಟು ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯ ಹಸಿರು ನಿಶಾನೆ ನೀಡಿದೆ. ಛತ್ತೀಸಗಢ, ಬಿಹಾರ, ಜಾರ್ಖಂಡ್, ಆಂಧ್ರಪ್ರದೇಶ, ಓರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಈ ರಸ್ತೆ ನಿರ್ಮಿಸಲಾಗುತ್ತಿದೆ. [ನಕ್ಸಲರ ದಾಳಿ ಹಿಂದೆ ಜೆಎನ್ ಯು ವಿವಿಯ ಪಿತೂರಿ?]
Saluting the bravehearts !!
— Prasar Bharati (@prasarbharati) April 25, 2017
Prasar Bharati salutes the supreme sacrifice of 25 @crpfindia bravehearts of #SukmaAttack. pic.twitter.com/4q27PaKA5f
ಈ ರಸ್ತೆ ನಿರ್ಮಾಣವಾದರೆ ಅಲ್ಲೆಲ್ಲ ಶಾಲೆ, ಕಾಲೇಜು, ಆಸ್ಪತ್ರೆ ಮತ್ತಿತರ ವ್ಯಾಪಾರ ಕೇಂದ್ರಗಳು ತಲೆ ಎತ್ತುತ್ತವೆ. ಈ ಎಲ್ಲ ಅಭಿವೃದ್ಧಿ ಕಾರ್ಯ ಕಾರ್ಯಗತವಾದರೆ, ಈ ಪ್ರದೇಶದಲ್ಲಿ ಕೇಂದ್ರ ಏನೂ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲವೆಂದು ದೂರುತ್ತಿದ್ದ ನಕ್ಸಲೀಯರ ಸಿದ್ಧಾಂತಕ್ಕೆ ಹೊಡೆತ ಬೀಳುತ್ತಲಿತ್ತು. [ಛತ್ತೀಸ್ ಘಡ ಎನ್ಕೌಂಟರ್: ಪೊಲೀಸರ ಸಾವಿನ ಸಂಖ್ಯೆ 26ಕ್ಕೆ ಏರಿಕೆ]
ಈ ಎಲ್ಲ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ ಸಹಕಾರ ನೀಡುತ್ತಿತ್ತು. ಇದು ನಕ್ಸಲೀಯರಿಗೆ ಬೇಡವಾಗಿತ್ತು. ಪೊಲೀಸರ ಮೇಲೆ ದಾಳಿ ನಡೆಸಿದ್ದರ ಮೂಲ ಉದ್ದೇಶ, ಇಂಥ ಕೆಲಸದಲ್ಲಿ ಪೊಲೀಸರು ತಲೆ ಹಾಕಬಾರದು ಎಂದು ಕೇಂದ್ರ ಗೃಹ ಸಚಿವಾಲಯ ಭದ್ರತಾ ಇಲಾಖೆಯ ಹಿರಿಯ ಅಧಿಕಾರಿ ಕೆ ವಿಜಯ್ ಕುಮಾರ್ ಹೇಳುತ್ತಾರೆ. [ಹುತಾತ್ಮರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ರಾಜನಾಥ್]
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications