ಲಿಂಗ ಪರಿವರ್ತನೆಗೊಂಡ ನಾವಿಕ ನೌಕಾಪಡೆಯಿಂದ ವಜಾ

By: ವಿಕಾಸ್ ನಂಜಪ್ಪ
Subscribe to Oneindia Kannada

ಮುಂಬೈ, ಅಕ್ಟೋಬರ್ 10: ಭಾರತೀಯ ನೌಕಾ ಪಡೆಯ ಸೇವೆಯಲ್ಲಿದ್ದ ನಾವಿಕನೊಬ್ಬನನ್ನು ಲಿಂಗ ಪರಿವರ್ತನೆಗೊಂಡಿದ್ದಕ್ಕೆ ಉದ್ಯೋಗದಿಂದ ವಜಾಗೊಳಿಸಿರುವ ಘಟನೆ ನಡೆದಿದೆ. ಲಿಂಗ ಪರಿವರ್ತನೆಗೆ ಒಳಗಾಗಿದ್ದ ಭಾರತೀಯ ನೌಕಾ ಪಡೆಯ ನಾವಿಕನನ್ನು ಮನೀಶ್ ಗಿರಿ ಎಂದು ಗುರುತಿಸಲಾಗಿದೆ.

ರಜೆ ಮೇಲೆ ಊರಿಗೆ ತೆರಳಿದ್ದ ಮನೀಶ್ ಮತ್ತೆ ನೌಕಾ ಪಡೆ ಕೆಲಸಕ್ಕೆ ಬಂದಾಗ ಅವನು ಬದಲು ಅವಳಾಗಿದ್ದ. ಗಂಡು ಹೆಣ್ಣಾದ ಪ್ರಸಂಗ ನೌಕಾಪಡೆಗೆ ಇರಿಸುಮುರಿಸು ತಂದಿತ್ತು. ಈ ಕಾರಣದಿಂದ ಆತನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ನೌಕಾ ಪಡೆಯ ನಿಯಮಗಳ ಪ್ರಕಾರ ಈತ/ಈಕೆಯ ಸೇವೆ ಅಗತ್ಯವಿಲ್ಲ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

Navy sacks sailor for undergoing sex change

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮನೀಶ್, ನೌಕಾ ಪಡೆ ಸೇವೆಗೆ ಹಿಂದಿರುಗಿದಾಗ ಅವನಲ್ಲಿ/ಅವಳಲ್ಲಿ ಕಂಡು ಬಂದ ಬದಲಾವಣೆ ಮತ್ತು ಸ್ತ್ರೀವರ್ತನೆಯನ್ನು ಪರಿಗಣಿಸಿ, ನೌಕಾಪಡೆ ನಿಯಮ ಮೀರಿದ ಕಾರಣಕ್ಕೆ ಗಿರಿಯನ್ನು ಕರ್ತವ್ಯದಿಂದ ಆಡಳಿತಾತ್ಮಕವಾಗಿ ಕೈಬಿಡಲಾಗಿದೆ ಎಂದು ನೌಕಾಪಡೆ ಪ್ರಕಟಿಸಿದೆ.

ವಿಶಾಖಪಟ್ಟಣಂನ ಐಎನ್‍ಎಸ್ ಎಕ್ಸಿಲಾ ಬೇಸ್‍ನಲ್ಲಿ ಕರ್ತವ್ಯದಲ್ಲಿದ್ದ ಮನೀಶ್ ನೌಕಾಪಡೆಯ ನಾವಿಕನಾಗಿದ್ದ. ಲಿಂಗ ಪರಿವರ್ತನೆಗೆ ಒಳಗಾಗುವ ಮುನ್ನವೇ ಸೀರೆಯುಡಲು ಹಾಗೂ ಕೂದಲನ್ನು ಉದ್ದವಾಗಿ ಬೆಳೆಸಲು ಆರಂಭಿಸಿದ್ದ. ಅಲ್ಲದೇ ತನ್ನ ಹೆಸರನ್ನು ಸಬಿ ಎಂದು ಬದಲಿಸಿಕೊಂಡಿದ್ದ ಎಂದು ಜತೆಗಾರರು ಹೇಳಿದ್ದಾರೆ.

ವಿನಾಕಾರಣ ನನ್ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ನಾನು ಏಳುವರ್ಷ ದುಡಿದಿದ್ದೇನೆ. ಲಿಂಗ ಪರಿವರ್ತನೆಯಾಗಿದ್ದಕ್ಕೆ ಉದ್ಯೋಗದಿಂದ ವಜಾಗೊಳಿಸಿರುವುದು ಎಷ್ಟು ಸರಿ? ನಾನು ಈ ಬಗ್ಗೆ ಕಾನೂನಿನ ಹೋರಾಟ ನಡೆಸುತ್ತೇನೆ ಎಂದು ಸಬಿ ಟೈಮ್ಸ್ ಆಫ್ ಇಂಡಿಯಾಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Navy has sacked a sailor who underwent a sex change surgery last year. The Navy issued the order on the ground that Manish Giri, the sailor had violated rules and regulations under which he was recruited.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ