Navratri celebration: ನವರಾತ್ರಿ ಹಬ್ಬ: ಬಂಗಾಳದಿಂದ ಗುಜರಾತ್‌ವರೆಗೆ ಆಚರಣೆ ಹೇಗಿರುತ್ತೆ...?

ಭಾರತದಲ್ಲಿನ ಪ್ರತಿಯೊಂದು ಹಬ್ಬವೂ ತನ್ನದೇ ಆದ ವೈಭವವನ್ನು ಹೊಂದಿದೆ. ಶಾರದೀಯ ನವರಾತ್ರಿ ಹಿಂದೂ ಧರ್ಮದ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳ ಕಾಲ ದುರ್ಗೆಯನ್ನು ಪೂರ್ಣ ವಿಧಿವಿಧಾನಗಳೊಂದಿಗೆ ದೇಶದೆಲ್ಲೆಡೆ ಪೂಜಿಸಲಾಗುತ್ತದೆ.

ಈ ಅವಧಿಯಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಿ, ಹೊಸ ಉಡುಪು ಧರಿಸುವ ಮೂಲಕ ದುರ್ಗಾ ದೇವಿ ಪೆಂಡಾಲ್‌ಗಳಿಗೆ ಭಕ್ತರು ಭೇಟಿ ನೀಡಿ ಸಂಭ್ರಮಿಸುತ್ತಾರೆ. ಇತರ ಅನೇಕ ಕಾರ್ಯಕ್ರಮಗಳನ್ನು ಸಹ ಈ ವೇಳೆ ಆಯೋಜಿಸಲಾಗುತ್ತದೆ. ಹಾಗಾದರೆ ಬಂಗಾಳದಿಂದ ಗುಜರಾತ್‌ವರೆಗೆ ನವರಾತ್ರಿಯನ್ನು ಹೇಗೆ ಆಚರಿಸಲಾಗುತ್ತದೆ ಎಂಬುದನ್ನು ತಿಳಿಯೋಣ.

Navratri festival: How is the celebration from Bengal to Gujarat...?

ಗುಜರಾತಿನ ಗರ್ಬಾ ಅಥವಾ ದಾಂಡಿಯಾ (ಕೋಲಾಟ)

ನವರಾತ್ರಿಯ ನಿಜವಾದ ವೈಭವವನ್ನು ನೋಡಲು ನೀವು ಬಯಸಿದರೆ ಗುಜರಾತ್ ಉತ್ತಮ ಸ್ಥಳ. ಇಲ್ಲಿ ನೀವು 9 ದಿನಗಳವರೆಗೆ ಗುಜರಾತ್ನ ಬೇರೆ ನೋಟವನ್ನೆ ಕಾಣಬಹುದು. ನವರಾತ್ರಿಯಲ್ಲಿ ಗರ್ಬಾ (ಕೋಲಾಟ) ಆಡುವ ಸಂಪ್ರದಾಯವಿದೆ. ಇದನ್ನು ಜನರು ವರ್ಷಗಳಿಂದ ಅನುಸರಿಸುತ್ತಾ ಬಂದಿದ್ದಾರೆ. ಜನರು ಗರ್ಬಾ ಅಥವಾ ದಾಂಡಿಯಾ ಮೂಲಕ ಮಾತೃದೇವತೆಯನ್ನು ಮೆಚ್ಚಿಸುತ್ತಾರೆ. ಈ ವೇಳೆ ವಿಶೇಷ ರೀತಿಯ ಉಡುಪಿನಲ್ಲಿ ದಾಂಡಿಯಾ ಆಡಲಾಗುತ್ತದೆ. ಇದನ್ನು ವೀಕ್ಷಿಸಲು ನಿಜವಾಗಿಯೂ ವಿಭಿನ್ನ ಅನುಭವ ನೀಡುತ್ತದೆ.

ಬಂಗಾಳದ ದುರ್ಗಾ ಪೂಜೆ

ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ದುರ್ಗೆಯ ಪೂಜೆ ಮತ್ತು ಆರತಿಯನ್ನು ಮಾಡುವ ಅನೇಕ ಸ್ಥಳಗಳಲ್ಲಿ ಪಾಂಡಲ್ಗಳನ್ನು ಹಾಕಿ ಅಲಂಕರಿಸಲಾಗುತ್ತದೆ. ವಿವಿಧ ರೀತಿಯ ನೈವೇದ್ಯಗಳನ್ನು ಮಾಡಲಾಗುತ್ತದೆ ಮತ್ತು ವಿತರಿಸಲಾಗುತ್ತದೆ. ವಿವಿಧ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ಹಬ್ಬವು ಆರನೇ ದಿನದಿಂದ ಪ್ರಾರಂಭವಾಗಿ ಹತ್ತನೇ ದಿನದವರೆಗೆ ಮುಂದುವರಿಯುತ್ತದೆ. ದುರ್ಗಾಪೂಜೆಯ ಪ್ರತಿ ಒಂದು ದಿನವೂ ಇಲ್ಲಿನ ಜನರಿಗೆ ವಿಶೇಷ.

Navratri festival: How is the celebration from Bengal to Gujarat...?

ತಮಿಳುನಾಡಿನ ಗೊಂಬೆ ಪೂಜೆ

ನೀವು ನವರಾತ್ರಿ ಸಮಯದಲ್ಲಿ ತಮಿಳುನಾಡಿಗೆ ಭೇಟಿ ನೀಡಲು ಯೋಜಿಸಬಹುದು. ಯಾಕೆಂದರೆ ಇಲ್ಲಿ ನವರಾತ್ರಿಯನ್ನು ಗೊಂಬೆ ಪೂಜೆ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಇದರಲ್ಲಿ ಇಲ್ಲಿ ತಯಾರಿಸಿದ ಸಾಂಪ್ರದಾಯಿಕ ಗೊಂಬೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಗೊಂಬೆಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಈ ಸಮಯದಲ್ಲಿ ಜನರು ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ದೀಪಗಳನ್ನು ಬೆಳಗಿಸಿ ಮತ್ತು ಶುಭ ಗೀತೆಗಳನ್ನು ಹಾಡುವ ಪದ್ಧತಿ ಇದೆ.

ಮಹಾರಾಷ್ಟ್ರದಲ್ಲಿ ನವರಾತ್ರಿ

ನೀವು ನವರಾತ್ರಿಯ ರಜಾದಿನಗಳಲ್ಲಿ ಮಹಾರಾಷ್ಟ್ರಕ್ಕೆ ಹೋಗಲು ಯೋಜಿಸಬಹುದು. ಏಕೆಂದರೆ ಇಲ್ಲಿಯೂ ನವರಾತ್ರಿ ಆಚರಣೆಯು ವಿನೋದಮಯವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಮಹಿಳೆಯರು ವಿವಾಹಿತ ಸ್ತ್ರೀಯರನ್ನು ತಮ್ಮ ಮನೆಗೆ ಕರೆಸಿ ಸಿಂಧೂರ, ಬಿಂದಿ, ಕುಂಕುಮವನ್ನು ನೀಡುವ ಮೂಲಕ ಅಲಂಕರಿಸುತ್ತಾರೆ.

Navratri festival: How is the celebration from Bengal to Gujarat...?

ಕೇರಳ ನವರಾತ್ರಿ

ಕೇರಳವು ಬಹುತೇಕ ಪ್ರತಿಯೊಬ್ಬರು ಭೇಟಿ ನೀಡಲು ಕನಸು ಕಾಣುವ ಸ್ಥಳವಾಗಿದೆ. ಆದ್ದರಿಂದ ನೀವು ಈ ಸಮಯದಲ್ಲಿ ಇಲ್ಲಿಗೆ ಹೋಗಲು ಯೋಜಿಸಬಹುದು. ಬಹುತೇಕ ಕಡೆಗಳಲ್ಲಿ ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಿದರೆ, ಕೇರಳದಲ್ಲಿ ಕೊನೆಯ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಇಲ್ಲಿನ ಜನರು ತಾಯಿ ಸರಸ್ವತಿಯನ್ನು ಪೂಜಿಸುತ್ತಾರೆ. ತಾಯಿ ಸರಸ್ವತಿಯನ್ನು ಪೂಜಿಸುವುದರಿಂದ ಜ್ಞಾನ ಮತ್ತು ವಿವೇಕ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+