ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಾದ್ಯಂತ ಶನಿವಾರ ಕೋವಿಡ್-19 ಲಸಿಕೆಯ ಡ್ರೈ ರನ್: ಏನೆಂದು ತಿಳಿಯಿರಿ

|
Google Oneindia Kannada News

ನವದೆಹಲಿ, ಜನವರಿ 01: ಕೋವಿಡ್ -19 ಲಸಿಕೆ ನೀಡಲು ರಾಷ್ಟ್ರಾದ್ಯಂತ ಸಿದ್ಧತೆಗಳು ಪೂರ್ಣಗೊಂಡಿದ್ದು, ಶನಿವಾರ ಹಲವು ರಾಜ್ಯಗಳಲ್ಲಿ ತಾಲೀಮು ನಡೆಸಲಾಗುತ್ತದೆ.

ಶನಿವಾರದಂದು (ಜನವರಿ 02) ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ನೀಡುವ ತಾಲೀಮು ನಡೆಯಲಿದೆ. ಇದಕ್ಕಾಗಿ ಸಂಬಂಧಿಸಿದಂತೆ ಪೂರ್ವ ತಯಾರಿಯನ್ನು ನಡೆಸಲಾಗಿದೆ.

ಜನವರಿ 1; ಕರ್ನಾಟಕದಲ್ಲಿ 877 ಕೊರೊನಾ ಪ್ರಕರಣಗಳು ದಾಖಲುಜನವರಿ 1; ಕರ್ನಾಟಕದಲ್ಲಿ 877 ಕೊರೊನಾ ಪ್ರಕರಣಗಳು ದಾಖಲು

ಕೋವಿಡ್ -19 ವ್ಯಾಕ್ಸಿನೇಷನ್ ತಾಲೀಮು ಮೊದಲ ಹಂತ ದೋಷರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಭಾರತದಾದ್ಯಂತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ಆಯೋಜಿಸುತ್ತವೆ.

Nationwide Covid-19 Vaccine Dry Run On Saturday: Know More

ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತುರ್ತು ಬಳಕೆಯ ಅನುಮೋದನೆಗಾಗಿ ವಿವಿಧ ಕೋವಿಡ್ -19 ಲಸಿಕೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಇದರ ನಡುವೆ ತುರ್ತು ಬಳಕೆಗಾಗಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಶುಕ್ರವಾರ ಅನುಮೋದಿಸಿದೆ ಎಂದು ರಾಯಿಟರ್ಸ್ ಮೂಲಗಳು ಉಲ್ಲೇಖಿಸಿದೆ.

ಡ್ರೈ ರನ್ ಎಂದರೇನು?

ಡ್ರೈ ರನ್ ಮೂಲಭೂತವಾಗಿ ಅಭ್ಯಾಸದ ಸೆಷನ್ ಆಗಿದ್ದು, ಅಲ್ಲಿ ಮಾದರಿ ಸಂಖ್ಯೆಯ ಫಲಾನುಭವಿಗಳು ಲಸಿಕೆ ಪಡೆಯುವ ರೀತಿಯಲ್ಲಿ ಅಣಕು ಪ್ರದರ್ಶನದ ಮೂಲಕ ರೋಗನಿರೋಧಕ ಪ್ರಕ್ರಿಯೆಗೆ ಒಳಗಾಗುತ್ತಾರೆ.

ಡ್ರೈ ರನ್‌ನಲ್ಲಿ ಯಾರು ಭಾಗವಹಿಸುತ್ತಾರೆ?

ಗೊತ್ತುಪಡಿಸಿದ ಲಸಿಕೆಯ ಕೇಂದ್ರಗಳ ಸಿಬ್ಬಂದಿಯ ಹೊರತಾಗಿ, ಆರೋಗ್ಯ ಕಾರ್ಯಕರ್ತರ ಆಯ್ದ ಗುಂಪಿನ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ. ಪ್ರತಿ ಕೇಂದ್ರವು ತಾಲೀಮಿನಲ್ಲಿ 25 ಪರೀಕ್ಷಾ ಫಲಾನುಭವಿಗಳನ್ನು ಗುರುತಿಸುತ್ತದೆ.

English summary
To ensure that phase 1 of Covid-19 vaccination drive goes glitch-free, all states and UTs across India will organise a dry run on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X