ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 29ಕ್ಕೆ ದೇಶವನ್ನು ಉದ್ದೇಶಿಸಿ ನರೇಂದ್ರ ಮೋದಿ ಭಾಷಣ

|
Google Oneindia Kannada News

ನವದೆಹಲಿ, ಜುಲೈ 27; ಪ್ರಧಾನಿ ನರೇಂದ್ರ ಮೋದಿ ಜುಲೈ 29ರಂದು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಮೋದಿ ಮಾತನಾಡಲಿದ್ದಾರೆ ಎಂಬ ಮಾಹಿತಿ ಇದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಬದಲಾವಣೆಗಳು ಆರಂಭವಾಗಿ ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕೇಂದ್ರ ಜಾರಿಗೊಳಿಸಲು ಹೊರಟಿರುವುದು ರಾಷ್ಟ್ರೀಯ ಕೋಮುವಾದಿ ಶಿಕ್ಷಣ ನೀತಿಯೋ?ಕೇಂದ್ರ ಜಾರಿಗೊಳಿಸಲು ಹೊರಟಿರುವುದು ರಾಷ್ಟ್ರೀಯ ಕೋಮುವಾದಿ ಶಿಕ್ಷಣ ನೀತಿಯೋ?

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಟ್ವೀಟ್ ಮಾಡಿದ್ದಾರೆ. "ಎನ್‌ಇಪಿ ಶಿಕ್ಷಣವನ್ನು ಸಮಗ್ರವಾಗಿಸಲು ಮತ್ತು ಆತ್ಮ ನಿರ್ಭಾರ ಭಾರತಕ್ಕೆ ಬಲವಾದ ಅಡಿಪಾಯಗಳನ್ನು ನಿರ್ಮಿಸಲು ಮಾರ್ಗದರ್ಶಕವಾಗಿದೆ" ಎಂದು ಹೇಳಿದ್ದಾರೆ.

 ವೇದಾಧ್ಯಯನಕ್ಕಾಗಿ 2 ಖಾಸಗಿ ಶಾಲಾ ಮಂಡಳಿ ರಚನೆ: ಶಿಕ್ಷಣ ಸಚಿವಾಲಯ ವೇದಾಧ್ಯಯನಕ್ಕಾಗಿ 2 ಖಾಸಗಿ ಶಾಲಾ ಮಂಡಳಿ ರಚನೆ: ಶಿಕ್ಷಣ ಸಚಿವಾಲಯ

Narendra Modi

"ರಾಷ್ಟ್ರೀಯ ಶಿಕ್ಷಣ ನೀತಿ 21ನೇ ಶತಮಾನದ ಭಾರತಕ್ಕೆ ಹೊಸ ಆಯಾಮ ನೀಡಲಿದ್ದು, ದೇಶದ ಭವಿಷ್ಯವನ್ನು ನಿರ್ಮಾಣ ಮಾಡಲು ಬುನಾದಿ ಹಾಕುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ.

ಕೇಂದ್ರದಲ್ಲಿ ಧರ್ಮೇಂದ್ರ ಪ್ರಧಾನ್ ಪಾಲಿಗೆ ಒಲಿದ ಶಿಕ್ಷಣ ಖಾತೆ ಕೇಂದ್ರದಲ್ಲಿ ಧರ್ಮೇಂದ್ರ ಪ್ರಧಾನ್ ಪಾಲಿಗೆ ಒಲಿದ ಶಿಕ್ಷಣ ಖಾತೆ

ಪ್ರಧಾನಿ ನರೇಂದ್ರ ಮೋದಿ, "ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನವ ಭಾರತದ ಹೊಸ ಆಕಾಂಕ್ಷೆಗಳು ಮತ್ತು ಹೊಸ ಅವಕಾಶಗಳನ್ನು ಈಡೇರಿಸುವ ಸಾಧನವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಇನ್ನೂ ಹಳೆಯ ವ್ಯವಸ್ಥೆಯಡಿಯಲ್ಲಿ ಸಾಗುತ್ತಿತ್ತು" ಎಂದು ಹೇಳಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಳೆದ ವರ್ಷ ಒಪ್ಪಿಗೆ ಕೊಟ್ಟಿದ್ದ ಕೇಂದ್ರ ಸರ್ಕಾರ 2022ರಲ್ಲಿ ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡಾಗ, ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಓದಬೇಕು ಎಂಬ ಗುರಿಯನ್ನು ಹೊಂದಿತ್ತು.

ಹೊಸ ಶಿಕ್ಷಣ ನೀತಿಯಡಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತದೆ. ಹಿಂದಿನ 10+2 ವ್ಯವಸ್ಥೆಯನ್ನು ಬದಲಾವಣೆ ಮಾಡಿ 5+3+3+4 ವ್ಯವಸ್ಥೆ ತರಲಾಗುತ್ತದೆ. ನಗರದ ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಣವು ಗ್ರಾಮಗಳನ್ನೂ ತಲುಪಲಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಮೋದನೆಗೆ ಒಪ್ಪಿಗೆ ನೀಡಲಾಗಿತ್ತು. ಈಗ ಶಿಕ್ಷಣ ನೀತಿ ಜಾರಿಗೆ ಒಪ್ಪಿಗೆ ನೀಡಿ ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.

English summary
Prime minister of India Narendra Modi to address the nation on 29th July on completion of one year of transformational reforms under national education policy 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X