ಮುಂಬೈನಲ್ಲಿ ಭಯ ಹುಟ್ಟಿಸುವ ಕೊವಿಡ್-19 ಹೊಸ ರೂಪಾಂತರಿ 'XE' ಪತ್ತೆ

ಮುಂಬೈ, ಏಪ್ರಿಲ್ 6: ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳ ಹಾವಳಿ ಬಹುತೇಕ ತಗ್ಗಿದೆ. ಇದರ ಮಧ್ಯೆ ಇಂಗ್ಲೆಂಡಿನಲ್ಲಿ ಭಯ ಹುಟ್ಟಿಸಿರುವ ಹೊಸ ಕೊವಿಡ್-19 ರೂಪಾಂತರಿಯ ಮೊದಲ ಪ್ರಕರಣ ಭಾರತದಲ್ಲೂ ಪತ್ತೆಯಾಗಿದೆ.

ಮುಂಬೈನಲ್ಲಿ ಒಮಿಕ್ರಾನ್‌ನ BA.2 ಉಪ-ತಳಿ XE ಎಂದು ಕರೆಯಲ್ಪಡುವ ಕೊರೊನಾವೈರಸ್‌ನ ಹೊಸ ರೂಪಾಂತರದ ಮೊದಲ ಪ್ರಕರಣ ಪತ್ತೆಯಾಗಿದೆ. ಈ ರೂಪಾಂತರಿ ಹಿಂದಿನ ತಳಿಗಳಿಗೆ ಹೋಲಿಸಿದರೆ ಅತಿಹೆಚ್ಚು ಅಪಾಯಕಾರಿ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಕೋವಿಡ್-19 ರೋಗದ ಡೆಲ್ಟಾ, ಡೆಲ್ಟಾ ಪ್ಲಸ್ ಮತ್ತು ಓಮಿಕ್ರಾನ್ ರೂಪಾಂತರಿಗಿಂತ ಎಕ್ಸ್ಇ ರೂಪಾಂತರಿಯು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಅದರ ಕುರಿತು ಎಚ್ಚರಿಕೆ ನೀಡಿದೆ.

50 ವರ್ಷದ ಮಹಿಳೆಯಲ್ಲಿ ಹೊಸ ರೂಪಾಂತರಿ ಪತ್ತೆ

50 ವರ್ಷದ ಮಹಿಳೆಯಲ್ಲಿ ಹೊಸ ರೂಪಾಂತರಿ ಪತ್ತೆ

ಕೊರೊನಾವೈರಸ್ ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿರುವ 50 ವರ್ಷದ ಮಹಿಳೆಯಲ್ಲಿ ಕೋವಿಡ್-19 ಹೊಸ ರೂಪಾಂತರಿ ಎಕ್ಸ್ಇ ಪತ್ತೆಯಾಗಿದೆ. ಮಹಿಳೆಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳಿಲ್ಲ ಎಂದು ಬಿಎಂಸಿ ಹೇಳಿದೆ. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಮಹಿಳೆಯು ಕಳೆದ ಫೆಬ್ರವರಿ 10ರಂದು ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಆಗಮಿಸಿದ್ದರು. ಅಂದು ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶವನ್ನು ಪಡೆದುಕೊಂಡಿದ್ದ ಮಹಿಳೆಯು ಮಾರ್ಚ್ 2ರಂದು ರೋಟಿನ್ ಚೆಕ್ ಅಪ್ ಮಾಡಿಸಿಕೊಳ್ಳಲು ತೆರಳಿದ ವೇಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಕೊರೊನಾವೈರಸ್ ಹೊಸ ರೂಪಾಂತರಿ ಎಕ್ಸ್ಇ ಕುರಿತು ತಿಳಿಯಿರಿ

ಕೊರೊನಾವೈರಸ್ ಹೊಸ ರೂಪಾಂತರಿ ಎಕ್ಸ್ಇ ಕುರಿತು ತಿಳಿಯಿರಿ

ಹೊಸ ರೂಪಾಂತರ, XE, Omicron ನ ಎರಡು ಆವೃತ್ತಿಗಳ ರೂಪಾಂತರಿತ ಹೈಬ್ರಿಡ್ ಆಗಿದೆ - BA.1 ಮತ್ತು BA.2. ಇದು ಈ ಸಮಯದಲ್ಲಿ ಜಗತ್ತಿನಾದ್ಯಂತ ಸಣ್ಣ ಪ್ರಮಾಣದ ಪ್ರಕರಣಗಳಿಗೆ ಮಾತ್ರ ಕಾರಣವಾಗಿದೆ. "XE ಮರುಸಂಯೋಜಕ (BA.1-BA.2), ಜನವರಿ 19 ರಂದು ಯುಕೆನಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. 600 ಕ್ಕಿಂತ ಕಡಿಮೆ ಅನುಕ್ರಮಗಳು ವರದಿಯಾಗಿವೆ ಮತ್ತು ದೃಢೀಕರಿಸಲ್ಪಟ್ಟಿವೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಅಮೆರಿಕಾದಲ್ಲಿ ಭಯ ಹೆಚ್ಚಲು ಕಾರಣವೇ ಎಕ್ಸ್ಇ ರೂಪಾಂತರಿ

ಅಮೆರಿಕಾದಲ್ಲಿ ಭಯ ಹೆಚ್ಚಲು ಕಾರಣವೇ ಎಕ್ಸ್ಇ ರೂಪಾಂತರಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಅತಿಹೆಚ್ಚು ರೂಪಾಂತರಗಳು ಆಗಾಗ ಸದ್ದು ಮಾಡಿ ಸುದ್ದಿ ಆಗುತ್ತವೆ. ಅದೇ ರೀತಿ ಜಗತ್ತಿನ ಅದೆಷ್ಟೋ ರಾಷ್ಟ್ರಗಳಲ್ಲಿ ಕೊವಿಡ್ ಮೂರನೇ ಅಲೆಗೆ ಕಾರಣವಾಗಿದ್ದು ಇದೇ ಓಮಿಕ್ರಾನ್ ರೂಪಾಂತರಿ. ಈ ಓಮಿಕ್ರಾನ್ ರೂಪಾಂತರದ ಪೈಕಿ ಇದುವರೆಗೂ BA.2 ಉಪ ತಳಿಯು ಅತಿಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿತ್ತು. ಆದರೆ ಈಗ ಓಮಿಕ್ರಾನ್ ರೂಪಾಂತರಿಯಲ್ಲೇ ಎಕ್ಸ್ಇ ತಳಿಯು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ ಎಂದು ಗೊತ್ತಾಗಿದೆ. ಯುಎಸ್ ನೆಲದ ಹಲವು ಪ್ರದೇಶಗಳಲ್ಲಿ ಈಗಾಗಲೇ ಎಕ್ಸ್ಇ ತಳಿಯು ಪತ್ತೆಯಾಗಿದ್ದು, ಹರಡುವಿಕೆಯ ವೇಗವನ್ನು ಹೆಚ್ಚಿಸಿದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಈ ಮೊದಲಿನ ಬಿಎ.2 ರೂಪಾಂತರಕ್ಕೆ ಹೋಲಿಸಿದರೆ ಈಗಿನ ಹೊಸ ರೂಪಾಂತರಿಯು ಶೇ.10 ಪಟ್ಟು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಅದನ್ನು ಸಂಶೋಧನೆಯ ಮೂಲಕ ದೃಢೀಕರಣ ಮಾಡಿಕೊಳ್ಳುವ ಅಗತ್ಯವಿದೆ," ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ. XE ರೂಪಾಂತರದಲ್ಲಿನ ತೀವ್ರತೆ ಮತ್ತು ಪ್ರಸರಣದ ವೇಗ ಸೇರಿದಂತೆ ಗುಣಲಕ್ಷಣಗಳಲ್ಲಿನ ಗಮನಾರ್ಹ ವ್ಯತ್ಯಾಸಗಳನ್ನು ಗುರುತಿಸಬೇಕಿದೆ. ಅಲ್ಲಿಯವರೆಗೆ ಇದನ್ನು ಓಮಿಕ್ರಾನ್ ರೂಪಾಂತರದ ಭಾಗವಾಗಿ ವರ್ಗೀಕರಿಸಲಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಮುಂಬೈನಲ್ಲಿ ಕೋವಿಡ್-19 ಪಿಡುಗಿನ ಹಾವಳಿ

ಮುಂಬೈನಲ್ಲಿ ಕೋವಿಡ್-19 ಪಿಡುಗಿನ ಹಾವಳಿ

ಇತ್ತೀಚಿಗೆ ನಡೆಸಿರುವ ಸೆರೋ ಪರೀಕ್ಷೆಯ ವೇಳೆ ಒಂದು ಎಕ್ಸ್ಇ ರೂಪಾಂತರಿ ಪ್ರಕರಣ ಹಾಗೂ ಒಂದು ಕಪ್ಪಾ ರೂಪಾಂತರಿ ಪ್ರಕರಣ ವರದಿಯಾಗಿದೆ. ಒಟ್ಟು 230 ರೋಗಿಗಳ ಮಾದರಿಯನ್ನು ಸೆರೋ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿತ್ತು. ಈ ಪೈಕಿ 21 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅವರಲ್ಲಿ ಯಾವುದೇ ರೋಗಿಯು ಆಕ್ಸಿಜನ್ ಅಥವಾ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ. ಬದಲಿಗೆ ಸಾಮಾನ್ಯ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+