ಎಲ್‌.ಕೆ.ಅಡ್ವಾಣಿ ಬ್ಲಾಗ್ ಬಗ್ಗೆ ಟ್ವೀಟ್ ಮಾಡಿದ ನರೇಂದ್ರ ಮೋದಿ

ಬೆಂಗಳೂರು, ಏಪ್ರಿಲ್ 04 : 'ನನಗೆ ದೇಶ ಮೊದಲು, ನಂತರ ಪಕ್ಷ, ಕೊನೆಯಲ್ಲಿ ನಾನು. ಇದು ನನ್ನ ಸಿದ್ಧಾಂತ. ಇಷ್ಟು ವರ್ಷಗಳ ಕಾಲವೂ ಇದನ್ನೇ ಪಾಲಿಸಿಕೊಂಡು ಬಂದಿದ್ದೇನೆ' ಎಂದು ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಗುರುವಾರ ಸಂಜೆ ಎಲ್‌.ಕೆ.ಅಡ್ವಾಣಿ ಅವರು ತಮ್ಮ ಬ್ಲಾಗ್‌ನಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್ 6ರಂದು ಬಿಜೆಪಿಯ ಸಂಸ್ಥಾಪನಾ ದಿನಾಚರಣೆ. ಈ ಹಿನ್ನಲೆಯಲ್ಲಿಯೇ ಅವರು ಬ್ಲಾಗ್ ಬರೆದಿದ್ದಾರೆ.

ದೇಶಾದ್ಯಂತ ಎಲ್.ಕೆ.ಅಡ್ವಾಣಿ ಅವರ ಬ್ಲಾಗ್ ಬಗ್ಗೆ ಚರ್ಚೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಡ್ವಾಣಿ ಅವರ ಬ್ಲಾಗ್‌ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. 'ಬಿಜೆಪಿ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆ ಇದೆ' ಎಂದು ಹೇಳಿದ್ದಾರೆ.

Narendra Modi

'ಅಡ್ವಾಣಿ ಅವರು ಬಿಜೆಪಿಯ ಆಶಯವನ್ನು ಉತ್ತಮವಾಗಿ ನಿರೂಪಿಸಿದ್ದಾರೆ. ದೇಶ ಮೊದಲು, ಪಕ್ಷ ಆಮೇಲೆ, ನಂತರ ನಾನು ಎನ್ನುವುದು ನಮ್ಮ ಮಂತ್ರವಾಗಿದೆ' ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣಾ ಪುಟ

'ಬಿಜೆಪಿ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆ ಇದೆ. ಎಲ್‌.ಕೆ.ಅಡ್ವಾಣಿ ಅಂತಹ ನಾಯಕರು ಪಕ್ಷವನ್ನು ಕಟ್ಟಿರುವುದಕ್ಕೆ ಹೆಮ್ಮೆ ಇದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+