• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಭಾಷಣದ highlights:ಕೊರೊನಾ ವಿರುದ್ಧ ಲಾಕ್‌ಡೌನ್ ಆಸ್ತ್ರ

|

ನವದೆಹಲಿ, ಮಾರ್ಚ್ 24: ಕೊರೊನಾ ಕುರಿತು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ. ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನೀಡಿದ್ದೆ. ಜನರು ಅದಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಈಗ ಕೊರೊನಾದಿಂದ ಪಾರಾಗಲು social distinction ಒಂದೇ ಮಾರ್ಗವಾಗಿದೆ. ಜನರು ಮನೆಯಲ್ಲಿಯೇ ಇರಬೇಕು. ಇದನ್ನು ಬಿಟ್ಟು ಬೇರೆ ಮಾರ್ಗಗಳು ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ಇದು ನಿಮ್ಮನ್ನು, ನಿಮ್ಮ ಮಕ್ಕಳನ್ನು, ನಿಮ್ಮ ತಂದೆ ತಾಯಿಯನ್ನು, ಸ್ನೇಹಿತರನ್ನು ಕಾಪಾಡುತ್ತದೆ. ಇದನ್ನು ನೀವು ಪಾಲಿಸದಿದ್ದರೆ ಭಾರತ ದೊಡ್ಡ ಬೆಲೆ ತರಬೇಕಾಗುತ್ತದೆ. ಅದರ ಅಂದಾಜು ಸಹ ನಿಮಗೆ ಇಲ್ಲ. ಇಂದು(ಮಾರ್ಚ್ 24) ರಾತ್ರಿ 12 ಗಂಟೆಯಿಂದ ಸಂಪೂರ್ಣ ದೇಶವೇ ಲಾಕ್‌ ಡೌನ್. ಇದೊಂದು ರೀತಿಯಲ್ಲಿ ಕರ್ಫ್ಯೂ ಇದ್ದಂತೆಯೇ. ಜನರು ಮನೆಯಿಂದ ಹೊರ ಬಾರಬಾರದು. ಕೊರೊನಾ ತಡೆಯಲು ಇದು ಅನಿವಾರ್ಯವಾಗಿದೆ ಎಂದು ಮೋದಿ ಹೇಳಿದರು.

ಮಧ್ಯರಾತ್ರಿ 12 ಗಂಟೆಯಿಂದ 21 ದಿನ ಭಾರತಕ್ಕೆ ಭಾರತವೇ ಬಂದ್!

* ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಘೋಷಣೆಗಳು

* ಮಾರ್ಚ್ 24ರ ರಾತ್ರಿ (ಬುಧವಾರ) 12 ಗಂಟೆಯಿಂದ 21 ದಿನ ಭಾರತ ಲಾಕ್ ಡೌನ್

* ರಾಜ್ಯ, ಕೇಂದ್ರಾಡಳಿತ ಪ್ರದೇಶ, ನಗರ, ಪಟ್ಟಣ, ತಾಲೂಕು, ಗ್ರಾಮಮಟ್ಟದ ತನಕ ಎಲ್ಲವೂ ಲಾಕ್ ಡೌನ್

* ಅಘೋಷಿತ ಕರ್ಫ್ಯೂ; ಜನರು ಈ ಅವಧಿಯಲ್ಲಿ ಮನೆಯಿಂದ ಹೊರಬರಬಾರದು

* ಜನ ಸಾಮಾನ್ಯರಿಂದ ಪ್ರಧಾನಿ ತನಕ ಎಲ್ಲರಿಗೂ ಇದು ಅನ್ವಯ

* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇದು ಅನಿವಾರ್ಯ.

* ಮಾಧ್ಯಮದವರು, ವಾರ್ಡ್ ಬಾಯ್‌ಗಳು, ಆಂಬ್ಯುಲೆನ್ಸ್ ಡ್ರೈವರ್‌ಗಳು, ಪೌರ ಕಾರ್ಮಿಕರು ಹಗಲು-ರಾತ್ರಿ ಸೇವೆ ಮಾಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ಇರಿ.

* ಏಪ್ರಿಲ್ 15ನೇ ತಾರೀಕಿನ ತನಕ ಇದೇ ಸ್ಥಿತಿ ಮುಂದುವರಿಕೆ

* 21 ದಿನ ಮನೆಯೊಳಗೆ ಇರದಿದ್ದರೆ ನಿಮ್ಮ ಕುಟುಂಬ 21 ವರ್ಷ ಹಿಂದಕ್ಕೆ

* ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಯಾವುದೇ ಆತಂಕ ಬೇಡ. ಅಗತ್ಯ ಸೇವೆಗಳಾದ ಹಾಲು, ತರಕಾರಿ, ದಿನಸಿ, ಆಸ್ಪತ್ರೆ, ಮೆಡಿಕಲ್ ಶಾಪ್‌ಗಳು ತೆರೆದಿರುತ್ತವೆ

* ಕೊರೊನಾ ವಿರುದ್ಧ ಹೋರಾಟಕ್ಕೆ 15 ಸಾವಿರ ಕೋಟಿ ಅನುದಾನ

* ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ತೆಗೆದುಕೊಳ್ಳಬೇಡಿ

* 11 ದಿನದಲ್ಲಿ 1 ಲಕ್ಷ ಜನರನ್ನು ತಲುಪಿರುವ ಕೊರೊನಾ ಇನ್ನು 1 ಲಕ್ಷ ಮಂದಿ ತಲುಪಲು 3 ದಿನ ಸಾಕು

* ಕೊರೊನಾ 11 ದಿನದಲ್ಲಿ 1 ಲಕ್ಷ ಜನರಿಗೆ ತಲುಪಿದೆ. ಇನ್ನೂ 1 ಲಕ್ಷ ಜನರಿಗೆ ತಲುಪಲು ಮೂರು ದಿನಗಳು ಸಾಕು. ಆದ್ದರಿಂದ, social distinction ನಿಯಮ ಪಾಲನೆ ಮಾಡಿ, ದಯವಿಟ್ಟು ಮನೆಯಿಂದ ಹೊರ ಬರಬೇಡಿ

English summary
Narendra Modi announces 21 days Lock Down in India, Here are the highlights from his speech today(March 24).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X