ಮೂರನೇ ಬಾರಿ ಪ್ರಧಾನಿಯಾಗಲು ಸಜ್ಜಾದ ನರೇಂದ್ರ ಮೋದಿ; ಭಾಷಣದಲ್ಲಿ ಹೇಳಿದ್ದೇನು?
ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 300ರ ಸಮೀಪವಿದ್ದು ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರ ನಡೆಸುವುದು ಖಚಿತವಾಗಿದೆ. ಬಿಜೆಪಿ ಗೆದ್ದರೂ ಬಹುಮತ ಸಾಬೀತು ಪಡಿಸಲು ಮಿತ್ರ ಪಕ್ಷಗಳ ಮೇಲೆ ಅವಲಂಬಿತವಾಗಿದೆ. ಆದರೆ ಕಾಂಗ್ರೆಸ್ ಕಳೆದ ಎರಡು ಬಾರಿಗಿಂತ ಹೆಚ್ಚು ಸೀಟು ಗೆಲ್ಲುವಲ್ಲಿ ಸಫಲವಾಗಿದ್ದು, ಎಕ್ಸಿಟ್ ಪೋಲ್ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ.
ಎನ್‌ಡಿಎ ಸರ್ಕಾರವನ್ನು ರಚಿಸುತ್ತದೆ ಎಂಬುದು ಸ್ಪಷ್ಟವಾದ ನಂತರ ದೆಹಲಿಯ ಬಿಜೆಪಿಯ ಪ್ರಧಾನ ಕಚೇರಿಯಿಂದ ದೇಶವನ್ನುದ್ದೇಶಿಸಿ ನರೇಂದ್ರ ಮೋದಿ ಮಾತನಾಡಿ, ಮತದಾರರಿಗೆ ಧನ್ಯವಾದ ಅರ್ಪಿಸಿದರು. ಇಂದಿನ ಗೆಲುವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿಜಯವಾಗಿದೆ ಎಂದು ಹೇಳಿದರು.

370 ಸ್ಥಾನಗಳ ಗುರಿಯನ್ನು ಹೊಂದಿದ್ದ ಮತ್ತು ಎನ್‌ಡಿಎಗೆ 400 ಪ್ಲಸ್ ಗುರಿಯನ್ನು ಹೊಂದಿದ್ದ ಬಿಜೆಪಿ, ಲೋಕಸಭೆಗೆ 80 ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶದಲ್ಲಿ ತೀವ್ರ ಹಿನ್ನಡೆ ಅನುಭವಿಸಿತು.
ಎನ್‌ಡಿಎ ಸರ್ಕಾರ ರಚನೆ ಮಾಡಿದರೆ, ಸತತ ಮೂರು ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪಂಡಿತ್ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ನರೇಂದ್ರ ಮೋದಿ ಸರಿಗಟ್ಟಲಿದ್ದಾರೆ.
ಹಲವಾರು ಎಕ್ಸಿಟ್ ಪೋಲ್‌ಗಳು ಮೋದಿ ನೇತೃತ್ವದ ಎನ್‌ಡಿಎಗೆ ಭಾರೀ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಆದಾಗ್ಯೂ, ಎಕ್ಸಿಟ್ ಪೋಲ್ ಅಂಕಿ ಅಂಶಗಳು ತಪ್ಪಾಗಿದ್ದು, ಇಂಡಿಯಾ ಒಕ್ಕೂಟ ನಿರೀಕ್ಷೆಗೂ ಮೀರಿ ಉತ್ತಮ ಸಾಧನೆ ತೋರಿದೆ.












Click it and Unblock the Notifications