ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್ ಕಿ ಬಾತ್‌ನಲ್ಲಿ ಯೋಧರಿಗೆ ಗೌರವ ಸಲ್ಲಿಸಿದ ಮೋದಿ

By Super Admin
|
Google Oneindia Kannada News

ಬೆಂಗಳೂರು, ಜುಲೈ 26 : ದೇಶದಾದ್ಯಂತ 16ನೇ ಕಾರ್ಗಿಲ್‌ ವಿಜಯ ದಿವಸವನ್ನು ಆಚರಿಸಲಾಗುತ್ತಿದೆ. ಕಾರ್ಗಿಲ್ ಸಮರದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಮೂಲಕ ಗೌರವ ವಂದನೆ ಸಲ್ಲಿಸಿದ್ದಾರೆ.

ಭಾನುವಾರ ಮನ್ ಕಿ ಬಾತ್‌ನಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, 'ಈ ಸಮರವನ್ನು ಗಡಿಯಲ್ಲಿ ನಿಯೋಜಿತನಾಗಿದ್ದ ಸೈನಿಕನ ಪ್ರತಿಯೊಬ್ಬ ತಂದೆ ಮತ್ತು ವೈರಿಯ ಜೊತೆಗೆ ಸೆಣಸುತ್ತಿದ್ದ ಪ್ರತಿಯೊಬ್ಬ ಸೈನಿಕನ ಸಹೋದರಿ ಕೂಡಾ ನಡೆಸಿದ್ದರು' ಎಂದರು.

narendra modi

'ಕಾರ್ಗಿಲ್‌ ಸಮರ ಗಡಿಯಲ್ಲಿ ಮಾತ್ರ ನಡೆಯಲಿಲ್ಲ. ಭಾರತದ ಪ್ರತಿಯೊಂದು ಗ್ರಾಮ, ನಗರ ಮತ್ತು ಪಟ್ಟಣವೂ ಇದಕ್ಕೆ ತನ್ನ ಕಾಣಿಕೆ ಸಲ್ಲಿಸಿತ್ತು ಎಂದು ಮೋದಿ ಹೇಳಿದರು. [Selfie With Daughter ತೆಗೆದು ಕಳಿಸಿ ಧೈರ್ಯ ತುಂಬಿ]

ಮೋದಿ ಮಾತಿನ ಮುಖ್ಯಾಂಶಗಳು

* ಈ ವರ್ಷದ ಮುಂಗಾರು ಉತ್ತಮವಾಗಿ ಆರಂಭವಾಗಿದೆ. ಇದು ಖಂಡಿತವಾಗಿ ನಮ್ಮ ರೈತರಿಗೆ ಮುಂಗಾರು ಬೆಳೆಗಳನ್ನು ಬೆಳೆಯಲು ನೆರವಾಗಲಿದೆ. ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆ ಶೇ 50 ಮತ್ತು 33ರಷ್ಟು ಹೆಚ್ಚಿದೆ.

* ಈ ಬಾರಿ ಸ್ವಾತಂತ್ರ್ಯೋತ್ಸವದ ದಿನ ಏನು ಮಾತನಾಡಬೇಕು ಎಂಬುದಾಗಿ ಸಲಹೆಗಳನ್ನು ನೀಡುವಂತೆ ಮೋದಿ ಜನರಿಗೆ ಮನವಿ ಮಾಡಿದರು.

* ಸರ್ಕಾರ ಶೀಘ್ರದಲ್ಲಿಯೇ ರಸ್ತೆ ಸುರಕ್ಷತಾ ನೀತಿ ಮತ್ತು ಆಯ್ದ ನಗರಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳಿಗೆ ಒಳಗಾದವರಿಗೆ ನಗದು ರಹಿತ ಚಿಕಿತ್ಸಾ ವ್ಯವಸ್ಥೆ ಜಾರಿಗೆ ತರಲಿದೆ.

* ರಾಷ್ಟ್ರದಲ್ಲಿ ರಸ್ತೆ ಅಪಘಾತಗಳಲ್ಲಿ ಸಂಭವಿಸುತ್ತಿರುವ ಸಾವು ನೋವುಗಳ ಅಂಕಿ-ಅಂಶಗಳು ಗಾಬರಿ ಹುಟ್ಟಿಸುತ್ತದೆ. ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದಾನೆ.

ಮನ್ ಕಿ ಬಾತ್ ಕೇಳಿ

English summary
On Sunday, July 26 Prime Minister Narendra Modi today paid his respects to the martyrs of Kargil on the 16th Kargil Diwas. Modi address the nation on his monthly radio programme Mann ki Baat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X