ಸುಷ್ಮಾಗೆ ಅನಾರೋಗ್ಯ, ವಿದೇಶಾಂಗ ಖಾತೆ ಯಾರಿಗೆ?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 05: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಥಾನಕ್ಕೆ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಚಿವರೊಬ್ಬರನ್ನು ನೇಮಿಸಲು ಪ್ರಧಾನಿ ಮೋದಿ ನಿರ
್ಧರಿಸಿದ್ದಾರೆ ಎಂಬ ಸುದ್ದಿ ಬಂದಿದೆ.

ಕೆಲ ತಿಂಗಳಿನಿಂದ ಅಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಸುಷ್ಮಾ ಸ್
ರಾಜ್ ಅವರು ಗುಣಮುಖರಾಗಲು ಕಾಲಾವಕಾಶ ಬೇಕಾಗಿದೆ. ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ದಾನಿಗಳು ಸಿಕ್ಕು, ಅವರಿಗೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆದ ಬಳಿಕ ಅವರು ಹಲವಾರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ.

Narendra Modi may replace Sushma Swaraj during Winter Session

ಕೆಲವು ಸಚಿವರ ಖಾತೆಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬದಲಾವಣೆಯಾಗುವ ಸಂಭವವಿದೆ.

ಇದಕ್ಕಾಗಿ ಮೋದಿ ತಮ್ಮ ಸಚಿವ ಸಂಪುಟದಲ್ಲಿರುವ ಕೆಲವೇ ಕೆಲವು ಸಮರ್ಥ ಸಚಿವರಲ್ಲಿ ಒಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡುವ ಸಂಭವವಿದೆ. ಇದರಿಂದಾಗಿ ಕೆಲವು ಸಚಿವರ ಖಾತೆಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬದಲಾವಣೆಯಾಗುವ ಸಂಭವವಿದೆ.

ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿದ್ದ ಸುಷ್ಮಾ ವಿದೇಶಗಳಲ್ಲಿ ತೊಂದರೆಯಲ್ಲಿ ಸಿಲುಕಿದ್ದ ಹಲವು ಭಾರತೀಯರಿಗೆ ಆಪತ್ಭಾಂಧವರಾಗಿ ಅಪಾರ ಜನಾನುರಾಗಿ ಮನ್ನಣೆ ಗಳಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi will appoint a full-time foreign minister to replace an ailing Sushma Swaraj, who was admitted to hospital last month after kidney failure.
Please Wait while comments are loading...