ಒಲಂಪಿಕ್ ಬಗ್ಗೆ ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಮೋದಿ

ನವದೆಹಲಿ, ಜೂನ್ 27; "ಒಲಂಪಿಕ್‌ನಲ್ಲಿ ವೈಯಕ್ತಿಕವಾಗಿ ಚಿನ್ನದ ಪದಕ ಗೆದ್ದ ಭಾರತೀಯ ಯಾರು?" ಎಂಬ ಪ್ರಶ್ನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಆರಂಭಿಸಿದರು. ಈ ಪ್ರಶ್ನೆಗೆ ಎಲ್ಲರೂ ಉತ್ತರ ಕಳಿಸಿ ಎಂದು ಮನವಿ ಮಾಡಿದರು.

ಭಾನುವಾರ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 78ನೇ ಸಂಚಿಕೆ ಇದಾಗಿದೆ.

ಒಲಂಪಿಲ್ ತಯಾರಿ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಮಿಲ್ಕಾ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದರು. 2014ರಲ್ಲಿ ಅವರು ಸೂರತ್‌ಗೆ ಬಂದಿದ್ದರು. ರಾತ್ರಿಯ ಮ್ಯಾರಾಥಾನ್‌ಗೆ ಒಟ್ಟಿಗೆ ಚಾಲನೆ ನೀಡಿದ್ದೆವು ಎಂದು ಮೋದಿ ನೆನಪಿಸಿಕೊಂಡರು.

Narendra Modi Mann Ki Baat June 27 Highlights in Kannada

ನಮ್ಮ ದೇಶದಲ್ಲಿ ಚಿಕ್ಕ-ಚಿಕ್ಕ ಪಟ್ಟಣದಿಂದ, ಗ್ರಾಮಗಳಿಂದ ಕ್ರೀಡಾಪಡುಗಳು ಟೋಕಿಯೋ ಒಲಂಪಿಕ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮೋದಿ ಬಣ್ಣಿಸಿದರು. ಮಹಿಳಾ ಹಾಕಿ ತಂಡದ ಸದಸ್ಯೆ ನೇಹಾ ಘೋಯೆಲ್ ಬಗ್ಗೆ ಮಾತನಾಡಿದರು. ನೇಹಾ ತಾಯಿ, ಸಹೋದರಿ ಸೈಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದಾರೆ ಎಂದರು.

ಟೋಕಿಯೋ ಒಲಂಪಿಕ್‌ನಲ್ಲಿ ಪಾಲ್ಗೊಳ್ಳುವ ನಮ್ಮ ಕ್ರೀಡಾಪಟುಗಳು ಬಾಲ್ಯದಿಂದಲೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದವರು. ನಾವು ಎಷ್ಟು ಎತ್ತರಕ್ಕೆ ಏರಿದರೂ ಹಿಂದಿನ ದಿನಗಳನ್ನು ಮರೆಯಬಾರದು ಎಂದು ಮೋದಿ ಕರೆ ನೀಡಿದರು.

ನಾವೆಲ್ಲರೂ ಎಲ್ಲಾ ಟ್ವಿಟರ್‌ನಲ್ಲಿ 'ಚೀರ್ ಫಾರ್ ಇಂಡಿಯಾ' ಹ್ಯಾಷ್ ಟ್ಯಾಗ್ ಮೂಲಕ ಟೋಕಿಯೋ ಒಲಂಪಿಕ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟರು.

ಕೋವಿಡ್ ವಿರುದ್ಧ ನಮ್ಮ ದೇಶದ ಹೋರಾಟ ಜಾರಿಯಲ್ಲಿದೆ. ಕೋವಿಡ್ ಲಸಿಕೆ ಮಹಾಭಿಯಾನ ಯಶಸ್ವಿಯಾಗಿದೆ. ನವ ಭಾರತದ ಶಕ್ತಿ ನೋಡಿ. ಭಾರತದಲ್ಲಿ ತಯಾರಾದ ಲಸಿಕೆ ಈಗಾಗಲೇ ಜನರಿಗೆ ಮುಕ್ತವಾಗಿ ಸಿಗುತ್ತಿದೆ ಎಂದು ಮೋದಿ ಹೇಳಿದರು.

ಮಧ್ಯಪ್ರದೇಶದ ಡುಲಾರಿಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಜೊತೆ ಮಾತನಾಡಿದರು. "ಗ್ರಾಮದಲ್ಲಿ 332 ಪುರುಷರು ಇದ್ದಾರೆ. ಇಲ್ಲಿ ವಾಟ್ಸಪ್‌ನಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಗ್ರಾಮದಲ್ಲಿ ಇದು ಭಯವನ್ನು ಉಂಟು ಮಾಡಿದೆ" ಎಂದು.

"ವ್ಯಾಕ್ಸಿನ್ ಬಗ್ಗೆ ಯಾವುದೇ ಭಯ ಬೇಡ. ನಾನು, ನನ್ನ ತಾಯಿ ಸಹ ಲಸಿಕೆ ಪಡೆದಿದ್ದಾರೆ. ನೀವು ಲಸಿಕೆ ಪಡೆಯದಿದ್ದರೆ ನಿಮ್ಮ ಮತ್ತು ಅಕ್ಕಪಕ್ಕದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ತಕ್ಷಣ ಲಸಿಕೆ ಪಡೆಯಿರಿ" ಎಂದು ಮೋದಿ ಕರೆ ನೀಡಿದರು.

"ಕೋವಿಡ್ ವೈರಸ್ ರೂಪಾಂತರಗೊಳ್ಳುತ್ತಿದೆ. ಲಸಿಕೆ ಪಡೆಯುವುದರಿಂದ ಗಂಭೀರ ಪರಿಣಾಮದಿಂದ ಪಾರಾಗಬಹುದು. ನಾವು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಜೊತೆಗೆ ಲಸಿಕೆ ಪಡೆಯಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

"ನಮ್ಮ ವಿಜ್ಞಾನಿಗಳು ಹಗಲು-ರಾತ್ರಿ ಕಷ್ಟಪಟ್ಟು ಲಸಿಕೆ ಕಂಡುಹಿಡಿದಿದ್ದಾರೆ. ಲಸಿಕೆ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಜನರಿಗೆ ಸಹ ನಾವು ಮಾಹಿತಿ ನೀಡಬೇಕು. ಎಲ್ಲರೂ ಲಸಿಕೆ ಪಡೆಯುವಂತೆ ಮಾಡಬೇಕು" ಎಂದು ಮೋದಿ ಕರೆ ಕೊಟ್ಟರು.

ಕೋವಿಡ್ ಸಂದರ್ಭದಲ್ಲಿ ಗ್ರಾಮಗಳ ಕೆಲಸ ಒಳ್ಳೆಯ ಸಂಶೋಧನೆಯ ವಿಷಯವಾಗಿದೆ. ಕೋವಿಡ್ ಕೇರ್ ಸೆಂಟರ್ ಮಾಡಿದ್ದು, ತರಕಾರಿ, ಹಾಲು ಮಾರಾಟ ಮಾಡಿದ್ದು ಎಲ್ಲರಿಗೂ ಅಧ್ಯಯನ ವಿಷಯವಾಗಿದೆ ಎಂದು ಮೋದಿ ಹೇಳಿದರು.

ದೇಶದಲ್ಲಿ ನೈಋತ್ಯ ಮುಂಗಾರು ಮಾರುತಗಳು ಆರಂಭವಾಗಿದೆ. ಮಳೆ ನೀರು ಜಮೀನನ್ನು ಸುಧಾರಣೆ ಮಾಡುತ್ತದೆ. ನೀರಿನ ಸಂರಕ್ಷಣೆಯನ್ನು ನಾವು ದೇಶ ಸೇವೆ ಎಂದು ಪರಿಗಣಿಸುತ್ತೇವೆ.

ಉತ್ತರಾಖಂಡ್‌ನ ಶಿಕ್ಷಕರ ಮಳೆ ನೀರು ಇಂಗಿಸುವಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿವರಣೆ ನೀಡಿದರು. 30 ಸಾವಿರಕ್ಕೂ ಅಧಿಕ ಇಂಗುಗುಂಡಿಗಳನ್ನು ಶಿಕ್ಷಕರು ನಿರ್ಮಿಸಿದ್ದಾರೆ. ಈಗಲೂ ನಿರ್ಮಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ನೀರಿನ ಕೊರತೆ ದೂರವಾಗಿದೆ.

ಭೂಮಿಯಲ್ಲಿರುವ ಪ್ರತಿ ಸಸ್ಯಗಳಲ್ಲೂ ಔಷಧೀಯ ಗುಣ ಇರುತ್ತದೆ. ನೀವು ನಿಮ್ಮ ಅಕ್ಕಪಕ್ಕದ ಔಷಧಿ ಸಸ್ಯಗಳ ಬಗ್ಗೆ ತಿಳಿಯಿರಿ ಮತ್ತು ಅದನ್ನು ಬೇರೆಯವರಿಗೂ ತಿಳಿಸಿ ಎಂದು ಪ್ರಧಾನಿ ಮೋದಿ ಹೇಳಿದರು.

ಜುಲೈ 1ರಂದು ನಾವು ವೈದ್ಯರ ದಿಚಾರಣೆ ಆಚರಣೆ ಮಾಡಲಾಗುತ್ತದೆ. ಕೋವಿಡ್ ಕಾಲದಲ್ಲಿ ವೈದ್ಯರ ಕೆಲಸ ಎಲ್ಲರಿಗೂ ತಿಳಿದಿದೆ. ಜನರ ಜೀವ ಉಳಿಸಲು ವೈದ್ಯರು ನಮ್ಮ ಸೇವೆ ಮಾಡುತ್ತಿದ್ದಾರೆ. ನಾವು ಅಂದು ವೈದ್ಯರಿಗೆ ಧನ್ಯವಾದ ಸಲ್ಲಿಸೋಣ ಎಂದು ಮನವಿ ಮಾಡಿದರು.

ಶ್ರೀನಗರದಲ್ಲಿ ಬೋಟ್ ಅಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದೆ. ಬೋಟ್ ಓನರ್ ಇದನ್ನು ಆರಂಭಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಂತಹ ಪ್ರಯತ್ನಗಳು ನಮಗೆ ಸ್ಪೂರ್ತಿಯಾಗಿವೆ ಎಂದು ಮೋದಿ ಹೇಳಿದರು.

ಜುಲೈ 1ರಂದು ನಾವು ವೈದ್ಯರ ದಿಚಾರಣೆ ಆಚರಣೆ ಮಾಡಲಾಗುತ್ತದೆ. ಕೋವಿಡ್ ಕಾಲದಲ್ಲಿ ವೈದ್ಯರ ಕೆಲಸ ಎಲ್ಲರಿಗೂ ತಿಳಿದಿದೆ. ಜನರ ಜೀವ ಉಳಿಸಲು ವೈದ್ಯರು ನಮ್ಮ ಸೇವೆ ಮಾಡುತ್ತಿದ್ದಾರೆ. ನಾವು ಅಂದು ವೈದ್ಯರಿಗೆ ಧನ್ಯವಾದ ಸಲ್ಲಿಸೋಣ ಎಂದು ಮನವಿ ಮಾಡಿದರು.

ಶ್ರೀನಗರದಲ್ಲಿ ಬೋಟ್ ಅಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದೆ. ಬೋಟ್ ಓನರ್ ಇದನ್ನು ಆರಂಭಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಂತಹ ಪ್ರಯತ್ನಗಳು ನಮಗೆ ಸ್ಪೂರ್ತಿಯಾಗಿವೆ ಎಂದು ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+