ಕಾಂಗ್ರೆಸ್ ಪಕ್ಷವನ್ನು 'ಬೇಲ್' ಗಾಡಿ ಎಂದು ಕಿಚಾಯಿಸಿದ ನರೇಂದ್ರ ಮೋದಿ

ಜೈಪುರ, ಜುಲೈ 07: ಕಾಂಗ್ರೆಸ್ ಪಕ್ಷವನ್ನು 'ಬೇಲ್‌ ಗಾಡಿ' (ಎತ್ತಿನ ಬಂಡಿಯ ಹಿಂದಿ ಹೆಸರು) ಎನ್ನಬಹುದು ಏಕೆಂದರೆ ಅದರ ಬಹುತೇಕ ನಾಯಕರು, ಮಾಜಿ ಮಂತ್ರಿಗಳು ಈಗ ಬೇಲ್‌ ಮೇಲೆ ಹೊರಗಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್‌ ಅನ್ನು ಟೀಕಿಸಿದರು.

ರಾಜಸ್ಥಾನದ ಜೈಪುರದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಐಕರಾದ ಶಶಿ ತರೂರ್, ಚಿದಂಬರಂ ಇನ್ನೂ ಕೆಲವರು ಜಾಮೀನಿನ ಮೇಲೆ ಹೊರಗಿರುವುದನ್ನು ಟೀಕಿಸುವ ಜೊತೆಗೆ ಕಾಂಗ್ರೆಸ್‌ ಮೇಲೆ ಮಾತಿನ ದಾಳಿ ನಡೆಸಿದರು.

ಜನರಿಗೆ ಕಾಂಗ್ರೆಸ್ ಪಕ್ಷದ ಒಳ ಪಿತೂರಿಗಳ ಬಗ್ಗೆ ಅರಿವಾಗಿದೆ ಎಂದ ಪ್ರಧಾನಿ ಅವರು, ಸರ್ಜಿಕಲ್ ಸ್ಟ್ರೈಕ್ ಮಾಡಿದ ನಮ್ಮ ದೇಶದ ಸೈನಿಕರ ಪರಾಕ್ರಮತೆಯನ್ನು, ನಿಷ್ಠೆಯನ್ನೇ ಅವರು ಅನುಮಾನದಿಂದ ನೋಡಿದರು, ಆ ಮೂಲಕ ಅವರು ಪಾಪ ಮಾಡಿದ್ದಾರೆ ಎಂದು ಕಾಂಗ್ರೆಸ್‌ನ ದೇಶಪ್ರೇಮದ ಬಗ್ಗೆಯೇ ಪ್ರಶ್ನೆ ಎತ್ತಿದರು.

Narendra Modi lambasted on Congress in Rajasthan rally

ಕೆಲವರು ನಮ್ಮ ಎಲ್ಲ ಕಾರ್ಯಕ್ಕೂ ತೊಡರುಗಾಲು ಹಾಕಲು ನೋಡುತ್ತಾರೆ, ನಮನ್ನು ಪದೇ ಪದೇ ಟೀಕಿಸುವ ಪ್ರಯತ್ನ ಮಾಡುತ್ತಾರೆ ಆದರೆ ಬಿಜೆಪಿ ವಿಶ್ವಾಸವಿಟ್ಟಿರುವುದು ಕೇವಲ ವಿಕಾಸ ಮತ್ತು ವಿಕಾಸವಷ್ಟೆ ಎಂದು ಮೋದಿ ಹೇಳಿದರು.

ಮೋದಿ ಅವರು ಇಂದು ಜೈಪುರದಲ್ಲಿ 2100 ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ರಾಜಸ್ಥಾನದ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ಇದ್ದು ಅದೇ ಸಮಯಕ್ಕೆ ಲೋಕಸಭೆ ಚುನಾವಣೆ ಸಹ ನಡೆಯುವ ಸೂಚನೆ ಇರುವ ಕಾರಣ ಈ ಸಮಾವೇಶವನ್ನು ಬಿಜೆಪಿಯ ಚುನಾವಣಾ ಪ್ರಚಾರದ ಪ್ರಾರಂಭವೆಂದೇ ಕರೆಯಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+