ಪಿಎಸ್ಎಲ್ವಿ ಸಿ 23 ಯಶಸ್ವಿ ಉಡಾವಣೆ, ಮೋದಿ ಹರ್ಷ
ಹೈದರಾಬಾದ್, ಜೂ,30: ವಿವಿಧ 4 ರಾಷ್ಟ್ರಗಳ ಐದು ಉಪಗ್ರಹಗಳನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ನಿರ್ಮಿತ ಪಿಎಸ್‌ಎಲ್‌ವಿ ಸಿ23 ಉಪಗ್ರಹ ವಾಹಕವನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಜತೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮೋದಿ, ಹಾಲಿವುಡ್ ಸಿನಿಮಾ 'ಗ್ರಾವಿಟಿ' ನಿರ್ಮಿಸಲು ಆಗಿರುವ ಖರ್ಚು ವೆಚ್ಚಕ್ಕಿಂತ ನಮ್ಮ ಮಂಗಳಯಾನ ಯೋಜನೆ ಕಡಿಮೆ ವೆಚ್ಚ ಎಂದು ತಿಳಿದು ಬಂದಿದೆ. ಇದು ದೊಡ್ಡ ಸಾಧನೆ ಎಂದಿದ್ದಾರೆ.
ಸೋಮವಾರ(ಜೂ.30)ಬೆಳಗ್ಗೆ ಸರಿಯಾಗಿ 9.52ಕ್ಕೆ ಪಿಎಸ್‌ಎಲ್‌ವಿ ಉಪಗ್ರಹ ವಾಹಕವನ್ನು ಉಡಾವಣೆ ಮಾಡಲಾಗಿದೆ. ಒಟ್ಟು ನಾಲ್ಕು ರಾಷ್ಟ್ರಗಳ 714 ಕೆಜಿ ತೂಕದ ಐದು ಉಪಗ್ರಹಗಳನ್ನು ಹೊತ್ತು ಸಾಗಿರುವ ಪಿಎಸ್‌ಎಲ್‌ವಿ ಸಿ3 ರಾಕೆಟ್ ನಿಗದಿತ ಪಥದಲ್ಲಿ ಸಾಗಿದೆ. ಆಕಾಶಕ್ಕೆ ಹಾರಿದ 20 ನಿಮಿಷಗಳಲ್ಲೇ ಪಿಎಸ್‌ಎಲ್‌ವಿ ವಾಹಕದಲ್ಲಿರುವ ಉಪಗ್ರಹಗಳು ಒಂದಾದ ಮೇಲೊಂದರಂತೆ ಕಳಚಿಕೊಂಡು ತಮ್ಮ ನಿಗದಿತ ಕಕ್ಷೆ ಸೇರಲಿವೆ.

ಪಿಎಸ್‌ಎಲ್‌ವಿ ವಾಹಕ ಹೊತ್ತೊಯ್ದ ಉಪಗ್ರಹಗಳು
ಫ್ರಾನ್ಸ್ (ಭೂ ಪರಿವೀಕ್ಷಣೆ ಮಾಡಲಿರುವ 'ಸ್ಪಾಟ್ 7' ಉಪಗ್ರಹ), ಜರ್ಮನಿ (14 ಕೆಜಿ ತೂಕದ 'ಐಸ್ಯಾಟ್'), ಕೆನಡಾ (ತಲಾ 15 ಕೆಜಿ ತೂಕದ 'ಕಾಂಗ್ಸ್ 4' ಮತ್ತು 'ಕಾಂಗ್ಸ್ 5') ಮತ್ತು ಸಿಂಗಾಪುರದ (7 ಕೆಜಿ ತೂಕದ 'ವೆಲಾಕ್ಸ್ 1')ಉಪಗ್ರಹಗಳನ್ನು ವಿಎಸ್‌ಎಲ್‌ವಿ ಹೊತ್ತು ಸಾಗಿದೆ. ಇದಕ್ಕೂ ಮೊದಲು ಉಡಾವಣೆ ಸಮಯವನ್ನು ಇಂದು ಬೆಳಗ್ಗೆ 9.49ಕ್ಕೆ ನಿಗದಿ ಪಡಿಸಲಾಗಿತ್ತು.

ಬಾಹ್ಯಾಕಾಶ ತ್ಯಾಜಗಳ ಘರ್ಷಣೆ ಭೀತಿ
ಬಾಹ್ಯಾಕಾಶ ತ್ಯಾಜಗಳ ಘರ್ಷಣೆ ಸಂಭವಿಸುವ ಸಾಧ್ಯತೆ ಇರುವುದರಿಂದ, ಉಡಾವಣಾ ಸಮಯವನ್ನು 3 ನಿಮಿಷ ಮುಂದೂಡಲಾಗಿತ್ತು. ಪಿಎಸ್‌ಎಲ್‌ವಿ ಉಪಗ್ರಹ ಉಡಾವಣೆಯನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದೇ ಆಂಧ್ರ ಪ್ರದೇಶಕ್ಕೆ ಬಂದಿಳಿದಿದ್ದರು. ದೇಶದ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.

ಬಾಹ್ಯಾಕಾಶ ಯೋಜನೆಗೆ ಸರ್ಕಾರ ಸಿದ್ಧ
ಹೊಸ ಹೊಸ ಬಾಹ್ಯಾಕಾಶ ಯೋಜನೆಗೆ ಅಗತ್ಯ ಸೌಲಭ್ಯ, ಅನುದಾನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ.
ಚಿತ್ರಕೃಪೆ: ಇಸ್ರೋ ಫೇಸ್ ಬುಕ್ ಪುಟ
| Array |
ಉಪಗ್ರಹ ವಾಹಕ ಉಡಾವಣೆಗೆ ಆಗಮಿಸಿದ ಮೋದಿ
ಉಪಗ್ರಹ ವಾಹಕ ಉಡಾವಣೆ ವೀಕ್ಷಣೆಗೆ ಆಗಮಿಸಿದ ಮೋದಿ ಅವರು ಟ್ವೀಟ್ ಮಾಡಿದ್ದು ಹೀಗೆ

ವಿಜ್ಞಾನಿಗಳ ಜತೆ ಮೋದಿ ಸಮಾಲೋಚನೆ
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ದೇಶದ ಅತ್ಯುನ್ನತ ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ.

ಉಡಾವಣೆ ಕಾಮೆಂಟರಿ ನೀಡಿದ ಮಹಿಳಾ ವಿಜ್ಞಾನಿ
ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ಮಹಿಳಾ ವಿಜ್ಞಾನಿಯೊಬ್ಬರು ಉಡಾವಣೆ ಕಾಮೆಂಟರಿ ಕೌಂಟ್ ಡೌನ್ ನೀಡಿದ್ದು ವಿಶೇಷವಾಗಿತ್ತು. ಲಲಿತಾಂಬಿಕ ಅವರು ಈ ಗೌರವಕ್ಕೆ ಪಾತ್ರವಾದ ಮೊದಲ ಮಹಿಳಾ ವಿಜ್ಞಾನಿ.
ಚಿತ್ರದಲ್ಲಿ: ಶ್ರೀಹರಿಕೋಟಾ ಕೇಂದ್ರಕ್ಕೆ ಆಗಮಿಸುವುದಕ್ಕೂ ಮುನ್ನ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಸಿಕ್ಕ ಸ್ವಾಗತ
ನಮ್ಮ ಬಾಹ್ಯಾಕಾಶ ಶಕ್ತಿಗೆ ವಿಶ್ವದ ಮನ್ನಣೆ
ಇವತ್ತು ನಾವು ಉಡಾವಣೆ ಮಾಡಿ ಉಪಗ್ರಹಗಳು ಮುಂದುವರಿದ ದೇಶಗಳದ್ದು ಎಂಬುದು ಗಮನಾರ್ಹ. ನಮ್ಮ ಬಾಹ್ಯಾಕಾಶ ಶಕ್ತಿ ಬಗ್ಗೆ ಅಂತಾರಾಷ್ಟ್ರೀಯ ಮಾನ್ಯತೆ ಇರುವುದು ಸಾಬೀತಾಗಿದೆ ಎಂದ ಪ್ರಧಾನಿ ಮೋದಿ.
ಚಿತ್ರದಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್

ವಿವಿಧ ಪೀಳಿಗೆಯ ವಿಜ್ಞಾನಿಗಳನ್ನು ಕಂಡು ಹರ್ಷ
ವಿವಿಧ ಪೀಳಿಗೆಯ ವಿಜ್ಞಾನಿಗಳನ್ನು ಕಂಡು ಹರ್ಷವ್ಯಕ್ತಪಡಿಸಿದ ಮೋದಿ ಅವರು ಭವ್ಯ ಭಾರತದ ಭವಿತವ್ಯಕ್ಕೆ ಇಸ್ರೋ ಸಂಸ್ಥೆ ಮಾದರಿ. ನಮ್ಮ ಬಾಹ್ಯಾಕೋಶ ಯೋಜನೆ ಸ್ವನಿರ್ಮಿತವಾದುದೆಂದು ಹೇಳಲು ಹೆಮ್ಮೆ ಎನಿಸುತ್ತದೆ. ವಿವಿಧ ತಲೆಮಾರಿನ ವಿಜ್ಞಾನಿಗಳು ಅವಿರತ ಶ್ರಮ ಹಾಕಿ ಭಾರತದ ಶಕ್ತಿಯನ್ನ ಹೆಚ್ಚಿಸಿದ್ದಾರೆ ಎಂದರು.

ಶೂನ್ಯದ ಮಹತ್ವ ತಿಳಿಸಿದ ನಮ್ಮ ಪೂರ್ವಜರು
ನಮ್ಮ ಪೂರ್ವಜರು ಆಗಲೇ ವೈಮಾನಿಕ ಪ್ರಯಾಣ ಮತ್ತು ಶೂನ್ಯ ತತ್ವಗಳಲ್ಲಿ ಸಿದ್ಧಿಸಿದ್ದರು.ಸಣ್ಣದಾಗಿ ಪ್ರಾರಂಭಗೊಂಡ ನಮ್ಮ ಬಾಹ್ಯಾಕಾಶದ ಪ್ರಯಾಣ ಸಾಕಷ್ಟು ದೂರ ಸವೆಸಿದ್ದೇವೆ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಂಡರು.

ಭಾರತದಲ್ಲಿ ತಂತ್ರಜ್ಞಾನದ ಮಹತ್ವ
ಭಾರತವನ್ನ ಡಿಜಿಟಲ್ ಇಂಡಿಯಾ ಮಾಡಲು ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ಈ ಡಿಜಿಟಲ್ ಭಾರತದಲ್ಲಿ 125 ಕೋಟಿ ಜನರು ಪರಸ್ಪರ ಕನೆಕ್ಟ್ ಆಗುವ ಅಪೂರ್ವ ಶಕ್ತಿ ಪ್ರಾಪ್ತವಾಗಲಿದೆ.

ಸಾರ್ಕ್ ಉಪಗ್ರಹವನ್ನ ರೂಪಿಸಲು ಸೂಚನೆ
ಸಾರ್ಕ್ ಉಪಗ್ರಹವನ್ನ ರೂಪಿಸಲು ವಿಜ್ಞಾನಿಗಳನ್ನ ಕೇಳಿಕೊಂಡಿದ್ದೇನೆ. ಇಂಥ ಉಪಗ್ರಹದಿಂದ ಎಲ್ಲಾ ಸಾರ್ಕ್ ರಾಷ್ಟ್ರಗಳಿಗೂ ಉಪಯೋಗವಾಗಲಿದೆ ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಇಸ್ರೋ ಸಾಧನೆಯ ಹಿನ್ನೋಟ
19 ದೇಶಗಳ ಸುಮಾರು 35 ಉಪಗ್ರಹಗಳನ್ನು ಇಸ್ರೋ ತನ್ನ ರಾಕೆಟ್ ಗಳ ಮೂಲಕ ನಭಕ್ಕೆ ಹಾರಿಸಿದೆ. ಅಲ್ಜೀರಿಯಾ, ಅರ್ಜೆಂಟಿನಾ, ಆಸ್ಟ್ರೀಯಾ, ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ಇಸ್ರೇಲ್, ಇಟಲಿ, ಜಪಾನ್, ಕೊರಿಯಾ, ಲಕ್ಸಂಬರ್ಗ್, ಸಿಂಗಪುರ, ಸ್ವಿಟ್ಜರ್ಲೆಂಡ್, ನೆದರ್ಲೆಂಡ್, ಟರ್ಕಿ ಹಾಗೂ ಯುನೈಟೆಡ್ ಕಿಂಗ್ ಡಮ್
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications