ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಗೆ ಅಮೆರಿಕದಲ್ಲಿ ಅದ್ದೂರಿ ಸ್ವಾಗತ

|
Google Oneindia Kannada News

ನ್ಯೂಯಾರ್ಕ್‌, ಸೆ. 27 : ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಶುಕ್ರವಾರ ಕಾಲಿಟ್ಟಿದ್ದಾರೆ. ಅಮೆರಿಕಕ್ಕೆ ಪ್ರವೇಶ ಪಡೆದ ತಕ್ಷಣ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆತಿದೆ. ಭಾರತೀಯ ರಾಯಭಾರಿಗಳು ಮತ್ತು ಜನರ ಪ್ರೀತಿಗೆ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ.(ಚಿತ್ರ: ಯುಎಸ್ ನಲ್ಲಿ ಮೋದಿ ಅವರ ಆ ದಿನಗಳು)

ಐದು ದಿನಗಳ ಕಾಲ ಸುಮಾರು 50 ಕಾರ್ಯಕ್ರಮಗಳ ಪಟ್ಟಿ ಸಿದ್ಧಮಾಡಿಕೊಂಡು ಅಮೆರಿಕಕ್ಕೆ ತೆರಳಿರುವ ಮೋದಿ ವೈಟ್‌ ಹೌಸ್‌ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೇ 9/11 ರ ದಾಳಿ ಜಾಗಕ್ಕೆ ಭೇಟಿ ನೀಡಲಿದ್ದಾರೆ.

ಶುಕ್ರವಾರ ಮೋದಿ ನ್ಯೂಯಾರ್ಕ್‌ ಮೇಯರ್‌ ಬಿಲ್‌ ಡಿ ಬ್ಲಾಸಿಯೋ ಮತ್ತು ನೊಬೆಲ್‌ ಪ್ರಶಸ್ತಿ ಪುರಸ್ಕೃತ, ಕ್ಯಾನ್ಸರ್‌ ಚಿಕಿತ್ಸಾ ತಜ್ಞ ಪ್ರೊಫೆಸರ್‌ ಹೆರಾಲ್ಡ್‌ ವ್ಯಾರ್‌ಮಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.(ಪ್ರಧಾನಿ ಮೋದಿ ಅಮೆರಿಕ ಪ್ರವಾಸ ವೇಳಾಪಟ್ಟಿ)

ನ್ಯೂಯಾರ್ಕ್‌ ಮೇಯರ್‌ ಭೇಟಿ

ಶುಕ್ರವಾರ ಮೋದಿ ನ್ಯೂಯಾರ್ಕ್‌ ಮೇಯರ್‌ ಬಿಲ್‌ ಡಿ ಬ್ಲಾಸಿಯೋ ಅವರನ್ನು ಭೇಟಿಯಾದರು

ನೊಬೆಲ್‌ ಪುರಸ್ಕೃತರ ಭೇಟಿ

ನೊಬೆಲ್‌ ಪ್ರಶಸ್ತಿ ಪುರಸ್ಕೃತ, ಕ್ಯಾನ್ಸರ್‌ ಚಿಕಿತ್ಸಾ ತಜ್ಞ ಪ್ರೊಫೆಸರ್‌ ಹೆರಾಲ್ಡ್‌ ವ್ಯಾರ್‌ಮಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ನರೆಂದ್ರ ಮೋದಿಗೆ ಅದ್ದೂರಿ ಸ್ವಾಗತ

ನ್ಯೂಯಾರ್ಕ್‌ಗೆ ಬಂದಿಳಿದ ನರೇಂದ್ರ ಮೋದಿಗೆ ದೊರೆತ ಅದ್ದೂರಿ ಸ್ವಾಗತ.

ಮೋದಿಗೆ ಅದ್ದೂರಿ ಸ್ವಾಗತ

ನ್ಯೂಯಾರ್ಕ್‌ ವಿಮಾನ ನಿಲ್ದಾಣಕ್ಕೆ ಬಂದ ಮೋದಿಯನ್ನು ಬರಮಾಡಿಕೊಂಡ ರಾಯಭಾರಿಗಳು.

English summary
Prime Minister Narendra Modi on Friday night (IST) reached the US for his 5-day trip to the country. Ahead of his visit, Modi termed America, India's "natural global partner" and held out an assurance that India is "open and friendly" for business and innovations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X