ಲಾಲು ಪ್ರಸಾದ್ ಯಾದವ್ ಅವರ VIP ಸವಲತ್ತಿಗೆ ಕತ್ತರಿ!
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಗೆ ನೀಡಿದ್ದ ಸವಲತ್ತಿಗೆ ಕೇಂದ್ರ ಸರ್ಕಾರ ತಡೆ. ಪಾಟ್ನಾ ವಿಮಾನ ನಿಲ್ದಾಣದಲ್ಲಿ ರನ್ ವೇ ವರೆಗೆ ನೇರವಾಗಿ ತಮ್ಮ ವಾಹನದಲ್ಲಿ ಸಾಗಬಹುದಾಗಿದ್ದ ಲಾಲು ಹಾಗೂ ಅವರ ಪತ್ನಿ ರಾಬ್ಡಿ.
ನವದೆಹಲಿ, ಜುಲೈ 22: ರಾಷ್ಟ್ರೀಯ ಜನತಾ ದಳದ (ಆರ್ ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ವಿಶೇಷ ವಿಐಪಿ ಸವಲತ್ತೊಂದನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸಿದೆ.
ಪಾಟ್ನಾದಿಂದ ದೆಹಲಿ ಮತ್ತಿತರ ಕಡೆಗೆ ವಿಮಾನ ಪ್ರಯಾಣ ಬೆಳೆಸುವಾಗ ಪಾಟ್ನಾದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆಯಿಲ್ಲದೆ ಲಾಲು ಹಾಗೂ ಅವರ ಪತ್ನಿ ರಾಬ್ಡಿ ದೇವಿ ಪ್ರವೇಶಿಸಬಹುದಾಗಿತ್ತು. ಈ ಸೌಲಭ್ಯದಿಂದಾಗಿ, ಈ ಇಬ್ಬರೂ ತಮ್ಮ ವಾಹನಗಳಲ್ಲಿ ನೇರವಾಗಿ ರನ್ ವೇವರೆಗೆ ಸಾಗಿ ಅಲ್ಲಿಂದಲೇ ವಿಮಾನ ಹತ್ತಿಕೊಂಡು ಹೋಗಬಹುದಾಗಿತ್ತು.

ಈ ಇಬ್ಬರೂ ವಿವಿಧ ಕಾಲಘಟ್ಟಗಳಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಈ ಸವಲತ್ತನ್ನು ಪಡೆದಿದ್ದರು. ಈವರೆಗೂ ಅದು ಹಾಗೆಯೇ ಮುಂದುವರಿದಿತ್ತು. ಇದೀಗ, ಆ ಇಬ್ಬರಿಗೂ ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲವಾದ್ದರಿಂದ ಅವರಿಗೆ ನೀಡಲಾಗಿರುವ ಸವಲತ್ತನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಲಾಲು ಹಾಗೂ ಅವರ ಕುಟುಂಬದ ಮೇಲೆ ಹಲವಾರು ಭ್ರಷ್ಟಾಚಾರಗಳ ಆರೋಪ ಕೇಳಿಬಂದಿದ್ದು, ಲಾಲು, ಅವರ ಪತ್ನಿ ರಾಬ್ಡಿ ದೇವಿ, ಪುತ್ರಿ ಮಿಸಾ ಭಾರತಿ ಅವರು ತನಿಖೆಗೆ ಒಳಪಟ್ಟಿರುವ ಬೆನ್ನಲ್ಲೇ ಈ ಸೌಲಭ್ಯಗಳನ್ನು ಹಿಂಪಡೆದಿರುವುದು ಲಾಲು ಅವರಿಗೆ ಮುಜುಗರ ತಂದಿದೆ ಎಂದು ಹೇಳಲಾಗಿದೆ.
Big set back for @RJDforIndia chief #Lalu & #Rabri no more access in #PatnaAirport Tarmac, #BCAS issued notification. Details is here 👇 pic.twitter.com/bEkhCEJ47v
— Ashoke Raj (@ashokeraj007) July 22, 2017












Click it and Unblock the Notifications