ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಂದರ್ಶನದಲ್ಲಿ ರಾಜನ್‌ರನ್ನು ಶ್ಲಾಘಿಸಿದ ಮೋದಿ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜೂನ್ 27 : 'ರಘುರಾಮ್ ರಾಜನ್ ಅವರ ಬಗ್ಗೆ ನೀಡಿರುವ ಹೇಳಿಕೆಗಳು ಅನುಚಿತ. ಇಂತಹ ಬೆಳವಣಿಗೆ ನನ್ನ ಅಥವ ಬೇರೆ ಪಕ್ಷದಲ್ಲೂ ಸರಿಯಲ್ಲ. ರಾಜನ್ ಅವರು ಮಾಡಿರುವ ಕೆಲಸವನ್ನು ಮೆಚ್ಚುತ್ತೇನೆ. ಅವರು ದೇಶಭಕ್ತ, ಭಾರತವನ್ನು ಪ್ರೀತಿಸುತ್ತಾರೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಸೋಮವಾರ ಸಂಜೆ ಟೈಮ್ಸ್ ನೌಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಸಂದರ್ಶನ ನೀಡಿದರು. ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ನರೇಂದ್ರ ಮೋದಿ ಅವರನ್ನು ಸಂದರ್ಶಿಸಿದರು. ವಿದೇಶಾಂಗ ನೀತಿ, ಸಂಸತ್ ಕಲಾಪ, ಕಪ್ಪುಹಣ ಮುಂತಾದ ವಿಚಾರಗಳ ಬಗ್ಗೆ ಮೋದಿ ಮಾತನಾಡಿದರು. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]

narendra modi

ಆರ್‌ಬಿಐ ಗೌರ್ವನರ್‌ ರಘುರಾಮ್ ರಾಜನ್ ಸುತ್ತಲಿನ ವಿವಾದಗಳ ಬಗ್ಗೆ ಮಾತನಾಡಿದ ಮೋದಿ, 'ನಾವು ಅಧಿಕಾರಕ್ಕೆ ಬಂದಾಗ ಹೊಸ ಸರ್ಕಾರ ರಾಘರಾಮ್ ರಾಜನ್ ಇರಲು ಬಿಡುತ್ತದೆಯೇ? ಎಂಬ ಚರ್ಚೆ ನಡೆದಿತ್ತು. ಏಕೆಂದರೆ ಹಿಂದಿನ ಸರ್ಕಾರ ಅವರನ್ನು ನೇಮಿಸಿತ್ತು. ಹೊಸ ಸರ್ಕಾರ ಅವರನ್ನು ಮುಂದುವರೆಯಲು ಬಿಡುತ್ತದೆಯೇ? ಎಂಬ ಬಗ್ಗೆಯೇ ಚರ್ಚೆಯಾಗುತ್ತಿತ್ತು'. [ರಾಜನ್ ನೇಮಕ ಮಾಧ್ಯಮಗಳಿಗೆ ಸಂಬಂಧಿಸಿಲ್ಲ: ಮೋದಿ]

'ಈಗ ನೀವು ನೋಡಿ ರಘುರಾಮ್ ರಾಜನ್ ಅವರು ತಮ್ಮ ಅಧಿಕಾರವನ್ನು ಪೂರ್ಣಗೊಳಿಸಿದ್ದಾರೆ. ರಾಜನ್ ಅವರು ಭಾರತದ ಸೇವೆ ಮಾಡುವವರು. ಅವರ ದೇಶಭಕ್ತಿಯನ್ನು ಪ್ರಶ್ನಿಸುವುದು ತಪ್ಪು. ನಾನು ಅವರ ಕೆಲಸಗಳನ್ನು ಶ್ಲಾಘಿಸುತ್ತೇನೆ' ಎಂದು ಮೋದಿ ಹೇಳಿದರು. [ರಿಸರ್ವ್ ಬ್ಯಾಂಕಿಗೆ ನೂತನ ಗವರ್ನರ್: ರೇಸ್ ನಲ್ಲಿರುವ 6 ಪ್ರಮುಖರು]

ಅರ್ನಬ್ : ಅಮೆರಿಕ ಪಾಕಿಸ್ತಾನಕ್ಕೆ ನೆರವು ನೀಡುತ್ತಿದೆ. ನಾವು ಅಮೆರಿಕವನ್ನು ಹೇಗೆ ನಂಬಬಹುದು?

ಮೋದಿ : ನಾನು ದೇಶದ ಜನರಿಗೆ ಮನವಿ ಮಾಡುತ್ತೇನೆ ಪ್ರತಿಯೊಂದು ಸಂದರ್ಭದಲ್ಲಿಯೂ ನಾವು ಭಾರತವನ್ನು ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡಿ ನೋಡುವುದನ್ನು ಬಿಡಬೇಕು.

ಅರ್ನಬ್ : ಭಾರತ ಪಾಕಿಸ್ತಾನದ ವಿಚಾರದಲ್ಲಿ ಮೃದು ಧೋರಣೆ ಹೊಂದಿದೆಯೇ?

ಭಾರತ ಅಕ್ಕ-ಪಕ್ಕದ ದೇಶಗಳ ಜೊತೆ ಉತ್ತಮ ಸಂಬಂಧವನ್ನು ಬಯಸುತ್ತದೆ. ಅದಕ್ಕಾಗಿಯೇ ನಾವು ಪ್ರಮಾಣ ವಚನ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳನ್ನು ಆಹ್ವಾನಿಸಿದೆವು. ಭಾರತ ಮತ್ತು ಪಾಕ್ ನಡುವಿನ ಸಂಬಂಧದ ಬಗ್ಗೆ ಕಾಗದ ಪತ್ರಗಳ ವ್ಯವಹಾರವೇ ಬೇರೆ, ಗಡಿಯಲ್ಲಿನ ಕಾರ್ಯಗಳೇ ಬೇರೆ. ನಮ್ಮ ಯೋಧರಿಗೆ ಸಂಪೂರ್ಣ ಸ್ವತಂತ್ರ ನೀಡಲಾಗಿದೆ. ಅವರು ಗಡಿಯಲ್ಲಿ ಉತ್ತರ ನೀಡುತ್ತಿದ್ದಾರೆ.

ಆರ್ಥಿಕ ನೀತಿಯ ಬಗ್ಗೆ

ಮೋದಿ : ನಾವು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದಿಂದ ಸ್ಫೂರ್ತಿ ಪಡೆದವರು. ಮಹಾತ್ಮ ಗಾಂಧಿ ಹೇಳುತ್ತಿದ್ದರು. ಬಡವರನ್ನು ಬಡವರಾಗಿ ಇರಲು ಬಿಡಬಾರದು ಅವರನ್ನು ಅಭಿವೃದ್ಧಿ ಕಡೆಗೆ ತರಬೇಕು ಎಂದು. ಒಂದು ಬ್ಯಾಂಕ್ ಒಬ್ಬ ಮಹಿಳೆ, ಒಬ್ಬರು ದಲಿತ, ಒಬ್ಬ ಬಡವರಿಗೆ ಅವರ ಕಾಲ ಮೇಲೆ ನಿಲ್ಲಲು ಸಹಾಯ ಮಾಡಬೇಕು ಎಂಬುದು ನನ್ನ ಉದ್ದೇಶ.

ಅರ್ನಬ್ : ರಾಘುರಾಮ್ ರಾಜನ್ ಅವರು ಹೊರ ಹೋಗುವುದರ ಬಗ್ಗೆ ನಿಮ್ಮ ನಿಲುವು?

ಮೋದಿ : ನಾನು ಅಧಿಕಾರಕ್ಕೆ ಬಂದಾಗ ಹೊಸ ಸರ್ಕಾರ ರಾಘರಾಮ್ ರಾಜನ್ ಇರಲು ಬಿಡುತ್ತದೆಯೇ? ಎಂಬ ಚರ್ಚೆ ನಡೆದಿತ್ತು. ಹಿಂದಿನ ಸರ್ಕಾರ ಅವರನ್ನು ನೇಮಿಸಿದೆ. ಹೊಸ ಸರ್ಕಾರ ಅವರನ್ನು ಮುಂದುವರೆಯಲು ಬಿಡುತ್ತದೆಯೇ? ಎಂಬ ಚರ್ಚೆ ನಡೆದಿತ್ತು. ನೀವು ನೋಡಿ ಅವರು ತಮ್ಮ ಅಧಿಕಾರವನ್ನು ಪೂರ್ಣಗೊಳಿಸಿದ್ದಾರೆ. ರಘುರಾಮ್ ರಾಜನ್ ಭಾರತದ ಸೇವೆ ಮಾಡುವವರು. ಅವರ ದೇಶಭಕ್ತಿಯನ್ನು ಪ್ರಶ್ನಿಸುವುದು ತಪ್ಪು. ಅವರ ನಾನು ಕೆಲಸವನ್ನು ಶ್ಲಾಘಿಸುತ್ತೇನೆ.

ಕಪ್ಪುಹಣದ ವಿಚಾರ : ಈ ದೇಶದ ಸಾಮಾನ್ಯ ಜನರ ಮನಸ್ಸಿನಲ್ಲಿ ಒಂದು ವಿಚಾರವಿದೆ. ಯಾರು ಹಣ ಲೂಟಿ ಹೊಡೆಯುತ್ತಾರೋ ಅವರು ವಿದೇಶದಲ್ಲಿ ಕಪ್ಪು ಹಣ ಇಡುತ್ತಾರೆ ಎನ್ನುವುದು. ಎಸ್‌ಐಟಿ ರಚಿಸುವ ನಿರ್ಧಾರವನ್ನು ನಮ್ಮ ಮೊದಲ ಸಂಪುಟ ಸಭೆಯಲ್ಲಿ ತೆಗೆದುಕೊಂಡೆವು.

ಸಂಸತ್ತಿನಲ್ಲಿ ಚರ್ಚೆಗಳಾಗಬೇಕು : ಸಂಸತ್ತಿನಲ್ಲಿ ಚರ್ಚೆ ಮತ್ತು ನಿರ್ಧಾರಗಳು ಆಗಬೇಕು. ಆದರೆ, ವಿಷಾದದ ಸಂಗತಿ ಎಂದರೆ ಅವರು ಚರ್ಚೆ ಮಾಡದೇ ಓಡಿ ಹೋಗುತ್ತಿದ್ದಾರೆ. ನಾವು ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಿದ್ಧರಾಗಿದ್ದೇವೆ.

ಚುನಾವಣೆಗಾಗಿ ಸರ್ಕಾರವಿಲ್ಲ : ಚುನಾವಣೆಗಾಗಿ ಸರ್ಕಾರವನ್ನು ನಡೆಸಬಾರದು. ಬಡವರ, ಸಾಮಾನ್ಯ ಜನರ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರ ನಡೆಸಬೇಕು. ನಾನು ಹೋದ ಕಡೆಎಲ್ಲಾ ಸರ್ಕಾರದ ಯೋಜನೆ ಬಗ್ಗೆ ಮಾತನಾಡುತ್ತೇನೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡುವುದಿಲ್ಲ.

ಸಂಪೂರ್ಣ ಸಂದರ್ಶನ ಇಂಗ್ಲಿಷ್‌ನಲ್ಲಿ

English summary
Prime minister Narendra Modi interview with Arnab Goswami Editor-in-chief of the Indian news channel Times Now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X