ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾರದಾ ಸ್ಟಿಂಗ್': 13 ಟಿಎಂಸಿ ನಾಯಕರ ಮೇಲೆ ಸಿಬಿಐನಿಂದ ಎಫ್ಐಆರ್

13 ಟಿಎಂಸಿ ನಾಯಕರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಸಂಚು)ಮ ಸೆಕ್ಷನ್ 13(2), 13(1ಡಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7ರ ಅಡಿಯಲ್ಲಿ ಸಿಬಿಐ ಎಫ್ಐಆರ್ ಸಲ್ಲಿಸಿದೆ.

By ವಿಕಾಸ ನಂಜಪ್ಪ
|
Google Oneindia Kannada News

ಕೊಲ್ಕೊತ್ತಾ, ಏಪ್ರಿಲ್ 18: 'ನಾರದಾ ಸ್ಟಿಂಗ್' ಪ್ರಕರಣದಲ್ಲಿ 13 ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ದ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.

13 ಟಿಎಂಸಿ ನಾಯಕರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಸಂಚು)ಮ ಸೆಕ್ಷನ್ 13(2), 13(1ಡಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 7ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 13 ನಾಯಕರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಟಿಎಂಸಿಯಲ್ಲಿ ತಲ್ಲಣ ಶುರುವಾಗಿದೆ. ಆರಂಭದಲ್ಲಿ ನಾರದಾ ಸ್ಟಿಂಗ್ ವಿಡಿಯೋವನ್ನು ಸಿಬಿಐ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ವಿಡಿಯೋ ಅಸಲಿ ಎಂದು ತಿಳಿಯುತ್ತಿದ್ದಂತೆ ಕೇಂದ್ರ ತನಿಖಾ ದಳ ಎಫ್ಐಆರ್ ದಾಖಲಿಸಿದೆ.[ಕಾಶ್ಮೀರದಲ್ಲಿನ್ನು ಸೇನೆಯಿಂದ ಪ್ಲಾಸ್ಟಿಕ್ ಗುಂಡುಗಳ ಬಳಕೆ]

Narada Sting: CBI convinced video is not doctored

ಸಿಬಿಐ ಎಫ್ಐಆರ್ ದಾಖಲಿಸಿದ ನಾಯಕರಲ್ಲಿ ಟಿಎಂಸಿಯ ಮದನ್ ಮಿತ್ರಾ, ಸೌಗಾತಾ ರಾಯ್, ಮುಕುಲ್ ರಾಯ್ ಸೇರಿದಂತೆ ಹಿರಿಯ ನಾಯಕರ ಹೆಸರುಗಳೇ ಇವೆ. ನಾರಾದಾ ಸ್ಟಿಂಗ್ ವಿಡಿಯೋದಲ್ಲಿ ಈ ಎಲ್ಲಾ ಹಿರಿಯ ಟಿಎಂಸಿ ನಾಯಕರು ಹಣ ತೆಗೆದುಕೊಳ್ಳುವ ದೃಶ್ಯಗಳಿವೆ.

ಕೊಲ್ಕೊತ್ತಾ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ.[ಎಐಎಡಿಎಂಕೆ ಚಿನ್ಹೆಗಾಗಿ ಲಂಚ: ಯಾರು ಈ ಚಾಲಾಕಿ ಮಧ್ಯವರ್ತಿ?]

ಏನಿದು 'ನಾರದಾ ಸ್ಟಿಂಗ್'?
ನಾರದಾ ಎನ್ನುವ ಸುದ್ದಿ ವಾಹಿನಿ ಈ ಸ್ಟಿಂಗ್ ಆಪರೇಷನ್ ನಡೆಸಿತ್ತು. 2016 ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಈ ಸ್ಟಿಂಗ್ ಆಪರೇಷನ್ ನಡೆಸಿ ಹಲವು ಚಾನಲ್ ಗಳಲ್ಲಿ ಪ್ರಸಾರವಾಗಿತ್ತು.

ಈ ಕುಟುಕು ಕಾರ್ಯಾಚರಣೆಯಲ್ಲಿ 13 ಟಿಎಂಸಿ ನಾಯಕರು ಲಂಚ ತೆಗೆದುಕೊಳ್ಳುವ ದೃಶ್ಯಗಳಿದ್ದವು. ನಾರದಾ ಚಾನಲ್ ಖೊಟ್ಟಿ ಕಂಪೆನಿಯೊಂದನ್ನು ಸೃಷ್ಟಿಸಿ ಈ ನಾಯಕರ ಬಳಿ ಸಹಾಯ ಕೇಳುವ ನೆಪದಲ್ಲಿ ಹೋಗಿದ್ದರು. ನಂತರ ಲಂಚ ನೀಡಿದ್ದರು. ಇವೆಲ್ಲಾ ವಿಡಿಯೋದಲ್ಲಿ ದಾಖಲಾಗಿತ್ತು.

ಕೊಲ್ಕೊತ್ತಾ ಹೈಕೋರ್ಟ್ ಮಾರ್ಚ್ 17, 2017ರಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. ತನಿಖೆಗೆ ತಡೆ ನೀಡುವಂತೆ ಕೋರಿ ಪಶ್ಚಿಮ ಬಂಗಾಳ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಯಿತಾದರೂ ಅರ್ಜಿ ತಿರಸ್ಕರಿಸಿದ್ದರಿಂದ ತನಿಖೆ ಮುಂದುವರಿದಿದೆ.

English summary
The CBI filed charges against 13 Trinamool Congress persons under Sections 120 B of IPC (criminal conspiracy), Section 13 (2), 13 (1D) and Section 7 of Prevention of Corruption Act
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X