ಉತ್ತರಪ್ರದೇಶದಲ್ಲಿ ಮತ್ತೆರಡು ಪ್ರದೇಶಗಳ ಹೆಸರು ಬದಲಾವಣೆ
ಲಕ್ನೋ, ಡಿಸೆಂಬರ್ 28: ಕೇಂದ್ರ ಗೃಹ ಸಚಿವಾಲಯದಿಂದ ಉತ್ತರಪ್ರದೇಶ ರಾಜ್ಯ ಸರ್ಕಾರ ಅನುಮೋದನೆ ಪಡೆದ ನಂತರ ರಾಜ್ಯದಲ್ಲಿ ಎರಡು ಸ್ಥಳಗಳನ್ನು ಮರುನಾಮಕರಣ ಮಾಡಲು ಸಿದ್ಧವಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದ ಶಿಫಾರಸುಗಳನ್ನು ಅನುಸರಿಸಿ ಪೂರ್ವ ಉತ್ತರಪ್ರದೇಶದಲ್ಲಿರುವ ಗೋರಖ್‌ಪುರದ ಮುನ್ಸಿಪಲ್ ಕೌನ್ಸಿಲ್ ಮತ್ತು ಡಿಯೋರಿಯಾದ ಹಳ್ಳಿಯ ಹೆಸರುಗಳನ್ನು ಬದಲಾಯಿಸಲು ತನ್ನ ಒಪ್ಪಿಗೆ ನೀಡಿದೆ.
ಗೋರಖ್‌ಪುರ ಜಿಲ್ಲೆಯ ಮುಂಡೇರಾ ಬಜಾರ್ ಮುನ್ಸಿಪಲ್ ಕೌನ್ಸಿಲ್ ಅನ್ನು ಚೌರಿ-ಚೌರಾ ಎಂದು ಮತ್ತು ಡಿಯೋರಿಯಾ ಜಿಲ್ಲೆಯ ತೆಲಿಯಾ ಅಫ್ಘಾನ್ ಗ್ರಾಮದ ಹೆಸರನ್ನು ತೆಲಿಯಾ ಶುಕ್ಲಾ ಎಂದು ಬದಲಾಯಿಸಲು ಕೇಂದ್ರ ಗೃಹ ಸಚಿವಾಲಯವು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿ ತಿಳಿಸಿದ್ದಾರೆ.

ಫೆಬ್ರವರಿ 4, 1922ರಂದು ಗೋರಖ್‌ಪುರ ಜಿಲ್ಲೆಯಲ್ಲಿ ನಡೆದ ಚೌರಿ ಚೌರಾ ಘಟನೆಯ 100 ವರ್ಷಗಳ ನೆನಪಿಗಾಗಿ ಮುಂಡೇರಾ ಬಜಾರ್ ಮುನ್ಸಿಪಲ್ ಕೌನ್ಸಿಲ್ ಈಗ ಚೌರಿ ಚೌರಾ ಮುನ್ಸಿಪಲ್ ಕೌನ್ಸಿಲ್ ಆಗಲಿದೆ. ಈ ಪ್ರದೇಶದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಪೊಲೀಸರು ಆಗ ಭಾಗವಹಿಸುತ್ತಿದ್ದ ಪ್ರತಿಭಟನಾಕಾರರ ದೊಡ್ಡ ಗುಂಪಿನ ಮೇಲೆ ಗುಂಡು ಹಾರಿಸಿದ್ದರು
ಏತನ್ಮಧ್ಯೆ ಡಿಯೋರಿಯಾ ಜಿಲ್ಲೆಯ ಸ್ಥಳೀಯ ಮೂಲಗಳ ಪ್ರಕಾರ, ತೆಲಿಯಾ ಅಫ್ಘಾನ್ ಗ್ರಾಮವು ಪೂರ್ವ ಉತ್ತರಪ್ರದೇಶದ ಜಿಲ್ಲೆಯ ಬರ್ಹಾಜ್ ತೆಹ್ಸಿಲ್ ಅಡಿಯಲ್ಲಿ ತೆಲಿಯಾ ಶುಕ್ಲಾ ಗ್ರಾಮವಾಗಿ ಈಗಾಗಲೇ ಜನಪ್ರಿಯವಾಗಿದೆ. ಆದಾಗ್ಯೂ, ಭೂ ಕಂದಾಯ ದಾಖಲೆಗಳಲ್ಲಿ ಇದು ತೆಲಿಯಾ ಆಫ್ಘನ್ ಎಂದು ನೋಂದಾಯಿಸಲ್ಪಟ್ಟಿದೆ. ಅದು ಈಗ ತೆಲಿಯಾ ಶುಕ್ಲಾ ಎಂದು ಬದಲಾಗಲಿದೆ.
ಮೂಲಗಳ ಪ್ರಕಾರ, ರೈಲ್ವೆ ಸಚಿವಾಲಯ, ಅಂಚೆ ಇಲಾಖೆ ಮತ್ತು ಸರ್ವೆ ಆಫ್ ಇಂಡಿಯಾದಿಂದ ಒಪ್ಪಿಗೆ ಪಡೆದ ನಂತರ ಕೇಂದ್ರವು ಯಾವುದೇ ಸ್ಥಳದ ಹೆಸರನ್ನು ಬದಲಾಯಿಸಲು ನಿರಾಕ್ಷೇಪಣೆ ಪ್ರಮಾಣಪತ್ರವನ್ನು ನೀಡುತ್ತದೆ. ಇದಲ್ಲದೆ, ಹಳ್ಳಿಯ ಪಟ್ಟಣ ಅಥವಾ ನಗರದ ಹೆಸರನ್ನು ಬದಲಾಯಿಸಲು, ಕಾರ್ಯನಿರ್ವಾಹಕ ಆದೇಶದ ಅಗತ್ಯವಿರುತ್ತದೆ.

ಈ ಹಿಂದೆ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ತನ್ನ ಮೊದಲ ಅಧಿಕಾರಾವಧಿಯಲ್ಲಿ ಯೋಗಿ ಸರ್ಕಾರವು ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಮತ್ತು ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಬದಲಾಯಿಸಿತ್ತು. ಅಲ್ಲದೆ, ಮೊಘಲ್ಸ್ ರಾಯ್ ಜಂಕ್ಷನ್ ಅನ್ನು ದೀನದಯಾಳ್ ಉಪಾಧ್ಯ ಎಂದು ಮರುನಾಮಕರಣ ಮಾಡಲಾಗಿತ್ತು.












Click it and Unblock the Notifications