ತಾಯ್ನಾಡಿಗಾಗಿ ಸೇನೆಯೊಂದಿಗೆ ಕೈಜೋಡಿಸಲು ನಾಗಾ ಸಾಧುಗಳು ಸಿದ್ಧ: ಅಖಾರ ಪರಿಷತ್
ನವದೆಹಲಿ, ಜೂನ್ 19: "ಗಡಿಯಲ್ಲಿ ಚೀನಾಗೆ ತಕ್ಕ ಪ್ರತ್ಯುತ್ತರವನ್ನು ನೀಡಲು ಲಕ್ಷಾಂತರ ನಾಗಾ ಸನ್ಯಾಸಿಗಳು ಭಾರತೀಯ ಸೇನೆಯೊಂದಿಗೆ ಸೇರಿಕೊಳ್ಳಲು ಹಿಂಜರಿಯುವುದಿಲ್ಲ" ಎಂದು ಸಂತರು ಮತ್ತು ಸಾಧುಗಳ ಅತ್ಯುನ್ನತ ಸಂಘಟನೆಯಾದ ಅಖಿಲ ಭಾರತೀಯ ಅಖಾರ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹೇಳಿದ್ದಾರೆ.
ಗಡಿಯಲ್ಲಿ ಚೀನಾ ನಡೆಸಿದ ದಾಳಿಯನ್ನು ಖಂಡಿಸಿದ ಗಿರಿ, "ಭಾರತೀಯ ಪಡೆಗಳು ಶತ್ರುಗಳಿಗೆ ಸೂಕ್ತವಾದ ಉತ್ತರವನ್ನು ನೀಡಲು ಸಮರ್ಥವಾಗಿವೆ, ಆದರೆ ಅಗತ್ಯಬಿದ್ದಲ್ಲಿ, ಲಕ್ಷಾಂತರ ನಾಗ ಸಾಧುಗಳು ಕೂಡ ತಮ್ಮ ಪಡೆಗಳನ್ನು ಸೇರಿಕೊಂಡು ಮಾತೃಭೂಮಿಯನ್ನು ರಕ್ಷಿಸಬಲ್ಲರು" ಎಂದಿದ್ದಾರೆ.
ಚೀನಾ ವಿರುದ್ಧ ಯುದ್ಧ; ಸರ್ವಪಕ್ಷ ಸಭೆಯಲ್ಲಿ ಸಿಎಂಗಳು ಹೇಳಿದ್ದೇನು?
"ನಾಗಾ ಸಾಧುಗಳು ಶಾಸ್ತ್ರ ಮತ್ತು ಶಸ್ತ್ರಾಸ್ತ್ರ ಎರಡರಲ್ಲೂ ಸಮಾನ ತರಬೇತಿ ಪಡೆದುಕೊಂಡಿದ್ದಾರೆ" ಎಂದು ಹೇಳಿದ ನರೇಂದ್ರ ಗಿರಿ, "ನಾಗ ಸಾಧುಗಳಿಗೆ ಸಮರ ಕಲೆಗಳಲ್ಲಿ ತರಬೇತಿ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.
ತ್ರಿಶೂಲಗಳು, ಕತ್ತಿಗಳು, ಕಬ್ಬು ಮತ್ತು ಈಟಿಗಳನ್ನು ಸಹ ನಾವು ಬಳಸಬಲ್ಲೆವು ಎಂದು ಹೇಳಿರುವ ನರೇಂದ್ರ ಗಿರಿ, "ಮೊಘಲ್ ಆಡಳಿತಗಾರರಿಂದ ಹಿಂದೂಗಳನ್ನು ರಕ್ಷಿಸಲು ತರಬೇತಿ ಪಡೆದ ಸಶಸ್ತ್ರ ಪಡೆಗಳಾಗಿ ನಾಗಾಗಳು ಹಿಂದೆ ಕಾರ್ಯನಿರ್ವಹಿಸುತ್ತಿದ್ದರು" ಎಂದು ಹೇಳಿದ್ದಾರೆ.
ಲಡಾಖ್, ಪ್ರಧಾನಿ ಮೋದಿ ಜೊತೆ ಸರ್ವಪಕ್ಷಗಳ ಸಭೆ: ಪ್ರಶ್ನೆಯ ಸುರಿಮಳೆಗೈದ ಸೋನಿಯಾ ಗಾಂಧಿ
ನಾವುಗಳು ಈ ಹಿಂದೆ ಹಲವಾರು ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದೇವೆ. ಆದರೆ, ಸ್ವಾತಂತ್ರ್ಯದ ನಂತರ ನಾಗ ಸಾಧುಗಳು ಸಶಸ್ತ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಶ್ಯಕತೆಯಿರಲಿಲ್ಲ, ಹಾಗಾಗಿ, ನಾವು ಧರ್ಮ ಶಾಸ್ತ್ರದತ್ತ ಹೊರಳಿದೆವು" ಎನ್ನುವ ವಿವರಣೆಯನ್ನು ನರೇಂದ್ರ ಗಿರಿ ನೀಡಿದ್ದಾರೆ.
ಪೂರ್ವ ಲಡಾಖ್ ಗಡಿ ವಿಚಾರದಲ್ಲಿ ಭಾರತ-ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಸರ್ವಪಕ್ಷಗಳ ಸಭೆ, ಶುಕ್ರವಾರ (ಜೂನ್ 19) ನಡೆದಿದೆ.