ಜೈ ಶ್ರೀರಾಮ್ ಎಂದು ಹೇಳದಿದ್ದಕ್ಕೆ ಮುಸ್ಲಿಂ ಧರ್ಮ ಗುರು ಮೇಲೆ ಹಲ್ಲೆ
ರಾಂಚಿ, ಜೂನ್ 13: 'ಜೈ ಶ್ರೀರಾಮ್' ಎಂದು ಹೇಳದೆ ಇದ್ದಿದ್ದಕ್ಕೆ ಗುಂಪೊಂದು ಜಾರ್ಖಂಡ್‌ನ ರಾಂಚಿಯಲ್ಲಿ ಮುಸ್ಲಿಂ ಧರ್ಮಗುರುವೊಬ್ಬರ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಮಂಗಳವಾರ ಸಂಜೆಯ ಪ್ರಾರ್ಥನೆ ಮುಗಿಸಿಕೊಂಡು ಬರುವ ವೇಳೆ ದುಷ್ಕರ್ಮಿಗಳ ತಂಡವೊಂದು ಅಜರ್ ಉಲ್ ಇಸ್ಲಾಂ ಎಂಬುವವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾಗಿ ಅವರ ತಂದೆ ದೂರಿದ್ದಾರೆ.
'ಬುಧವಾರ ಸಂಜೆ ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಕೆಲವು ಜನರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಆತನಿಗೆ 'ಜೈ ಶ್ರೀರಾಮ್' ಎಂದು ಪಠಿಸುವಂತೆ ಆ ಗುಂಪಿನ ಕೆಲವರು ಒತ್ತಾಯಿಸಿದ್ದರು' ಎಂಬುದಾಗಿ ಅಜತ್ ತಂದೆ ಆರೋಪಿಸಿದ್ದಾರೆ.

ತಲೆ, ಕೈ ಮತ್ತು ದೇಹದ ವಿವಿಧ ಭಾಗಗಳಿಗೆ ಗಾಯವಾಗಿರುವ ಕಾರಣ ಅಜರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಿಯಾಣದ ಕರ್ನಲ್‌ನ ಮಸೀದಿಯೊಂದರಲ್ಲಿ ನಮಾಜ್ ಮಾಡುತ್ತಿದ್ದ ಕೆಲವರ ಮೇಲೆ ಜೂನ್ 1ರಂದು ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿತ್ತು.
ಸುಮಾರು 20-25 ಜನರಿದ್ದ ಗುಂಪು, ಮಸೀದಿಯೊಳಗೆ ಬಂದು ಅದರ ಮೇಲೆ ದಾಳಿ ನಡೆಸಿದರು. ಸ್ಪೀಕರ್‌ಅನ್ನು ಒಡೆದುಹಾಕಿ, ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು ಎಂದು ಹಲ್ಲೆಗೆ ಒಳಗಾದವರು ಆರೋಪಿಸಿದ್ದರು.












Click it and Unblock the Notifications