ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುನುಗೋಡೆ ಉಪಚುನಾವಣೆ ಫಲಿತಾಂಶ 2022: ಬಿಗಿ ಭದ್ರತೆಯಲ್ಲಿ ಮತಗಳ ಎಣಿಕೆ

|
Google Oneindia Kannada News

ಹೈದರಾಬಾದ್‌, ನವೆಂಬರ್‌ 6: ತೆಲಂಗಾಣದ ಮುನುಗೋಡೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಭಾನುವಾರ ನಡೆಯುತ್ತಿದೆ. ಮತ ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಬೆಳಗ್ಗೆ 7.30ಕ್ಕೆ ಚುನಾವಣಾ ವೀಕ್ಷಕರು, ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಪೋಲ್ ಏಜೆಂಟರ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತೆರೆಯಲಾಗಿದೆ.

ನಾಲ್ಕು ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಸಂಚು: ಕೆಸಿಆರ್ ಕಿಡಿನಾಲ್ಕು ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಸಂಚು: ಕೆಸಿಆರ್ ಕಿಡಿ

ಮತ ಎಣಿಕೆಗೆ ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದ್ದು, ಒಳಭಾಗವನ್ನು ಕೇಂದ್ರ ಪಡೆಗಳು ನಿರ್ವಹಿಸುತ್ತಿದ್ದು, ಹೊರ ಎರಡು ಪದರಗಳನ್ನು ರಾಜ್ಯ ಪೊಲೀಸರಿಂದ ಭದ್ರಪಡಿಸಲಾಗಿದೆ.

ನಲ್ಗೊಂಡದ ಅರ್ಜಲಬಾವಿಯಲ್ಲಿರುವ ತೆಲಂಗಾಣ ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮೊದಲ 30 ನಿಮಿಷಗಳ ಅಂಚೆ ಮತ ಎಣಿಕೆಯ ನಂತರ ಇವಿಎಂ ಎಣಿಕೆ ಪ್ರಾರಂಭವಾಗಿದೆ.

ಆಪರೇಷನ್ ಕಮಲ ಆರೋಪ: ವಿಡಿಯೋ ಬಿಡುಗಡೆ ಮಾಡಿದ ತೆಲಂಗಾಣ ಸಿಎಂಆಪರೇಷನ್ ಕಮಲ ಆರೋಪ: ವಿಡಿಯೋ ಬಿಡುಗಡೆ ಮಾಡಿದ ತೆಲಂಗಾಣ ಸಿಎಂ

15 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಪ್ರತಿ ಸುತ್ತಿನ ಎಣಿಕೆಯಲ್ಲಿ, ಚುನಾವಣಾ ವೀಕ್ಷಕರು ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಎರಡು ಮತಗಟ್ಟೆಗಳ ಫಲಿತಾಂಶವನ್ನು ಮರು ಎಣಿಕೆ ಮಾಡಲಾಗುತ್ತದೆ. ಇವಿಎಂ ಎಣಿಕೆ ಪೂರ್ಣಗೊಂಡ ನಂತರ, ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಐದು ಇವಿಪ್ಯಾಟ್‌ ಸ್ಲಿಪ್‌ಗಳ ಕಡ್ಡಾಯ ಎಣಿಕೆಯನ್ನು ಎಣಿಕೆ ಬೂತ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ.

ತೆಲಂಗಾಣದ ಮೂರು ಪ್ರಮುಖ ಪಕ್ಷಗಳಾದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮುನುಗೋಡೆ ವಿಧಾನಸಭಾ ಕ್ಷೇತ್ರದ ಸ್ಪರ್ಧೆ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ 47 ಅಭ್ಯರ್ಥಿಗಳು ಕಣದಲ್ಲಿದ್ದರೆ, ಟಿಆರ್‌ಎಸ್ ಶಾಸಕ ಕುಸುಕುಂಟ್ಲ ಪ್ರಭಾಕರ್ ರೆಡ್ಡಿ, ಬಿಜೆಪಿಯ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಮತ್ತು ಕಾಂಗ್ರೆಸ್ ಪಾಲ್ವಾಯಿ ಸ್ರವಂತಿ ಅವರಿಗೆ ಪೈಪೋಟಿ ಇದೆ.

ಅಧಿಕಾರ ದುರುಪಯೋಗದ ಪರಮಾವಧಿ

ಅಧಿಕಾರ ದುರುಪಯೋಗದ ಪರಮಾವಧಿ

ಈ ಮಧ್ಯೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತದಾರರಿಗೆ ಆಮಿಷವೊಡ್ಡಿ ಹಣದ ಹೊಳೆಯನ್ನು ಹರಿಸಿದರೂ ಮುನುಗೋಡು ಉಪಚುನಾವಣೆಯಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಲಿದೆ. ನ. 3ರಂದು ಮುನುಗೋಡು ವಿಧಾನಸಭಾ ಉಪಚುನಾವಣೆ ನಡೆದಿದ್ದು, ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ನಿರ್ದೇಶನದಂತೆ ಹಲವು ಟಿಆರ್‌ಎಸ್ ಸಚಿವರು, ಶಾಸಕರು, ಸಂಸದರು ಮುನುಗೋಡಿನಲ್ಲಿ ಮೊಕ್ಕಾಂ ಹೂಡಿದ್ದು, ಅಧಿಕಾರ ದುರುಪಯೋಗದ ಪರಮಾವಧಿ ಭಾನುವಾರ ಮತ ಎಣಿಕೆ ನಡೆಯಲಿದೆ ತೆಲಂಗಾಣ ಬಿಜೆಪಿ ನಾಯಕ ಪಿ ಸುಧಾಕರ್ ರೆಡ್ಡಿ ತಿಳಿಸಿದ್ದಾರೆ.

ಮುನುಗೋಡಿನಲ್ಲಿ ಬಿಜೆಪಿ, ಟಿಆರ್‌ಎಸ್ ಬಿರುಸಿನ ಪ್ರಚಾರ

ಮುನುಗೋಡಿನಲ್ಲಿ ಬಿಜೆಪಿ, ಟಿಆರ್‌ಎಸ್ ಬಿರುಸಿನ ಪ್ರಚಾರ

ಮತದಾರರಿಗೆ ಆಮಿಷವೊಡ್ಡಲು ಟಿಆರ್‌ಎಸ್ ಹಣದ ಹೊಳೆ ಹರಿಸುತ್ತಿದ್ದರೂ ಫಲಿತಾಂಶ ನಮ್ಮ ಪರವಾಗಿಯೇ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ರಾಷ್ಟ್ರೀಯ ಪಕ್ಷವಾದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅನ್ನು ಸಿಎಂ ಕೆಸಿಆರ್ ತೇಲಿಬಿಟ್ಟಿದ್ದರಿಂದ ಟಿಆರ್‌ಎಸ್ ಈ ಚುನಾವಣೆಯನ್ನು ಜೀವನ್ಮರಣದ ಪ್ರಶ್ನೆಯಾಗಿ ತೆಗೆದುಕೊಂಡಿದೆ. ಮುನುಗೋಡಿನಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಟಿಆರ್‌ಎಸ್ ಬಿರುಸಿನ ಪ್ರಚಾರ ನಡೆಸಿದ್ದವು.

ಏಳು ಸ್ಥಾನಗಳಿಗೆ ಗುರುವಾರ ಉಪಚುನಾವಣೆ

ಏಳು ಸ್ಥಾನಗಳಿಗೆ ಗುರುವಾರ ಉಪಚುನಾವಣೆ

ನವೆಂಬರ್ 3 ರಂದು ಮತದಾನ ನಡೆದಿದ್ದು, ಇಂದು ಮತ ಎಣಿಕೆ ನಡೆಯುತ್ತಿದೆ. ಚುನಾವಣಾ ಆಯೋಗದ ಟ್ರೆಂಡ್‌ಗಳ ಪ್ರಕಾರ ಆರು ರಾಜ್ಯಗಳಾದ್ಯಂತ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ, ತೆಲಂಗಾಣದ ಮುನುಗೋಡೆ ಕ್ಷೇತ್ರದಲ್ಲಿ ಗುರುವಾರ ಅತಿ ಹೆಚ್ಚು ಮತದಾನವಾಗಿದೆ. ಮಹಾರಾಷ್ಟ್ರ, ಹರಿಯಾಣ, ಬಿಹಾರ, ತೆಲಂಗಾಣ, ಒಡಿಶಾ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಖಾಲಿ ಇರುವ ಏಳು ಸ್ಥಾನಗಳಿಗೆ ಗುರುವಾರ ಉಪಚುನಾವಣೆ ನಡೆಯಿತು.

ಮುನುಗೋಡೆಯಲ್ಲಿ 77.55 ರಷ್ಟು ಮತದಾನ

ಮುನುಗೋಡೆಯಲ್ಲಿ 77.55 ರಷ್ಟು ಮತದಾನ

ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಿತು. ತೆಲಂಗಾಣದ ಮುನುಗೋಡೆಯಲ್ಲಿ 77.55 ರಷ್ಟು ಮತದಾನವಾಗಿದ್ದು ಅತಿ ಹೆಚ್ಚು ಮತದಾನವಾಗಿದೆ. ತೆಲಂಗಾಣದ ಮುನುಗೋಡೆ ವಿಧಾನಸಭಾ ಕ್ಷೇತ್ರದ ಸ್ಪರ್ಧೆಯು ರಾಜ್ಯದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ ಪ್ರಮುಖ ಪಕ್ಷಗಳಿಗೆ ನಿರ್ಣಾಯಕವಾಗಿದೆ.

English summary
The counting of votes for the Munugode assembly constituency in Telangana will be held on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X