Get Updates
Get notified of breaking news, exclusive insights, and must-see stories!

ಮುಂಬೈ- ತಿರುಪತಿ ರೈಲು ಪ್ರವಾಸ ಪ್ಯಾಕೇಜ್ ಆರಂಭ: ಕರ್ನಾಟಕದಲ್ಲಿ ಹಾದು ಹೋಗುವುದೇ ರೈಲು? ಸಮಯ, ಟಿಕೆಟ್ ದರ, ಮಾರ್ಗ ತಿಳಿಯಿರಿ

ತಿರುಪತಿ ಬಾಲಾಜಿ ದರ್ಶನ ಪಡೆಯಲು ಮುಂಬೈನಿಂದ ತಿರುಪತಿ ರೈಲು ಪ್ರವಾಸ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ಪ್ರಾರಂಭಿಸಿದೆ. ಈ ಬಗ್ಗೆ ತಿಳಿಯಿರಿ

ಮುಂಬೈ, ಫೆಬ್ರವರಿ 21: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಮುಂಬೈನ ಭಕ್ತರು ಈಗ ಮತ್ತೊಂದು ಆರಾಮದಾಯಕ ಆಯ್ಕೆಯನ್ನು ಹೊಂದಿದ್ದಾರೆ. ತಿರುಪತಿ ಬಾಲಾಜಿ ದರ್ಶನ ಪಡೆಯಲು ಮುಂಬೈನಿಂದ ತಿರುಪತಿ ರೈಲು ಪ್ರವಾಸ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ಪ್ರಾರಂಭಿಸಿದೆ.

ಹೆಸರಾಂತ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು 'ತಿರುಪತಿ ಬಾಲಾಜಿ ದರ್ಶನ' ಎಂಬ ರೈಲ್ ಟೂರ್ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ನೀಡಿದೆ. ಮುಂಬೈನಿಂದ ಮಾರ್ಚ್ 31 ರ ವರೆಗೆ ಪ್ರತಿದಿನ ರೈಲು ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ರೈಲು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ (LTT) ನಿಂದ ಪ್ರತಿದಿನ ಸಂಜೆ 6:45 ಕ್ಕೆ ಹೊರಡಲಿದೆ. ರೈಲು ಮೂರು ರಾತ್ರಿ ಮತ್ತು ನಾಲ್ಕು ದಿನಗಳ ನಂತರ ಮಧ್ಯಾಹ್ನ 3:40 ಕ್ಕೆ LTT ಅನ್ನು ತಲುಪುತ್ತದೆ.

Mumbai to Tirupati Balaji, IRCTC launches daily rail tour package - check timing, ticket and route

ಥಾಣೆ, ಕಲ್ಯಾಣ್, ಪುಣೆ ಮತ್ತು ಸೊಲ್ಲಾಪುರ - ನಾಲ್ಕು ರೈಲು ನಿಲ್ದಾಣಗಳಲ್ಲಿ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಲಭ್ಯವಿರುತ್ತದೆ.

ಮೊದಲ ದಿನ, ರೈಲು ರಾತ್ರಿಯಲ್ಲಿ ಪ್ರಯಾಣಿಸಲಿದೆ ಮತ್ತು ಎರಡನೇ ದಿನ ಮಧ್ಯಾಹ್ನ 1:30 ಕ್ಕೆ ರೇಣಿಗುಂಟಾ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಪ್ರಯಾಣಿಕರು ಇಲ್ಲಿ ಇಳಿಯುತ್ತಾರೆ ಮತ್ತು ಶ್ರೀ ಕಾಳಹಸ್ತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ರಾತ್ರಿಯ ತಂಗುವಿಕೆಯನ್ನು ಇಲ್ಲಿ ಏರ್ಪಡಿಸಲಾಗುತ್ತದೆ.

ಮೂರನೇ ದಿನ, ಪ್ರಯಾಣಿಕರು ರೇಣಿಗುಂಟದಿಂದ ತಿರುಪತಿ-ಬಾಲಾಜಿ ದರ್ಶನಕ್ಕೆ ತೆರಳುತ್ತಾರೆ. ಪದ್ಮಾವತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ತಂಡವು ರೈಲನ್ನು ಹಿಡಿಯಲು ರಸ್ತೆ ಮೂಲಕ ರೇಣಿಗುಂಟಾ ನಿಲ್ದಾಣಕ್ಕೆ ತೆರಳಲಿದೆ. ರಾತ್ರಿಯ ಪ್ರಯಾಣವನ್ನು ಪೂರ್ಣಗೊಳಿಸಿ, ರೈಲು ಮಧ್ಯಾಹ್ನ 3:40 ಕ್ಕೆ LTT ನಿಲ್ದಾಣವನ್ನು ತಲುಪುತ್ತದೆ.

Mumbai to Tirupati Balaji, IRCTC launches daily rail tour package - check timing, ticket and route

ಸ್ಟ್ಯಾಂಡರ್ಡ್ ಕ್ಲಾಸ್‌ಗೆ ಪ್ಯಾಕೇಜ್ ಚಾರ್ಜ್ ಸಿಂಗಲ್ ಶೇರಿಂಗ್‌ಗೆ ರೂ 9050, ಡಬಲ್‌ ಶೇರಿಂಗ್‌ಗೆ ರೂ 7,390 ಮತ್ತು ಟ್ರಿಪಲ್ ಶೇರಿಂಗ್‌ಗೆ ರೂ 7,290.

ಕಂಫರ್ಟ್ ಕ್ಲಾಸ್‌ಗೆ, ಟಿಕೆಟ್ ದರವು ಸಿಂಗಲ್ ರೂ. 12,100, ಡಬಲ್‌ ರೂ. 10,400 ಮತ್ತು ತ್ರಿಬಲ್‌ ರೂ. 10,300 ಆಗಿರುತ್ತದೆ.

ಪ್ಯಾಕೇಜ್ 12163/12164 (ಚೆನ್ನೈ ಎಕ್ಸ್‌ಪ್ರೆಸ್) ಗಾಗಿ ಟಿಕೆಟ್ ಅನ್ನು ಐಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ನಿಂದ ಮತ್ತು ಮುಂಬೈ, ಪುಣೆ, ನಾಗ್ಪುರ ಮತ್ತು ಕೊಲ್ಲಾಪುರದಲ್ಲಿರುವ ಐಆರ್‌ಸಿಟಿಸಿ ಫೆಸಿಲಿಟೇಶನ್ ಕೇಂದ್ರಗಳಿಂದ ಬುಕ್ ಮಾಡಬಹುದು.

Mumbai to Tirupati Balaji, IRCTC launches daily rail tour package - check timing, ticket and route

ತಿರುಪತಿ ಬೆಟ್ಟದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವು ವಿಷ್ಣುವಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ದೇವಾಲಯದ ಸಂಕೀರ್ಣವು ವಿವಿಧ ಹಿಂದೂ ದೇವತೆಗಳಿಗೆ ಸಮರ್ಪಿತವಾದ ಹಲವಾರು ದೇವಾಲಯಗಳನ್ನು ಸಹ ಒಳಗೊಂಡಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಭೇಟಿ ನೀಡುವ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+