ರೇಪ್ ಮಾಡಿ ವಾಟ್ಸಪ್‌ನಲ್ಲಿ ವಿಡಿಯೋ ಹರಿಬಿಟ್ಟ ಬಾಲಕರು

ಮುಂಬೈ, ನವೆಂಬರ್, 27: 15 ವರ್ಷದ ಬಾಲಕಿಯನ್ನು ಗ್ಯಾಂಗ್ ರೇಪ್ ಮಾಡಿದ್ದ 5 ಜನ ಬಾಲಕರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಅತ್ಯಾಚಾರ ಮಾಡಿದ್ದಲ್ಲದೇ ದೃಶ್ಯಾವಳಿಗಳನ್ನು ವಿಡಿಯೋ ಮಾಡಿ ವಾಟ್ಸಪ್ ನಲ್ಲಿ ಹರಿಯಬಿಟ್ಟಿದ್ದ ದುರುಳ ಬಾಲಕರೀಗ ಪೊಲೀಸರ ವಶದಲ್ಲಿದ್ದಾರೆ.

ಪಶ್ಚಿಮ ಮುಂಬೈನ ಮಲಂದ್ ಪ್ರಾಂತ್ಯ ಇಂಥ ಹೇಯ ಕೃತ್ಯಕ್ಕೆ ಸಾಕ್ಷಿಯಾಗಿದೆ. ಬಂಧಿತರೆಲ್ಲರೂ 10 ನೇ ತರಗತಿ ವಿದ್ಯಾರ್ಥಿಗಳು. ತಂತ್ರಜ್ಞಾನ ಮಕ್ಕಳ ಮನಸ್ಸನ್ನು ಯಾವ ಬಗೆಯಲ್ಲಿ ಕದಡುತ್ತಿದೆ ಎಂಬುದಕ್ಕೆ ಘಟನೆ ಸಾಕ್ಷಿಯಾಗಿ ನಿಲ್ಲುತ್ತಿದೆ.[ಅತ್ಯಾಚಾರದ ರಾಜಧಾನಿಯಾಗುತ್ತಿದೆಯೇ ಕರ್ನಾಟಕ?]

Mumbai: Teen's Gang Rape Comes to Light After Receives Video Clip

ಘಟನೆ ನಡೆದಿದ್ದು ಹೇಗೆ?
ಬಂಧಿತರಲ್ಲಿ ಒಬ್ಬ ಬಾಲಕ ನವೆಂಬರ್ 8 ರಂದು ಬಾಲಕಿಯನ್ನು ತನ್ನ ಮನೆಗೆ ಬರುವಂತೆ ಕೇಳಿಕೊಂಡಿದ್ದಾನೆ. ಒಟ್ಟಿಗೆ ಕುಳಿತು ಸ್ಟಡಿ ಮಾಡಬೇಕು, ಅನೇಕ ವಿಚಾರಗಳನ್ನು ನನಗೆ ತಿಳಿಸಿಕೊಡು ಎಂದು ಹೇಳಿದ್ದಾನೆ. ಇದನ್ನು ನಂಬಿದ ಬಾಲಕಿ ಆತನ ಮನೆಗೆ ಬಂದಾಗ ಮೊದಲೇ ಹಾಜರಿದ್ದ ಇತರ ಬಾಲಕರು ಸೇರಿ ಆಕೆ ಮೇಲೆ ಎರಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕರು ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅತ್ಯಾಚಾರದ ಬಗ್ಗೆ ಎಲ್ಲಿಯಾದರೂ ಹೇಳಿದರೆ ವಿಡಿಯೋವನ್ನು ಹರಿಯ ಬಿಡುತ್ತೇವೆ ಎಂದು ಬಾಲಕಿಯನ್ನು ಬೆದರಿಸಿದ್ದಾರೆ. ತನ್ನ ಚಿಕ್ಕಮ್ಮನ ಮನೆಯಲ್ಲಿದ್ದ ಬಾಲಕಿ ಹುಡುಗರ ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಿ ಯಾವ ವಿಷಯವನ್ನು ಹೇಳಿಕೊಂಡಿಲ್ಲ.[ಹೆಚ್ಚುತ್ತಿರುವ ಅತ್ಯಾಚಾರಕ್ಕೆ ಯಾರು ಕಾರಣ?]

ಆದರೆ ಅತ್ಯಾಚಾರ ಎಸಗಿದ ಹುಡುಗನೊಬ್ಬ ವಿಡಿಯೋವನ್ನು ವಾಟ್ಸಪ್ ಗೆ ಹರಿಯಬಿಟ್ಟಿದ್ದಾನೆ. ವಿಡಿಯೊ ಅದು ಹೇಗೋ ಬಾಲಕಿಯ ಚಿಕ್ಕಮ್ಮನ ಕೈಗೆ ಸಿಕ್ಕಿದೆ. ಆಘಾತಕ್ಕೆ ಒಳಗಾದ ಬಾಲಕಿಯ ಚಿಕ್ಕಮ್ಮ ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ನಡೆದ ಸಂಗತಿ ಗೊತ್ತಾಗಿದೆ. ತಕ್ಷಣ ಬಾಲಕಿಯ ಚಿಕ್ಕಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಅತ್ಯಾಚಾರಗೈದ ಹುಡುಗರನ್ನು ಪೊಲೀಸರು ಬಂಧಿಸಿದ್ದು, ಸಾಮೂಹಿಕ ಅತ್ಯಾಚಾರದ ಆರೋಪದ ಮೇರೆಗೆ ಭಾರತೀಯ ದಂಡ ಸಂಹಿತೆ ಪರಿಚ್ಛೇದ 376 (ಜಿ) ಅಡಿಯಲ್ಲಿ ಮತ್ತು ಪೋಸ್ಕೋ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+